ಡಿಟಿಎಚ್ ಸೇವಾ ಪೂರೈಕೆ ಮಾಡುವ ಕಂಪನಿಗಳಾದ ಟಾಟಾ ಸ್ಕೈ ಮತ್ತು ಏರ್ಟೆಲ್ ಡಿಜಿಟಲ್ ಟಿವಿ ತಮ್ಮ ಬಳಕೆದಾರರಿಗಾಗಿ TRAI NTO 2.0 ಅನ್ನು ಇಂದಿನಿಂದ ಜಾರಿಗೆ ತಂದಿವೆ. ಈ ಹೊಸ ಟ್ಯಾರಿಫ್  ಆದೇಶದ ಅನುಷ್ಠಾನದ ಬಳಿಕ, ಬಳಕೆದಾರರು ಇದೀಗ 200 ಫ್ರೀ ಟು ಏರ್  ಚಾನೆಲ್‌ಗಳ ಲಾಭವನ್ನು ಪಡೆಯಬಹುದಾಗಿದೆ. ಅಲ್ಲದೆ, ಬಳಕೆದಾರರು ಬಹು ಟಿವಿ ಸಂಪರ್ಕಕ್ಕಾಗಿ ಕಡಿಮೆ ಹಣ ಪಾವತಿಸಬೇಕಾಗಲಿದೆ. ಎರಡೂ ಕಂಪನಿಗಳ  ಬಳಕೆದಾರರು ನೆಟ್‌ವರ್ಕ್ ಸಾಮರ್ಥ್ಯ ಶುಲ್ಕವನ್ನು (ಎನ್‌ಸಿಎಫ್) ಹೊಸ ದರದ ಪ್ರಕಾರ ಪಾವತಿಸಬೇಕಾಗಲಿದೆ. ಈ ಹೊಸ ನಿಯಮದ ಅನುಷ್ಠಾನದ ಬಳಿಕ, ಬಳಕೆದಾರರಿಗೆ 153 ರೂ.ಗೆ 200 ಉಚಿತ ಫ್ರೀ ಟು ಏರ್ ಚಾನೆಲ್ ಗಳನ್ನು ನೀಡಲಾಗುತ್ತಿದ್ದು, ಇದು ಮೊದಲಿಗಿಂತ ಎರಡು ಪಟ್ಟು ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಜನವರಿಯಲ್ಲಿಯೇ, ಮಾರ್ಚ್ 1 ರಿಂದ ಎನ್‌ಟಿಒ 2.0 ಅನ್ನು ಕಾರ್ಯಗತಗೊಳಿಸಲು TRAI ಕೇಬಲ್ ಟಿವಿ ಮತ್ತು ಡಿಟಿಎಚ್ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಿತ್ತು. ಸರ್ಕಾರ ಕೈಗೊಂಡ ಈ ನಿರ್ಯಯವನ್ನು DTH ಸೇವೆ ಪೂರೈಕೆ ಮಾಡುವ ಕಂಪನಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಅಷ್ಟೇ ಅಲ್ಲ, ಮಲ್ಟಿ ಟಿವಿ ಬಳಕೆದಾರರು ಹಿಂದಿನದಕ್ಕೆ ಹೋಲಿಸಿದರೆ ಈಗ 40 ಪ್ರತಿಶತದಷ್ಟು ನೆಟ್‌ವರ್ಕ್ ಸಾಮರ್ಥ್ಯದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಹಿಂದೆ, ಟಾಟಾ ಸ್ಕೈ ಬಳಕೆದಾರರು ಮಲ್ಟಿ ಟಿವಿ ಸಂಪರ್ಕಕ್ಕಾಗಿ ಎನ್‌ಸಿಎಫ್ (ನೆಟ್‌ವರ್ಕ್ ಸಾಮರ್ಥ್ಯ ಶುಲ್ಕ) ದಲ್ಲಿ 153 ರೂಗಳನ್ನು ಪೂರ್ಣವಾಗಿ ಪಾವತಿಸಬೇಕಾಗಿತ್ತು. ಆದರೆ, ಇದೀಗ ಎರಡನೇ ಕನೆಕ್ಷನ್ ಗಾಗಿ ಬಳಕೆದಾರರು ಕೇವಲ 61 ರೂಗಳನ್ನು ಮಾತ್ರ ಪಾವತಿಸಬೇಕಾಗಲಿದೆ.


ಇಂದಿನಿಂದ ಜಾರಿಗೆ ತರಲಾದ ಎನ್‌ಟಿಒ 2.0 ಅನ್ನು ಕಳೆದ ವರ್ಷ ಕೇಬಲ್ ಟಿವಿ ಮತ್ತು ಡಿಟಿಎಚ್‌ಗಾಗಿ ಜಾರಿಗೆ ತಂದ ಎನ್‌ಟಿಒ 1.0 ಗೆ ಹೋಲಿಸಿದರೆ ಈ ಬಾರಿ ಟ್ಯಾರಿಫ್ ನಲ್ಲಿ ಭಾರಿ ಬದಲಾವಣೆ ತರಲಾಗಿದೆ. ಹೊಸ ಟ್ಯಾರಿಫ್ ಆದೇಶವನ್ನು ಏರ್ಟೆಲ್ ಡಿಜಿಟಲ್ ಟಿವಿ ಮತ್ತು ಟಾಟಾ ಸ್ಕೈ ಜಾರಿಗೆ ತಂದಿವೆ. ಇತರೆ ಸೇವಾ ಪೂರೈಕೆದಾರರು ಮತ್ತು ಕೇಬಲ್ ಟಿವಿ ಪೂರೈಕೆದಾರರು ಶೀಘ್ರದಲ್ಲೇ ಇದನ್ನು ಕಾರ್ಯಗತಗೊಳಿಸಲಿದ್ದಾರೆ ಎಂದೂ ಕೂಡ ಹೇಳಲಾಗಿದೆ. ಎನ್‌ಟಿಒ 2.0 ನಲ್ಲಿ 200 ಫ್ರೀ ಟು ಏರ್ (ಎಫ್‌ಟಿಎ) ಚಾನೆಲ್‌ಗಳನ್ನು ವೀಕ್ಷಿಸಲು, ಬಳಕೆದಾರರು 153 ರೂ (ಜಿಎಸ್‌ಟಿಯೊಂದಿಗೆ) ಪಾವತಿಸಬೇಕಾಗುತ್ತದೆ. ಬಳಕೆದಾರರು 200 ಕ್ಕೂ ಹೆಚ್ಚು ಎಸ್‌ಡಿ ಚಾನೆಲ್‌ಗಳನ್ನು ಆರಿಸಿದರೆ, ಅವರು 189 ರೂ (ಜಿಎಸ್‌ಟಿಯೊಂದಿಗೆ) ಪಾವತಿಸಬೇಕಾಗುತ್ತದೆ.


ಮಲ್ಟಿ ಟಿವಿ ಸಂಪರ್ಕವನ್ನು ತೆಗೆದುಕೊಳ್ಳುವ ಬಳಕೆದಾರರು ಈಗ ದ್ವಿತೀಯ ಸಂಪರ್ಕಕ್ಕಾಗಿ 200 ಚಾನೆಲ್‌ಗಳಿಗೆ ಪ್ರತಿ ತಿಂಗಳು 62 ರೂ (ಜಿಎಸ್‌ಟಿಯೊಂದಿಗೆ) ಪಾವತಿಸಬೇಕಾಗುತ್ತದೆ. ದ್ವಿತೀಯ ಸಂಪರ್ಕಕ್ಕಾಗಿ 200 ಕ್ಕೂ ಹೆಚ್ಚು ಎಸ್‌ಡಿ ಚಾನೆಲ್‌ಗಳನ್ನು ಆಯ್ಕೆಮಾಡಿದಾಗ, ಏರ್‌ಟೆಲ್ ಬಳಕೆದಾರರು ಹೆಚ್ಚುವರಿ 30 ರೂ. ಮತ್ತು ಟಾಟಾ ಸ್ಕೈ ಬಳಕೆದಾರರು 75.52 ರೂ. ಪಾವತಿಸಬೇಕು.