ನವದೆಹಲಿ: ನಿಮ್ಮ ಬಳಿ ಕೂಡ RuPay ಡೆಬಿಟ್ ಕಾರ್ಡ್ ಇದ್ದರೆ, ಈ ಸುದ್ದಿ ನಿಮಗಾಗಿ ಆಗಿದೆ. ಹೌದು, ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ದೊಡ್ಡ ಹೆಜ್ಜೆ ಇಟ್ಟಿದೆ. RuPay ಡೆಬಿಟ್ ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡಿದರೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಅನ್ನು ಕಡಿತಗೊಳಿಸಲು ಎನ್‌ಪಿಸಿಐ ನಿರ್ಧರಿಸಿದೆ. ಹೊಸ ಎಂಡಿಆರ್ ಅಕ್ಟೋಬರ್ 20 ರಿಂದ ಜಾರಿಗೆ ಬರಲಿದೆ. ಎನ್‌ಪಿಸಿಐನ ಈ ನಿರ್ಧಾರವು ಗ್ರಾಹಕ ಮತ್ತು ಅಂಗಡಿಯವರಿಗೆ ಪ್ರಯೋಜನವನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

2,000 ರೂ.ಗಿಂತ ಹೆಚ್ಚಿನ ವಹಿವಾಟು;
ಎನ್‌ಪಿಸಿಐ ಒದಗಿಸಿದ ಮಾಹಿತಿಯ ಪ್ರಕಾರ, ಎಂಡಿಆರ್ ಅನ್ನು 2,000 ರೂ.ಗಿಂತ ಹೆಚ್ಚಿನ ವಹಿವಾಟಿನ ಮೇಲೆ ಶೇಕಡಾ 0.60 ಕ್ಕೆ ಬದಲಾಯಿಸಲಾಗಿದೆ. ಈಗ ಪ್ರತಿ ವಹಿವಾಟಿಗೆ ಗರಿಷ್ಠ 150 ರೂ. ಪಡೆಯಲಾಗುತ್ತಿದೆ. ಪ್ರಸ್ತುತ, ಇದು 2,000 ರೂ.ಗಿಂತ ಹೆಚ್ಚಿನ ವಹಿವಾಟಿನ ಮೇಲೆ ಶೇಕಡಾ 0.90 ಆಗಿದೆ. ಹೊಸ ದರಗಳು ಭಾರತ್ ಕ್ಯೂಆರ್ ಕೋಡ್ ಆಧಾರಿತ ವ್ಯಾಪಾರಿ ವ್ಯವಹಾರಗಳಿಗೂ ಅನ್ವಯವಾಗುತ್ತವೆ. ಭಾರತ್ ಕ್ಯೂಆರ್ ಮೇಲಿನ ಎಂಡಿಆರ್ ಅಂದರೆ ಕಾರ್ಡ್ ಆಧಾರಿತ ಕ್ಯೂಆರ್ ವಹಿವಾಟನ್ನು ಶೇಕಡಾ 0.50 ಕ್ಕೆ ಇಳಿಸಲಾಗಿದೆ ಮತ್ತು ಎಂಡಿಆರ್ಗೆ ಗರಿಷ್ಠ ಎಂಡಿಆರ್ 150 ರೂ. ಎನ್ನಲಾಗಿದೆ.


ಅಕ್ಟೋಬರ್ 20 ರಿಂದ ನಿಯಮಗಳು ಅನ್ವಯ:
ಡೆಬಿಟ್ ಕಾರ್ಡ್ ವಹಿವಾಟಿನಲ್ಲಿ ಎಲ್ಲಾ ರೀತಿಯ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಗೆ ಈ ರಿಯಾಯಿತಿ ಅನ್ವಯವಾಗುತ್ತದೆ. ಹೊಸ ದರವು 20 ಅಕ್ಟೋಬರ್ 2019 ರಿಂದ ಅನ್ವಯವಾಗಲಿದೆ. ಈ ಬದಲಾವಣೆಯ ನಂತರ, ಎಂಡಿಆರ್ ದರವನ್ನು ಕಡಿಮೆ ಮಾಡುವ ಮೂಲಕ ಮತ್ತು ಗರಿಷ್ಠ ಮಿತಿಯನ್ನು ಕಡಿಮೆ ಮಾಡುವ ಮೂಲಕ, ಡೆಬಿಟ್ ಕಾರ್ಡ್‌ಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಎನ್‌ಪಿಸಿಐ ಹೇಳುತ್ತದೆ.


ಎಂಡಿಆರ್ ಎಂದರೆ ಏನು?
ಎಂಡಿಆರ್ ಎಂದರೆ ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವಾಗ ಅಂಗಡಿಯವರಿಗೆ ನೀಡುವ ಶುಲ್ಕ. ಅಂಗಡಿಯವರು ತೆಗೆದುಕೊಂಡ ಹಣದ ಹೆಚ್ಚಿನ ಭಾಗವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನೀಡುವ ಬ್ಯಾಂಕ್ ಪಡೆಯುತ್ತದೆ. ಈ ಹಣವು ಬ್ಯಾಂಕ್ ಮತ್ತು ಪಿಓಎಸ್ ಯಂತ್ರವನ್ನು ನೀಡಿದ ಕಂಪನಿಗೆ ಸಹ ಹೋಗುತ್ತದೆ.