ತಿರುಪತಿಗೆ ಭೇಟಿ ನೀಡಲು ಬಯಸುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್
Good News For Senior Citizens: ಆಂಧ್ರಪ್ರದೇಶದಲ್ಲಿ ನೂತನವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂದ್ರಬಾಬು ನಾಯ್ಡು (Chandrababu Naidu) ಆಡಳಿತವು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಗಳು) ಅನ್ನು ನವೀಕರಿಸಲು ಕ್ರಮ ಕೈಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಟಿಟಿಡಿಯಿಂದ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ ಹೊರಬಿದ್ದಿದೆ.
Tirupati: ತಿರುಪತಿ ತಿರುಮಲ ದೇವಸ್ಥಾನದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವೊಮ್ಮೆ, ದೇವರ ದರ್ಶನಕ್ಕಾಗಿ 30 ಗಂಟೆಗಳಿಗೂ ಹೆಚ್ಚು ಸಮಯ ಕಾಯಬೇಕಾಗಬಹುದು. ಈ ರೀತಿ ದೀರ್ಘ ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುವುದು ವಿಶೇಷವಾಗಿ ಹಿರಿಯ ನಾಗರಿಕರಿಗೆ (Senior Citizens) ಸವಾಲಿನ ಸಂಗತಿಯಾಗಿದೆ. ಆದರೆ ಇದೀಗ, ಟಿಟಿಡಿಯಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಒಂದು ಲಭಿಸಿದೆ.
ಆಂಧ್ರಪ್ರದೇಶದಲ್ಲಿ ನೂತನವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂದ್ರಬಾಬು ನಾಯ್ಡು (Chandrababu Naidu) ಆಡಳಿತವು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಗಳು) ಅನ್ನು ನವೀಕರಿಸಲು ಕ್ರಮ ಕೈಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಟಿಟಿಡಿಯಿಂದ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ ಹೊರಬಿದ್ದಿದೆ. ವಿಶೇಷವಾಗಿ ಹಿರಿಯ ನಾಗರಿಕರಿಗೆ ವೆಂಕಟೇಶ್ವರ ದೇವರ (Lord Venkateshwara) ಉಚಿತ ದರ್ಶನಕ್ಕಾಗಿ ಎರಡು ವಿಶೇಷ ಸಮಯ ಸ್ಲಾಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದರನ್ವಯ ಮೊದಲನೆಯದಾಗಿ ಬೆಳಿಗ್ಗೆ 10 ಗಂಟೆಗೆ ಮತ್ತು ಇನ್ನೊಂದು ಮಧ್ಯಾಹ್ನ 3 ಗಂಟೆಗೆ ವಿಶೇಷ ಸ್ಲಾಟ್‌ನಲ್ಲಿ ಹಿರಿಯ ನಾಗರೀಕರು ವೆಂಕಟೇಶ್ವರ ದೇವರ ದರ್ಶನ ಪಡೆಯಬಹುದು.
ಇದನ್ನೂ ಓದಿ- ತಿರುಪತಿ ದೇಗುಲದ ಗೋಪುರದ ಮೇಲಿರುವ ವೆಂಕಟೇಶ್ವರ ಸ್ವಾಮಿ ಮೂರ್ತಿ ರಹಸ್ಯ..! ರೋಚಕ ಕತೆ ಇಲ್ಲಿದೆ
ಟಿಟಿಡಿ (TTD) ನೀಡುತ್ತಿರುವ ಈ ಸೌಲಭ್ಯವನ್ನು ಪಡೆಯಲು ಹಿರಿಯರು ತಮ್ಮ ಫೋಟೋ ಗುರುತಿನ (ಆಧಾರ್ ಅಥವಾ ಇತರ ದಾಖಲೆಗಳು) ಜೊತೆಗೆ ವಯಸ್ಸಿನ ಪುರಾವೆಯನ್ನು ಹಾಜರುಪಡಿಸಬೇಕು. ಈ ದಾಖಲೆಗಳನ್ನು S-1 ಕೌಂಟರ್‌ನಲ್ಲಿ ಸಲ್ಲಿಸಬೇಕು. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಹಿರಿಯ ನಾಗರೀಕರು ಸರತಿ ಸಾಲಿನಲ್ಲಿ ದೂರದ ಪ್ರಯಾಣ ಮಾಡಬೇಕಾಗಿಲ್ಲ. ಅವರು ಯಾವುದೇ ಮೆಟ್ಟಿಲುಗಳನ್ನು ಹತ್ತದೆ ಸೇತುವೆಯ ಕೆಳಗಿರುವ ಗ್ಯಾಲರಿಯ ಮೂಲಕ ಪ್ರವೇಶಿಸಬಹುದು ಎಂದು ಹೇಳಲಾಗಿದೆ.
ಇನ್ನೂ ಹಿರಿಯ ನಾಗರೀಕರಿಗಾಗಿ ಘೋಷಿಸಲಾಗಿರುವ ಈ ವಿಶೇಷ ಸ್ಲಾಟ್‌ಗಳ (Special Darshan Slots) ಸಮಯದಲ್ಲಿ ಎಲ್ಲಾ ಇತರ ಸರತಿ ಸಾಲುಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ, ಹಿರಿಯ ನಾಗರೀಕರು ಯಾವುದೇ ಒತ್ತಡವಿಲ್ಲದೆ ಆರಾಮದಾಯಕವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ.
ಇದನ್ನೂ ಓದಿ- ನೀತಾ ಅಂಬಾನಿಯ ಈ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ? ಅದು ಕೇವಲ 178 ರೂಪಾಯಿಗೆ ಸಿಗುತ್ತದಂತೆ !!
ತಿರುಪತಿಗೆ ಭೇಟಿ ನೀಡುವ ಹಿರಿಯ ನಾಗರೀಕರಿಗೆ ಲಭ್ಯವಾಗಲಿರುವ ಸೌಲಭ್ಯಗಳು:
* ತಿರುಪತಿಗೆ ಭೇಟಿ ನೀಡುವ ಹಿರಿಯ ನಾಗರೀಕರಿಗೆ ಆರಾಮದಾಯಕ ಆಸನಗಳನ್ನು ಒದಗಿಸಲಾಗುವುದು.
* ಸರತಿ ಸಾಲಿನಲ್ಲಿ ಹಿರಿಯರಿಗೆ ಬಿಸಿಬಿಸಿ ಸಾಂಬಾರ್ ಅನ್ನ, ಮೊಸರು ಅನ್ನ, ಬಿಸಿ ಹಾಲು ನೀಡಲಾಗುವುದು.
* ಈ ಎಲ್ಲಾ ಸೇವೆಗಳು ವೃದ್ಧರಿಗೆ ಉಚಿತವಾಗಿರುತ್ತದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
* ಇದಲ್ಲದೆ, ಹಿರಿಯ ನಾಗರೀಕರಿಗೆ ಎರಡು ಲಡ್ಡುಗಳನ್ನು ಅತ್ಯಲ್ಪ ಬೆಲೆಗೆ 20 ರೂ.ಗಳಿಗೆ ನೀಡಲಾಗುವುದು.
* ಹೆಚ್ಚುವರಿ ಲಡ್ಡುಗಳ ಅಗತ್ಯವಿದ್ದರೆ, ಪ್ರತಿಯೊಂದಕ್ಕೆ 25 ರೂ.ಗಳನ್ನು ಪಾವತಿಸಬೇಕಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ, ಟಿಟಿಡಿ ವಿಶೇಷ ಸಹಾಯವಾಣಿ ಸಂಖ್ಯೆ 08772277777 ಅನ್ನು ಲಭ್ಯಗೊಳಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.