ನವದೆಹಲಿ: ಇಂದು ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಂತಸದ ಸುದ್ದಿಯೊಂದು ನೀಡಿದೆ. ಹಾಗಾದ್ರೆ ಏನಂತೀರಾ? ಕೇಂದ್ರ ಸರ್ಕಾರವು ಇನ್ನು ಮುಂದೆ  ದೇಶದ ಎಲ್ಲ ಮಹಿಳೆಯರಿಗೆ ಕಡಿಮೆ ದರದಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನು ಜನೌಷಧಿ ಕೇಂದ್ರಗಳಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್ "ಇಂದಿನಿಂದ ದೇಶದ 3200 ಜನೋಷಧಿ ಕೇಂದ್ರಗಳಲ್ಲಿ 2.50 ರೂಪಾಯಿಗೆ ಒಂದು ಸ್ಯಾನಟರಿ ಪ್ಯಾಡ್ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ,ಇವು ಪರಿಸರ ಸ್ನೇಹಿಯಾಗಿದ್ದು ಮಣ್ಣಿನಲ್ಲಿಯೂ ಸಹ ಕರಗುತ್ತವೆ" ಎಂದು ತಿಳಿಸಿದರು.