ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯ ರೈಲ್ವೆ ಮಂಡಳಿಯು ದೇಶದ 100 ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ದರ್ಜೆಯ (GS) ಕೋಚ್‌ಗಳ ಬಳಿ ಕಡಿಮೆ ದರಲ್ಲಿ ಉತ್ತಮ ಆಹಾರ ನೀಡುವ ಕೌಂಟರ್‌ಗಳನ್ನು ತೆರೆದಿದ್ದು, ಇದರಲ್ಲಿ ರಾಜ್ಯದ 7 ನಿಲ್ದಾಣಗಳು ಸೇರಿವೆ.


COMMERCIAL BREAK
SCROLL TO CONTINUE READING

ದಕ್ಷಿಣ ರೈಲ್ವೆ ವ್ಯಾಪ್ತಿಯ ಮಂಗಳೂರು ಸೆಂಟ್ರಲ್‌ ಮತ್ತು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಗಳು, ನೈರುತ್ಯ ರೈಲ್ವೆ ವ್ಯಾಪ್ತಿಯ KSR ಬೆಂಗಳೂರು, ಯಶವಂತಪುರ, ಮೈಸೂರು, ವಿಜಯಪುರ ಮತ್ತು ಬಳ್ಳಾರಿ ನಿಲ್ದಾಣಗಳಲ್ಲಿ ಕೌಂಟರ್‌ ತೆರೆಯಲಾಗಿದೆ. ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ.


ಇದನ್ನೂ ಓದಿ: Daily GK Quiz: ಯಾವ ದೇಶವು ಹೆಚ್ಚು ಒಲಂಪಿಕ್ ಗೇಮ್ಸ್ ಚಿನ್ನದ ಪದಕಗಳನ್ನು ಗೆದ್ದಿದೆ?‌


ಇಂಡಿಯನ್ ರೈಲ್ವೇಸ್‌ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಶನ್ (IRCTC) ಮತ್ತು ಭಾರತೀಯ ರೈಲ್ವೆ ಜಂಟಿಯಾಗಿ ಈ ಯೋಜನೆ ರೂಪಿಸಿದೆ. ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ ಬೇಸಿಗೆ ಕಾಲದಲ್ಲಿ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಊಟ ಮತ್ತು ತಿಂಡಿ ನೀಡುವ ಹೊಸ ಉಪಕ್ರಮ ಇದಾಗಿದೆ.


ʼಜನತಾ ಊಟ' ಎಂದು ನಿಲ್ದಾಣಗಳಲ್ಲಿ ಅಡುಗೆ ಮಳಿಗೆಗಳಲ್ಲಿ ಕಡಿಮೆ ದರದಲ್ಲಿ ಆಹಾರ ಒದಗಿಸಲಾಗಿತ್ತು. ಇದೀಗ ಪ್ಲಾಟ್‌ಫಾರಂನಲ್ಲೇ ಕೌಂಟರ್ ತೆರೆಯಲಾಗಿದೆ. 100 ರೈಲ್ವೆ ನಿಲ್ದಾಣಗಳ 150 ಪ್ಲಾಟ್‌ಫಾರಂಗಳಲ್ಲಿ ಊಟ ಮತ್ತು ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಕೇವಲ 20 ರೂ.ಗೆ ಉಪಾಹಾರ, 50 ರೂ.ಗೆ ಲಘು ಊಟ, 3 ರೂ.ಗೆ 200ML ನೀರು ನೀಡಲಾಗುತ್ತಿದೆ.


ಇದನ್ನೂ ಓದಿ: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ: ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್ ಜಾರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.