Sabarimala pilgrims: ಶಬರಿಮಲೆ ಯಾತ್ರಾರ್ಥಿಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಇನ್ಮುಂದೆ ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ ʼಇರುಮುಡಿʼ ಸಾಗಿಸಲು ಅಸ್ತು ಎಂದು ಎಂದಿದೆ. ಹೌದು, ಕೇರಳದ ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಯಾತ್ರಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ ʼಇರುಮುಡಿʼಯನ್ನು ಸಾಗಿಸಬಹುದು ಅಂತಾ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಶನಿವಾರ ಮಾಹಿತಿ ಹಂಚಿಕೊಂಡಿರುವ ಅವರು, ನವೆಂಬರ್ ಮಧ್ಯದಿಂದ ಜನವರಿಯ ಕೊನೆಯವರೆಗೆ ಶಬರಿಮಲೆಗೆ ಯಾತ್ರಾರ್ಥಿಗಳು ತೆರಳುತ್ತಾರೆ. 2025ರ ಜನವರಿ 20ರವರೆಗೆ ಯತಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಪ್ರಯಾಣಿಸಬಹುದು. ಈ ಸೀಮಿತ ಅವಧಿಯಲ್ಲಿ ಮಾತ್ರ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ ಅಂತಾ ತಿಳಿಸಿದ್ದಾರೆ.


ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಸೈಬರ್‌ ಕ್ರೈಂ ಬಗ್ಗೆ ಮಾತು


ಸದ್ಯದ ನಿಯಮಗಳ ಪ್ರಕಾರ ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅನುಮತಿಯಿಲ್ಲ. ಶಬರಿಮಲೆಗೆ ಹೋಗುವವರಿಗೆ ಯಾತ್ರೆ ಸುಲಭವಾಗಲಿ ಅನ್ನೋ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಯ ಅವಧಿಯಲ್ಲಿ ʼಇರುಮುಡಿʼಯಲ್ಲಿ ತೆಂಗಿನಕಾಯಿ ಸಾಗಿಸಲು ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.


ನಾನೇ ಅಭ್ಯರ್ಥಿ ಎಂದು ತಿಳಿದು ಭರತ್ ನನ್ನು ಗೆಲ್ಲಿಸಿ: ಬಸವರಾಜ ಬೊಮ್ಮಾಯಿ


ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ. ಜೊತೆಗೆ ʼಇರುಮುಡಿ ಕೆಟ್ಟುʼ (ತುಪ್ಪ ತುಂಬಿದ ತೆಂಗಿನಕಾಯಿ ಸೇರಿದಂತೆ ಅರ್ಪಣೆಗಳನ್ನು ಹೊಂದಿರುವ ಪವಿತ್ರ ಚೀಲ). ಶಬರಿಮಲೆಗೆ ಯಾತ್ರೆ ಕೈಗೊಳ್ಳುವವರು ʼಕೆಟ್ಟುನಿರಕಲ್ʼ ಆಚರಣೆಯ ಭಾಗವಾಗಿ ʼಇರುಮುಡಿ ಕೆಟ್ಟುʼ ಸಿದ್ಧಪಡಿಸುತ್ತಾರೆ. ಆಚರಣೆ ಸಮಯದಲ್ಲಿ ತೆಂಗಿನಕಾಯಿಯೊಳಗೆ ತುಪ್ಪ ತುಂಬಿಸಲಾಗುತ್ತದೆ. ನಂತರ ಅದನ್ನು ಇತರ ನೈವೇದ್ಯಗಳೊಂದಿಗೆ ಚೀಲದಲ್ಲಿ ಇರಿಸಲಾಗುತ್ತದೆ. ತೀರ್ಥಯಾತ್ರೆಯ ಸಮಯದಲ್ಲಿ ವಿವಿಧ ಪವಿತ್ರ ಸ್ಥಳಗಳಲ್ಲಿ ಒಡೆಯಲು ಹೆಚ್ಚಿನ ತೆಂಗಿನಕಾಯಿಗಳನ್ನು ಇರಿಸಿರಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.