ಉರ್ದು ಮತ್ತು ಪರ್ಶಿಯನ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿರುವ ಸುಪ್ರಸಿದ್ಧ ಕವಿ ಮಿರ್ಜಾ ಗಾಲಿಬ್ ಅವರ 220ನೇ ಜನಮ ದಿಂದ ಅಂಗವಾಗಿ ಇಂದು ಗೂಗಲ್ ತನ್ನ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. 


COMMERCIAL BREAK
SCROLL TO CONTINUE READING

1797ರ ಡಿಸೆಂಬರ್‌ 27ರಂದು ಜನಿಸಿದ ಗಾಲಿಬ್‌ ಅವರ ಪೂರ್ಣ ಹೆಸರು ಮಿರ್ಜಾ ಅಸದುಲ್ಲಾಹ್ ಬೇಗ್ ಖಾನ್ ಅಲಿಯಾಸ್ ಮಿರ್ಜಾ ನವ್ಷಾಹ್. ಗಾಲಿಬ್ ಎನ್ನುವುದು ಅವರ ಕಾವ್ಯನಾಮ. ಕೊನೆಯ ಮೊಗಲ್ ಚಕ್ರವರ್ತಿ ಬಹಾದುರ್ ಷಾ ಜಾಫರ್ ಈತನಿಗೆ ನಜ್ಮುದ್ ದೌಲ, ದಬೀರ್-ಉಲ್-ಮುಲ್ಕ, ನಿಜಾಮ್ ಜಂಗ್ ಬಹಾದೂರ್-ಎಂಬ ಬಿರುದುಗಳನ್ನು ಕೊಟ್ಟಿದ್ದರು ಎನ್ನಲಾಗಿದೆ. 



ಗಾಲಿಬ್‌ 11ನೇ ವರ್ಷದಿಂದಲೇ ಕಾವ್ಯ ರಚನೆಯಲ್ಲಿ ತೊಡಗಿದ್ದರೆಂಬ ಉಲ್ಲೇಖಗಳಿದ್ದು, ಭಾರತದಲ್ಲಿ ಮೊಘಲರ ಆಳ್ವಿಕೆ ಕೊನೆಗೊಂಡು ಬ್ರಿಟಿಷರ ಆಡಳಿತ ಜಾರಿಗೆ ಬರುತ್ತಿದ್ದ ಕಾಲದಲ್ಲಿ ಗಾಲಿಬ್‌ ಕಾವ್ಯ ರಚನೆಯಲ್ಲಿ ತೊಡಗಿದ್ದರು.


ಉರ್ದು ಕವಿತೆಗಳು ಇವರಿಗೆ ಉರ್ದು ಸಾಹಿತ್ಯದಲ್ಲಿ ಮಹಾಕವಿಯ ಸ್ಥಾನವನ್ನು ಗಳಿಸಿಕೊಟ್ಟಿವೆ. ಅಷ್ಟೇ ಅಲ್ಲ, ಈತನ ಹಿರಿಮೆ ಮತ್ತು ಖ್ಯಾತಿ ಇತರ ಕವಿಗಳ ಖ್ಯಾತಿಯನ್ನು ನುಂಗಿ ನೀರು ಕುಡಿದುಬಿಟ್ಟಿವೆ. ತನ್ನ ಸೃಜನಾತ್ಮಕ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸಲು ಇವರು ತನ್ನದೇ ಆದ ಶೈಲಿಯೊಂದನ್ನು ಸೃಷ್ಟಿಸಿದ್ದರು. ಈ ಶೈಲಿ ಅನನುಕರಣೀಯವಾಗಿದ್ದು ಈತನೊಂದಿಗೇ ಕೊನೆಗೊಂಡಿತು. 


ಗಾಲಿಬ್‌ 1869ರ ಫೆಬ್ರುವರಿ 15ರಂದು ದೆಹಲಿಯಲ್ಲಿ ನಿಧನರಾದರು. ಗಾಲಿಬ್‌ ಗಝಲ್‌ಗಳು ಹಲವು ಭಾಷೆಗಳಿಗೆ ಅನುವಾದಗೊಂಡು ಇಂದಿಗೂ ಜನಪ್ರಿಯವಾಗಿವೆ.