ನವದೆಹಲಿ: ಭಾರತದ ಲೆಜೆಂಡರಿ ನಟಿ ಹಾಗೂ ಚಿತ್ರರಂಗದ 'ದುರಂತ ನಾಯಕಿ' ಮೀನಾ ಕುಮಾರಿ ಅವರ 85ನೇ ಜನ್ಮದಿಂದ ಅಂಗವಾಗಿ ಬುಧವಾರ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ. 


COMMERCIAL BREAK
SCROLL TO CONTINUE READING

ಆಗಸ್ಟ್ 1, 1933ರಲ್ಲಿ ಮಹಾಜಬಿನಾ ಬಾನು ಆಗಿ ಪರ್ಷಿಯಾದ ಅಲಿ ಭಕ್ಷ್ ಹಾಗೂ ಇಕ್ಬಾಲ್ ದಂಪತಿಯ ಮೂರನೇ ಪುತ್ರಿಯಾಗಿ ಜನಿಸಿದರು. ಕಲಾವಿದರ ಕುಟುಂಬವಾಗಿದ್ದರಿಂದ ಕಲೆ, ಅಭಿನಯ ರಕ್ತದಲ್ಲೇ ಬಂದು ಹೋಗಿತ್ತು. ತಮ್ಮ 4 ನೇ ವಯಸ್ಸಿಗೆ ಸಿನಿಮಾ ಜಗತ್ತು ಪ್ರವೇಶಿಸಿದರು. ನಂತರ ಬಾಲಿವುಡ್ ಇವರನ್ನು ಮೀನಾ ಕುಮಾರಿ ಎಂದು ಜನರಿಗೆ ಪರಿಚಯಿಸಿತು. 


ದುನಿಯಾ ಏಕ್ ಸರಾಯಿ, ಪಿಯಾ ಘರ್ ಆಜ, ವೀರ್ ಘಟೋತ್ಕಜ, ಮಧೋಶ್ ಸೇರಿದಂತೆ ಸಾಕಷ್ಟು ಚಿತ್ರಗಳು ಇವರಿಗೆ ಹೆಸರು ತಂದು ಕೊಟ್ಟಿತು. ಪರಿಣಿತಾ, ದೀರಾ, ಏಕ್ ಹೀ ರಾಸ್ತಾ, ಶಾರದಾ, ದಿಲ್ ಅಪನಾ, ಪಾಕಿಜಾ ಮೊದಲಾದ ಚಿತ್ರಗಳು ಇವರನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದವು. ಅತ್ಯುತ್ತಮ ನಟಿ ವಿಭಾಗದಲ್ಲಿ ನಾಲ್ಕು ಫಿಲಂ ಫೇರ್ ಅವಾರ್ಡ್ ಗಳನ್ನು ಒಂದೇ ಬಾರಿಗೆ ಗಳಿಸಿ ಇತಿಹಾಸ ನಿರ್ಮಿಸಿದರು. ಚಿತ್ರರಂಗದ ರಾಣಿಯಾಗಿ ಮೆರೆದ ಮೀನಾ ಕುಮಾರಿಯ ದುರಂತ ಎಂದರೆ ತೆರೆ ಮೇಲಿನಷ್ಟು ವರ್ಣ ರಂಜಿತ ಬದುಕು ಅವರ ವೈಯಕ್ತಿಕ ಜೀವನದಲ್ಲಿ ಇರಲಿಲ್ಲ. ದುರಂತ ನಾಯಕಿಯಾಗೇ ಮೀನಾ ಕುಮಾರಿ ಕೇವಲ 1972ರಲ್ಲಿ ತಮ್ಮ 39ರ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರು.