ಲಾಕ್ ಡೌನ್ ಅವಧಿಯಲ್ಲಿ ಬಹುತೇಕ ಜನರು ತಮ್ಮ ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ಇಂಟರ್ನೆಟ್ ಅವಲಂಬನೆ ಹೆಚ್ಚಾಗಿದೆ. ಇದು ಅಪಾಯವನ್ನೂ ಕೂಡ ಹೆಚ್ಚಿಸಿದೆ. ಈ ಅವಧಿಯಲ್ಲಿ ಸೈಬರ್ ದಾಳಿಗಳ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಸಾಕಷ್ಟು ಆನ್‌ಲೈನ್ ವರದಿಗಳು ಹೇಳುತ್ತಿವೆ. ಇಂತಹುದರಲ್ಲಿ ನಿಮ್ಮ ಪಾಸ್‌ವರ್ಡ್ ಮತ್ತು ಖಾತೆಯನ್ನು ರಕ್ಷಿಸಬಹುದಾದಂತಹ 10 ಸಲಹೆಗಳನ್ನು Google ನೀಡಿದೆ.


COMMERCIAL BREAK
SCROLL TO CONTINUE READING

ನಿಮ್ಮ ಪಾಸ್ವರ್ಡ್ ಆದಷ್ಟು ಉದ್ದವಾಗಿರಲಿ
ಗೂಗಲ್ ಪ್ರಕಾರ, ಬಳಕೆದಾರರು ಕನಿಷ್ಠ 8 ಅಕ್ಷರಗಳ ಪಾಸ್‌ವರ್ಡ್ ರಚಿಸಬೇಕು. ಈ ಪಾಸ್‌ವರ್ಡ್‌ನಲ್ಲಿ ವಿವಿಧ ರೀತಿಯ ಅಕ್ಷರಗಳ ಸಂಯೋಜನೆ ಇರಬೇಕು. ಇದು ಪಾಸ್‌ವರ್ಡ್ ಅನ್ನು 'ಸ್ಟ್ರಾಂಗ್' ಮಾಡುತ್ತದೆ. ಈ ಸಂಯೋಜನೆಯು ಸ್ಮಾಲ್ ಮತ್ತು ಕ್ಯಾಪಿಟಲ್ ಅಕ್ಷರಗಳು, ಸಂಖ್ಯೆ ಹಾಗೂ ಚಿಹ್ನೆಗಳನ್ನು ಒಳಗೊಂಡಿರಬೇಕು.


ಬೇರೆ ಬೇರೆ ಪಾಸ್ವರ್ಡ್ ಗಳನ್ನು ಬಳಸಿ
ಬಳಕೆದಾರರು ತಮ್ಮ ಪ್ರಮುಖ ಖಾತೆಗಳಿಗಾಗಿ ವಿಭಿನ್ನ ಪಾಸ್‌ವರ್ಡ್‌ಗಳನ್ನು ರಚಿಸಬೇಕು ಎಂದು ಗೂಗಲ್ ಹೇಳುತ್ತದೆ.


ಪಾಸ್ವರ್ಡ್ ಕ್ರಿಯೇಟಿವ್ ಆಗಿರಲಿ
ಗೂಗಲ್ ಪ್ರಕಾರ, ಸುಲಭವಾಗಿ ಗುರುತಿಸಬಹುದಾದಂತಹ ಅಂಶಗಳನ್ನು ಪಾಸ್‌ವರ್ಡ್‌ ತಯಾರಿಕೆಗೆ ಬಳಸಬಾರದು. ಉದಾಹರಣೆಗೆ, ಪಾಸ್‌ವರ್ಡ್ ನಲ್ಲಿ ಅಡ್ಡ ಹೆಸರು, ನಿಮ್ಮ ಶಾಲೆಯ ಹೆಸರು, ನಿಮ್ಮ ನೆಚ್ಚಿನ ಕ್ರೀಡಾ ತಂಡದ ಹೆಸರು ಇತ್ಯಾದಿಗಳನ್ನು ಬಳಸಬಾರದು.


ಪಾಸ್ವರ್ಡ್ ನಲ್ಲಿ ಖಾಸಗಿ ಸಂಗತಿಗಳನ್ನು ಬಳಸಬಾರರು
ಪಾಸ್ವರ್ಡ್ ರಚಿಸುವಲ್ಲಿ ಹೆಸರು, ಇಮೇಲ್, ಫೋನ್ ಸಂಖ್ಯೆ ಮುಂತಾದ ವೈಯಕ್ತಿಕ ವಿಷಯಗಳನ್ನು ಬಳಸಬಾರದು ಎಂದು ಗೂಗಲ್ ಹೇಳುತ್ತದೆ.


ಆಗಾಗ ನಿಮ್ಮ ಪಾಸ್ವರ್ಡ್ ಅನ್ನು ಬದಲಾಯಿಸಿ
ನಿಮ್ಮ ಪಾಸ್‌ವರ್ಡ್ ಅನ್ನು ಕಾಲಕಾಲಕ್ಕೆ ಬದಲಾಯಿಸಬೇಕು. ವಿಶ್ವಾಸಾರ್ಹ ವ್ಯಕ್ತಿಯನ್ನು ಹೊರತುಪಡಿಸಿ ಬೇರೊಬ್ಬರು ಕಂಡುಹಿಡಿದಿದ್ದಾರೆ ಎಂದು ನೀವು ಭಾವಿಸಿದರೆ ಈ ಸಲಹೆ ಇನ್ನಷ್ಟು ಪ್ರಮುಖವಾಗಿರಲಿದೆ 


ರಿಕವರಿ ಫೋನ್ ನಂಬರ್ ಹಾಗೂ ಇ-ಮೇಲ್ ಸೆಟ್ ಮಾಡಿ
ನಿಮ್ಮ ಖಾತೆಯಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ನಿಮ್ಮ ಗಮನಕ್ಕೆ ಬಂದರೆ ಹಾಗೂ ನಿಮ್ಮ ಖಾತೆಯನ್ನು ಇತರರು ಬಳಸದಂತೆ ನಿರ್ಬಂಧಿಸಲು ನೀವು ಬಯಸುತ್ತಿದ್ದರೆ, ರಿಕವರಿ ಮೆಥೆಡ್ ನಿಮಗೆ ಸಹಾಯ ಮಾಡಲಿದೆ.ಇದರ ಮೂಲಕ ಒಂದು ವೇಳೆ ನೀವು ನಿಮ್ಮ ಖಾತೆಗೆ ಅಕ್ಸಸ್ ಕಳೆದುಕೊಂಡಾಗಲೂ ಕೂಡ ನೀವು ಸುಲಭವಾಗಿ ಸೈನ್ ಇನ್ ಮಾಡಬಹುದು.


ನಿಮ್ಮ ಖಾತೆಗೆ ಯುನಿಕ್ ಅಥವಾ ವಿಶಿಷ್ಟವಾದ ಪಾಸ್ವರ್ಡ್ ತಯಾರಿಸಿ 
ಬಳಕೆದಾರರು ಮೇಲೆ ಹೇಳಿರುವ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಬಲವಾದ ಮತ್ತು ವಿಶಿಷ್ಟವಾದ ಪಾಸ್‌ವರ್ಡ್ ಅನ್ನು ರಚಿಸಬೇಕು. ಆದರೂ ಕೂಡ ಅನೇಕ ಪಾಸ್‌ವರ್ಡ್‌ಗಳನ್ನು ನಿರ್ವಹಿಸುವುದು ಕಷ್ಟ. ಎಂದಾದಲ್ಲಿ ನಿಮ್ಮ ಎಲ್ಲಾ ಪಾಸ್‌ವರ್ಡ್‌ಗಳನ್ನು ಟ್ರ್ಯಾಕ್ ಮಾಡಲು ಪಾಸ್‌ವರ್ಡ್ ನಿರ್ವಾಹಕವನ್ನು ಬಳಸಬಹುದು ಎಂದು ಗೂಗಲ್ ಸಲಹೆ ನೀಡಿದೆ.ಅವುಗಳನ್ನು ನೀವು ನಿಮ್ಮ ಡೈರಿಯಲ್ಲಿಯೂ ಕೂಡ ಬರೆದಿಡಬಹುದು. ಕಾರಣ ಹ್ಯಾಕರ್‌ಗಳು ಸಾಮಾನ್ಯವಾಗಿ ಆನ್‌ಲೈನ್‌ಗೆ ಮೊರೆ ಹೋಗುತ್ತಾರೆ.


ಎರಡು ಹಂತಗಳ ದೃಡೀಕರಣ ಬಳಸಿ
ಎರಡು-ಅಂಶ ದೃಡೀಕರಣ (2 ಎಫ್ಎ) ದ ಸಹಾಯದಿಂದ ನೀವು ನಿಮ್ಮ ಖಾತೆಯನ್ನು ಬೆರೊಬ್ಬರು ದುರ್ಬಳಕೆ ಮಾಡದಂತೆ ತಡೆಯಬಹುದು ಎಂದು ಗೂಗಲ್ ಹೇಳಿದೆ.


ಗೂಗಲ್ ಭದ್ರತಾ ಪರಿಶೀಲನೆಯ ಬಳಕೆ ಮಾಡಿ 
Google ನ ಭದ್ರತಾ ಪರಿಶೀಲನೆಯು ಸುರಕ್ಷತೆಯನ್ನು ಸೂಚಿಸುತ್ತದೆ. ನಿಮ್ಮ ಮೊಬೈಲ್ ಫೋನ್ ಇತ್ಯಾದಿಗಳಲ್ಲಿ ಸ್ಕ್ರೀನ್ ಲಾಕ್ ಅನ್ನು ಹೊಂದಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಅದರ ಸಹಾಯದಿಂದ, ನೀವು ಅಪಾಯಕಾರಿ ಥರ್ಡ್ ಪಾರ್ಟಿ ಸೈಟ್‌ಗಳನ್ನು ಹಾಗೂ ಅಪ್ಲಿಕೇಶನ್‌ಗಳನ್ನು ಗುರುತಿಸಿ ಅವುಗಳನ್ನು ತೆಗೆದು ಹಾಕಬಹುದು.