ನವದೆಹಲಿ: ಇದುವರೆಗೆ ನೀವು ರೈಲು ನಿಲ್ದಾಣಗಳಲ್ಲಿ ನಿಮ್ಮ ಟ್ರೈನ್ ಗಾಗಿ ದಾರಿ ಕಾಯುತ್ತಿದ್ದ ವೇಳೆ ಫ್ರೀ ವೈಫೈ ಸೌಕರ್ಯವನ್ನು ಟೈಮ್ ಪಾಸ್ ಗಾಗಿ ಬಳಕೆ ಮಾಡುತ್ತಿದ್ದೀರಿ. ಆದರೆ, ಇನ್ಮುಂದೆ ನಿಮಗೆ ಸಿಗುತ್ತಿದ್ದ ಈ ಉಚಿತ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಎಲ್ಲ ರೈಲು ನಿಲ್ದಾಣಗಳಲ್ಲಿ ನೀಡಲಾಗುತ್ತಿದ್ದ ಉಚಿತ ವೈಫೈ ಸೇವೆಯಿಂದ ಗೂಗಲ್ ಹಿಂದೆ ಸರಿಯಲು ನಿರ್ಧರಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಗೂಗಲ್, ಇನ್ಮುಂದೆ ಭಾರತೀಯ ರೇಲ್ವೆ ವಿಭಾಗದಲ್ಲಿ ಗೂಗಲ್ ತನ್ನ ಸೇವೆಯನ್ನು ನೀಡುವುದಿಲ್ಲ ಎಂದು ಘೋಷಿಸಿದೆ.


COMMERCIAL BREAK
SCROLL TO CONTINUE READING

415ಕ್ಕೂ ಅಧಿಕ ರೇಲ್ವೆ ಸ್ಟೇಷನ್ ಗಳು ಪ್ರಭಾವಿತಗೊಳ್ಳಲಿವೆ
ಮಾಧ್ಯಮಗಳ ವರದಿ ಪ್ರಕಾರ ಗೂಗಲ್ ಇನ್ಮುಂದೆ ಎಲ್ಲ ರೇಲ್ವೆ ಸ್ಟೇಷನ್ ಗಳಲ್ಲಿ ಒದಗಿಸುತ್ತಿದ್ದ ಇಂಟರ್ನೆಟ್ ಸೇವೆಯನ್ನು ಹಿಂಪಡೆಯಲು ನಿರ್ಧರಿಸಿದೆ ಎನ್ನಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿ ಭಾರತದಲ್ಲಿ ನೀಡಲಾಗುತ್ತಿರುವ ಅಗ್ಗದ ದರದ ಡೇಟಾ ಸೇವೆಗಳ ಕಾರಣ ಫ್ರೀ ವೈಫೈ ಸೇವೆಯಿಂದ ಕಂಪನಿಗೆ ಹೆಚ್ಚಿನ ಲಾಭ ಬರುತ್ತಿಲ್ಲ ಎಂದು ಹೇಳಿದೆ. ಯಾವುದೇ ಓರ್ವ ಬಳಕೆದಾರ ಗೂಗಲ್ ಸೇವೆಗೆ ಲಾಗಿನ್ ಆಗುವ ವೇಳೆ ಜಾಹೀರಾತುಗಳನ್ನು ನೀಡಿ ಗೂಗಲ್ ತನ್ನ ಹೂಡಿಕೆ ವಸೂಲಿ ಮಾಡುತ್ತಿತ್ತು. ಆದರೆ, ಇದೀಗ ಮೊಬೈಲ್ ಸೇವೆ ಒದಗಿಸುವ ಕಂಪನಿಗಳು ಭಾರತದಲ್ಲಿ ಅಗ್ಗದ ದರದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತಿವೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸ್ಟೇಷನ್ ಗಳ ಮೇಲೆ ಲಭ್ಯವಿರುವ ಉಚಿತ ವೈಫೈ ಸೇವೆಯ ಬಳಕೆಯನ್ನು ಮಾಡುತ್ತಿಲ್ಲ. ಹೀಗಾಗಿ ಕಡಿಮೆ ಬಳಕೆದಾರರು ಈ ಸೇವೆಯನ್ನು ಬಳಸುತ್ತಿರುವ ಕಾರಣ ತಾನು ಈ ಸೇವೆಯಿಂದ ಹಿಂದೆ ಸರಿಯುತ್ತಿರುವುದಾಗಿ ಗೂಗಲ್ ಹೇಳಿದೆ. ಸದ್ಯ ದೇಶದ ಸುಮಾರು 415 A1, A ಹಾಗೂ C ಶ್ರೇಣಿಯ ರೈಲು ನಿಲ್ದಾಣಗಳಲ್ಲಿ ಗೂತಲ್ ತನ್ನ ಉಚಿತ ವೈಫೈ ಸೇವೆ ಒದಗಿಸುತ್ತಿದೆ.


ಭಾರತೀಯ ಕಂಪನಿಗಳು ನೀಡಲಿವೆ ಈ ಸೇವೆ
ಗೂಗಲ್ ಕೈಗೊಂಡ ಈ ನಿರ್ಧಾರದ ಬಳಿಕೆ ಭಾರತೀಯ ರೇಲ್ವೆ ವಿಭಾಗದ ಅಡಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿರುವ ರೈಲ್ ಟೈಲ್, ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಇನ್ಮುಂದೆಯೂ ಕೂಡ ಯಾತ್ರಿಗಳು ಉಚಿತ ಇಂಟರ್ನೆಟ್ ಸೇವೆಯ ಲಾಭ ಪಡೆಯಬಹುದಾಗಿದೆ ಎಂದು ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಅಧಿಕಾರಿಗಳು ರೈಲ್ ಟೈಲ್ ದೇಶದ ಸುಮಾರು 5600ಕ್ಕೂ ಅಧಿಕ ರೇಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುತ್ತಿದ್ದು, ಗೂಗಲ್ ನಿರ್ಧಾರದಿಂದ ಪ್ರಭಾವಕ್ಕೆ ಒಳಗಾಗುವ ನಿಲ್ದಾನಗಳಲ್ಲಿಯೂ ಕೂಡ  ರೈಲ್ ಟೈಲ್ ತನ್ನ ಸೇವೆ ಎಂದಿನಂತೆ ಮುಂದುವರೆಸಲಿದೆ ಎಂದಿದ್ದಾರೆ.