ಮಕ್ಕಳಿಗೆ ಇಂಗ್ಲಿಷ್, ಹಿಂದಿ ಕಲಿಕೆಗಾಗಿ ಹೊಸ ಆಪ್ ಬಿಡುಗಡೆ ಮಾಡಿದ ಗೂಗಲ್
ಸ್ಮಾರ್ಟ್ ಪೋನ್ ಯುಗದಲ್ಲಿ ಶಿಕ್ಷಣವು ಕೂಡ ಇದರ ಲಾಭವನ್ನು ಪಡೆಯುತ್ತಿದೆ.ಇದಕ್ಕೆ ಪೂರಕ ಎನ್ನುವಂತೆ ಈಗ ಮಕ್ಕಳ ಕಲಿಕೆಯನ್ನು ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಗೂಗಲ್ ನೂತನ ಆಪ್ ವೊಂದನ್ನು ಬಿಡುಗಡೆ ಮಾಡಿದೆ.ಈ ಆಪ್ ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು ಇದು ಆಫ್ ಲೈನ್ ನಲ್ಲಿಯೂ ಕೂಡ ಕಾರ್ಯನಿರ್ವಹಿಸುತ್ತದೆ.
ನವದೆಹಲಿ: ಸ್ಮಾರ್ಟ್ ಪೋನ್ ಯುಗದಲ್ಲಿ ಶಿಕ್ಷಣವು ಕೂಡ ಇದರ ಲಾಭವನ್ನು ಪಡೆಯುತ್ತಿದೆ.ಇದಕ್ಕೆ ಪೂರಕ ಎನ್ನುವಂತೆ ಈಗ ಮಕ್ಕಳ ಕಲಿಕೆಯನ್ನು ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಗೂಗಲ್ ನೂತನ ಆಪ್ ವೊಂದನ್ನು ಬಿಡುಗಡೆ ಮಾಡಿದೆ.ಈ ಆಪ್ ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು ಇದು ಆಫ್ ಲೈನ್ ನಲ್ಲಿಯೂ ಕೂಡ ಕಾರ್ಯನಿರ್ವಹಿಸುತ್ತದೆ.
ಗ್ರಾಮೀಣ ಪ್ರದೇಶವೇ ಹೆಚ್ಚಾಗಿರುವಂತಹ ಭಾರತ ದೇಶದಲ್ಲಿ ಇಂಗ್ಲಿಷ್ ಕಲಿಕೆಯನ್ನುವುದು ಕಬ್ಬಿಣದ ಕಡಲೆಯಾಗಿದೆ.ಆದರೆ ಈಗ ತಂತ್ರಜ್ಞಾನದಲ್ಲಿನ ಆವಿಷ್ಕಾರವು ನಿಜಕ್ಕೂ ಈ ಸಮಸ್ಯೆಯನ್ನು ಹೋಗಲಾಡಿಸಲು ನೆರವಾಗಲಿದೆ ಎನ್ನಲಾಗಿದೆ.
ಬೋಲೋ ಎಂದು ಕರೆಯಲಾಗುವ ಈ ಆಪ್ ನ್ನು ಗೂಗಲ್ ಬಿಡುಗಡೆ ಮಾಡಿದ ನಂತರ ತನ್ನ ಹೇಳಿಕೆಯಲ್ಲಿ " ತಂತ್ರಜ್ಞಾನವು ಬೋಧನೆ ಮತ್ತು ಕಲಿಕೆಯ ರೂಪಾಂತರಕ್ಕೆ ಸಹಾಯ ಮಾಡುವ ಶಕ್ತಿಯನ್ನು ಹೊಂದಿದೆಯೆಂದು ನಾವು ನಂಬಿದ್ದೇವೆ. ಎಲ್ಲಾ ವಿದ್ಯಾರ್ಥಿಗಳು ಇದರಿಂದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವಂತೆ ನಮ್ಮ ಉತ್ಪನ್ನಗಳು, ಕಾರ್ಯಕ್ರಮಗಳು ಮತ್ತು ಸಕ್ರಿಯವಾಗಿ ನಿರ್ದೆಶಿಸಲಾಗುತ್ತಿದೆ" ಎಂದು ತಿಳಿಸಿದೆ.