ನವದೆಹಲಿ: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೂ ಸಹ ಗೂಗಲ್ ವಿಶೇಷ ಡೂಡಲ್ ಸಲ್ಲಿಸಿದೆ. ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿನ ಡೂಡಲ್ ನಂತೆಯೇ ಈ ಡೂಡಲ್ ಸಹ ಇದ್ದು, ಯಾವುದೇ ಬದಲಾವಣೆಯಾಗಿಲ್ಲ.


COMMERCIAL BREAK
SCROLL TO CONTINUE READING

ತೋರು ಬೆರಳಿಗೆ ಶಾಯಿ ಹಚ್ಚಿರುವ ಚಿತ್ರವನ್ನು ಡೂಡಲ್ ನಲ್ಲಿ ತೋರಿಸುತ್ತಿದ್ದು ಒಮ್ಮೆ ಆ ಬೆರಳ ಗುರುತನ್ನು ಕ್ಲಿಕ್ಕಿಸಿದರೆ ಮತದಾನ ಪ್ರಕ್ರಿಯೆಯ ವಿವರಗಳು, ಮೊದಲ ಬಾರಿಗೆ ಮತದಾನ ಮಾಡುವವರಿಗಾಗಿ ಅಗತ್ಯ ಮಾಹಿತಿಗಳನ್ನು ನಾವು ಕಾಣಬಹುದು.


ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ, 11 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿ ಸೇರಿದಂತೆ ಒಟ್ಟು 95 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಬಾರಿ 158 ಮಿಲಿಯನ್ ಮತದಾರರು 1635 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. 


43 ಲೋಕಸಭಾ ಸ್ಥಾನಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮೇ 23ರಂದು ಮತಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.