ನವದೆಹಲಿ: ಪ್ರಧಾನಿ ನರಂದ್ರ ಮೋದಿ ಅವರು ಹಿಂದೂ ಗೂಗಲ್ ನ ಭಾರತೀಯ ಮೂಲದ ಸಿಇಓ  ಜೊತೆಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ನಡೆದ ಮಾತುಕತೆಯ ಬಳಿಕ ಸುಂದರ್ ಪಿಚೈ ಭಾರತದಲ್ಲಿ ಸುಮಾರು 75 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾರತದ ಡಿಜಿಟಲ್ ಅರ್ಥವ್ಯವಸ್ಥೆಗೆ ಬಲ ನೀಡುವ ಉದ್ದೇಶದಿಂದ ಗೂಗಲ್ 75000 ಫಂಡ್ ನೀಡುವುದಾಗಿ ಹೇಳಿದ್ದಾರೆ. ಮುಂದಿನ 5 ರಿಂದ 7 ವರ್ಷಗಳ ಅವಧಿಯಲ್ಲಿ ಗೂಗಲ್ ಭಾರತದಲ್ಲಿ 75 ಸಾವಿರ ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದು ಪಿಚೈ ಹೇಳಿದ್ದಾರೆ.


ಇದಕ್ಕೂ ಮೊದಲು ಸುಂದರ್ ಪಿಚೈ ಜೊತೆಗಿನ ತಮ್ಮ ಮಾತುಕತೆಯ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಪ್ರಧಾನಿ ಮೋದಿ, "ಇಂದು ಬೆಳಗ್ಗೆ ಸುಂದರ್ ಪಿಚೈ ಜೊತೆಗೆ ಮಾತುಕತೆ ನಡೆಸಲಾಗಿದ್ದು, ನಾವು ಹಲವು ವಿಷಯಗಳ ಮೇಲೆ ಅದರಲ್ಲೂ ವಿಶೇಷವಾಗಿ ತಂತ್ರಜ್ಞಾನದ ಸಹಾಯದಿಂದ ಭಾರತದ ರೈತರು, ಯುವಕರು ಹಾಗೂ ಉದ್ಯಮಿಗಳ ಜೀವನವನ್ನು ಬದಲಾಯಿಸುವ ಕುರಿತು ಚರ್ಚೆ ನಡೆಸಿದ್ದೇವೆ" ಎಂದಿದ್ದಾರೆ.



"ಕೊರೊನಾ ಕಾಲದಲ್ಲಿ ಹೊರಹೊಮ್ಮುತ್ತಿರುವ ನೂತನ ಕಾರ್ಯ ಸಂಸ್ಕೃತಿ ಕುರಿತು ಕೂಡ ನಾವು ಚರ್ಚೆ ನಡೆಸಿದ್ದೇವೆ. ಕ್ರೀಡಾದಂತಹ ಕ್ಷೇತ್ರದಲ್ಲಿ ಜಾಗತಿಕ ಮಾಹಾಮಾರಿ ತಂದೊಡ್ಡಿರುವ ಸವಾಲುಗಳ ಕುರಿತು ಚರ್ಚೆ ನಡೆಸಿದ್ದೇವೆ. ಅಷ್ಟೇ ಅಲ್ಲ ಡೇಟಾ ಸೆಕ್ಯೋರಿಟಿ ಹಾಗೂ ಸೈಬರ್ ಸೆಕ್ಯೋರಿಟಿಗಳ ಮಹತ್ವದ ಬಗ್ಗೆಯೂ ಚರ್ಚೆ ನಡೆದಿದೆ" ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.