ನವದೆಹಲಿ: ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ (Google) ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಡಿಜಿಟಲ್ ಲ್ಯಾಬ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಿದೆ. ಮುಂದಿನ ದಿನಗಳಲ್ಲಿ, ಕೃತಕ ಬುದ್ಧಿಮತ್ತೆಯನ್ನು ಉತ್ತೇಜಿಸಲು ಶೈಕ್ಷಣಿಕ ಸಮುದಾಯ, ಸರ್ಕಾರ ಮತ್ತು ಉದ್ಯಮದೊಂದಿಗೆ ಕೆಲಸ ಮಾಡಲು ಗೂಗಲ್ ಬಯಸಿದೆ. ಮೈಕ್ರೋಸಾಫ್ಟ್ ನಂತರ, ದೇಶದಲ್ಲಿ ಎಐ ಡಿಜಿಟಲ್ ಲ್ಯಾಬ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ ಎರಡನೇ ಕಂಪನಿ ಗೂಗಲ್.


COMMERCIAL BREAK
SCROLL TO CONTINUE READING

ಈ ಭಾಷೆಗಳಲ್ಲೂ ಗೂಗಲ್ ಹುಡುಕಾಟ ಸಾಧ್ಯ:
ಈವರೆಗೆ 80 ಸಾವಿರ ಇಂಟರ್ನೆಟ್ ಫೆಲೋಗಳಿಗೆ ಕಂಪನಿಯು ತರಬೇತಿ ನೀಡಿದೆ. ಇವು 2019 ರ ಅಂತ್ಯದ ವೇಳೆಗೆ ಮೂರು ಲಕ್ಷ ಗ್ರಾಮಗಳನ್ನು ತಲುಪಲಿವೆ. ತಮಿಳು, ತೆಲುಗು ಮತ್ತು ಮರಾಠಿ ಭಾಷೆಗಳನ್ನು ಗೂಗಲ್ ಸರ್ಚ್, ಇಂಡಿಕ್ ಮತ್ತು ಗೂಗಲ್ ಲೆನ್ಸ್‌ಗೆ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ, ಗೂಗಲ್ ಡಿಸ್ಕವರ್ ಇತರ 7 ಭಾಷೆಗಳಲ್ಲಿ ಲಭ್ಯವಿರುತ್ತದೆ. ಮಕ್ಕಳಿಗಾಗಿ ಮುಂಬರುವ ಗೂಗಲ್ ಬೋಲೊ(Google Bolo) ಅಪ್ಲಿಕೇಶನ್ ಈಗ ಬಂಗಾಳಿ, ಮರಾಠಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಾಗಲಿದೆ.


ಹಿಂದಿ ವಿಶ್ವದಾದ್ಯಂತ ಎರಡನೇ ದೊಡ್ಡ ಭಾಷೆ:
ಈವರೆಗೆ 28 ಲಕ್ಷಕ್ಕೂ ಹೆಚ್ಚು ಹಳ್ಳಿಗಳು ಮತ್ತು ನಗರಗಳಲ್ಲಿ 8 ಲಕ್ಷ ಮಕ್ಕಳು ಈ ಆ್ಯಪ್ ಬಳಸುತ್ತಿದ್ದಾರೆ. ಈ ಅಪ್ಲಿಕೇಶನ್‌ನಲ್ಲಿ 30 ಲಕ್ಷಕ್ಕೂ ಹೆಚ್ಚು ಕಥೆಗಳಿವೆ. ಇದಲ್ಲದೆ, ಗೂಗಲ್ ಪರವಾಗಿ ಸ್ಥಳೀಯ ಪ್ರಕಾಶಕರೊಂದಿಗೆ ಸಹಿ ಮಾಡುವ ಮೂಲಕ ಡಿಜಿಟಲ್ ಗ್ರಂಥಾಲಯವನ್ನು ಬಲಪಡಿಸಲಾಗುತ್ತದೆ. ಗೂಗಲ್ ಹುಡುಕಾಟ ಹಿಂದಿಯಲ್ಲೂ ಲಭ್ಯವಿದೆ. ಗೂಗಲ್‌ನಲ್ಲಿ ಹಿಂದಿ ವಿಶ್ವದ ಎರಡನೇ ಅತಿದೊಡ್ಡ ಭಾಷೆಯಾಗಿದೆ.