ನವದೆಹಲಿ: ಗೂಗಲ್ ಸೇವೆಗಳನ್ನು ಬಳಸುವಾಗ ಬಳಕೆದಾರರು ಪಾಸ್ ವರ್ಡ್ ಬದಲಿಗೆ ನಿಮ್ಮ ಫಿಂಗರ್ ಪ್ರಿಂಟ್ ಅಥವಾ ಸ್ಕ್ರೀನ್ ಲಾಕ್ ಬಳಸಿ ತಮ್ಮ ಗುರುತನ್ನು ಪರಿಶೀಲಿಸಬಹುದು ಎಂದು ಸರ್ಚ್ ಎಂಜಿನ್ ದೈತ್ಯ ಗೂಗಲ್ ಪ್ರಕಟಿಸಿದೆ.ಈ ವೈಶಿಷ್ಟ್ಯವು ಪಿಕ್ಸೆಲ್ ಸಾಧನಗಳಲ್ಲಿ ಲಭ್ಯವಿದೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಎಲ್ಲಾ ಆಂಡ್ರಾಯ್ಡ್ 7+ ಸಾಧನಗಳಿಗೆ ಬರಲಿದೆ ಎಂದು ಗೂಗಲ್ ಬ್ಲಾಗ್‌ನಲ್ಲಿ ಬರೆದಿದೆ.


COMMERCIAL BREAK
SCROLL TO CONTINUE READING

"ಈ ವರ್ಧನೆಗಳನ್ನು ಎಫ್‌ಐಡಿಒ 2 ಮಾನದಂಡಗಳು, W3C WebAuthn ಮತ್ತು FIDO CTAP ಬಳಸಿ ನಿರ್ಮಿಸಲಾಗಿದೆ ಮತ್ತು ಸರಳ ಮತ್ತು ಹೆಚ್ಚು ಸುರಕ್ಷಿತ ಅನುಭವಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ' ಎಂದು ಬ್ಲಾಗ್ ಹೇಳಿದೆ.ಬಳಕೆದಾರನು ತನ್ನ ಬೆರಳಚ್ಚು ಮುದ್ರೆಯನ್ನು ಒಮ್ಮೆ ಮಾತ್ರ ಸೇವೆಯೊಂದಿಗೆ ನೋಂದಾಯಿಸಿಕೊಳ್ಳಬೇಕು ಮತ್ತು ನಂತರ ಬೆರಳಚ್ಚು ಮುದ್ರೆ ಸ್ಥಳೀಯ ಅಪ್ಲಿಕೇಶನ್ ಮತ್ತು ವೆಬ್ ಸೇವೆ ಎರಡಕ್ಕೂ ಕೆಲಸ ಮಾಡುತ್ತದೆ. 


ಈ ವೈಶಿಷ್ಟ್ಯವನ್ನು ಬಳಸಬೇಕೆಂದರೆ ಈ ಕೆಳಗಿನ ಅಂಶಗಳು ನಿಮ್ಮ ಮೊಬೈಲ್ನಲ್ಲಿರಬೇಕು:


-ಫೋನ್ ಆಂಡ್ರಾಯ್ಡ್ 7.0 (ನೌಗಾಟ್) ಅಥವಾ ನಂತರದ ಪೋನ್ ಚಾಲನೆಯಲ್ಲಿರಬೇಕು.
-ನಿಮ್ಮ ವೈಯಕ್ತಿಕ ಗೂಗಲ್ ಖಾತೆಯನ್ನು ನಿಮ್ಮ ಆಂಡ್ರಾಯ್ಡ್  ಸಾಧನಕ್ಕೆ ಸೇರಿಸಬೇಕು.
-ನಿಮ್ಮ ಆಂಡ್ರಾಯ್ಡ್  ಸಾಧನದಲ್ಲಿ ಸೂಕ್ತ ಸ್ಕ್ರೀನ್ ಲಾಕ್ ಅನ್ನು ಹೊಂದಿಸಿ.


ಗೂಗಲ್‌ನ ಸರ್ವರ್‌ಗಳಿಗೆ ಬೆರಳಚ್ಚು ಮುದ್ರೆಯನ್ನು ಎಂದಿಗೂ ಕಳುಹಿಸಲಾಗುವುದಿಲ್ಲ ಎಂದು ಗೂಗಲ್ ಹೇಳಿಕೊಂಡಿದೆ.“ಇದನ್ನು ನಿಮ್ಮ ಸಾಧನದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ, ಮತ್ತು ನೀವು ಅದನ್ನು ಸರಿಯಾಗಿ ಸ್ಕ್ಯಾನ್ ಮಾಡಿದ್ದೀರಿ ಎಂಬುದಕ್ಕೆ ಕ್ರಿಪ್ಟೋಗ್ರಾಫಿಕ್ ಪುರಾವೆ ಮಾತ್ರ ಗೂಗಲ್  ನ ಸರ್ವರ್‌ಗಳಿಗೆ ಕಳುಹಿಸಲಾಗುತ್ತದೆ. ಇದು ಎಫ್‌ಐಡಿಒ 2 ವಿನ್ಯಾಸದ ಮೂಲಭೂತ ಭಾಗವಾಗಿದೆ ”ಎಂದು ಗೂಗಲ್ ಹೇಳಿದೆ.