ನವದೆಹಲಿ: ದೇಶಾದ್ಯಂತ ಇಂದು 70ನೇ ಗಣರಾಜ್ಯೋತ್ಸವ sambhrama. ಈ ವಿಶೇಷ ಸಂದರ್ಭದಲ್ಲಿ  ಸರ್ಚ್ ಇಂಜಿನ್ ಗೂಗಲ್ ವಿಶೇಷ ಡೂಡಲ್ ರಚಿಸಿ, ಶುಭಾಷಯ ಕೋರಿದೆ. 


COMMERCIAL BREAK
SCROLL TO CONTINUE READING

ಗಣರಾಜ್ಯೋತ್ಸವ ಸಂಭ್ರಮದ ವಿಶೇಷ ಆಕರ್ಷಣೆಯಾಗಿರುವ ವಿವಿಧ ರಾಜ್ಯಗಳ ಸಂಸ್ಕೃತಿ, ಜನಜೀವನವನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳ ಮಾದರಿಯಲ್ಲಿ GOOGLE ಅಕ್ಷರಗಳನ್ನು ಬರೆಯಲಾಗಿದ್ದು, L ಅಕ್ಷರವನ್ನು ಕುತುಬ್ ಮಿನಾರ್ ಚಿತ್ರದಿಂದ ಬಿಂಬಿಸಲಾಗಿದೆ.ಅಲ್ಲದೆ, ಹಿಂಬಾಗದಲ್ಲಿ ರಾಷ್ಟ್ರಪತಿ ಭವನವನ್ನು ಚಿತ್ರಿಸಲಾಗಿದೆ. ಈ ಮೂಲಕ ವಿವಿಧ ಜಾತಿ, ಧರ್ಮ, ಸಂಸೃತಿಯನ್ನು ಹೊಂದಿರುವ ಭಾರತ ದೇಶ ವಿವಿಧತೆಯಲ್ಲಿ ಏಕತೆ ಎಂಬ ಅಂಶವನ್ನು ಗೂಗಲ್ ತನ್ನ ಡೂಡಲ್'ನಲ್ಲಿ ಚಿತ್ರಿಸಿ ಗಣರಾಜ್ಯೋತ್ಸವದ ಇತಿಹಾಸವನ್ನು ಸಾರಿದೆ. 


ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡ ಹಿಂದೂಸ್ತಾನಕ್ಕೆ, ಸ್ವಾತಂತ್ರ್ಯ ಸಿಕ್ಕು ಎರಡೂವರೆ ವರ್ಷಗಳ ಬಳಿಕ ಜನವರಿ 29, 1950ರಲ್ಲಿ ಮಹಾ ಸಂವಿಧಾನವನ್ನು ಅಸ್ತಿತ್ವಕ್ಕೆ ತರಲಾಯಿತು. ಭಾರತದ ಪ್ರಜೆಗಳನ್ನು ಆಳುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ ಹಾಗೂ ಜನರಿಗಾಗಿ ಕೆಲಸಮಾಡುವ ಕಾರ್ಯಾಂಗಗಳು ಹೇಗಿರಬೇಕು, ಯಾವೆಲ್ಲ ನೀತಿ ನಿಯಮ ಕಟ್ಟಳೆಗಳನ್ನು ಅವರು ಪಾಲಿಸಬೇಕು ಎಂಬೆಲ್ಲ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಚವೇ ಭಾರತದ ಸಂವಿಧಾನ. ಡಾ.ಬಿ.ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ಸಂವಿಧಾನ, ಡಾ.ರಾಜೇಂದ್ರ ಪ್ರಸಾದ್‌ರ ಅಧ್ಯಕ್ಷತೆಯಲ್ಲಿ 1950, ಜನವರಿ 26ರಂದು ಅಂಗೀಕರಿಸಲ್ಪಟ್ಟಿತ್ತು.


ಅಂದು ಭಾರತದ ಪ್ರಜೆಗಳು ಸ್ವತಃ ತಮಗೇ ಪ್ರಭುಗಳಾದರು. ಪ್ರಜೆಗಳೇ ಪ್ರಭುಗಳಾದ 1950ರ ಜನವರಿ 26ರ ದಿನವನ್ನು ಗಣರಾಜ್ಯದಿನ ಎಂದು ಘೋಷಿಸಲಾಯಿತು. ಅಂದಿನಿಂದ ಜನವರಿ 26ರಂದು ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.