ನವದೆಹಲಿ:  2018-19ನೇ ಸಾಲಿನ ನೌಕರರ ಭವಿಷ್ಯ ನಿಧಿ(ಇಪಿಎಫ್)ಯಾ ಮೇಲಿನ ಬಡ್ಡಿ ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಅದರಂತೆ ಇದೀಗ ಪಿಎಫ್ ಮೇಲಿನ ಬಡ್ಡಿದರ ಶೇ.8.65 ನಿಗದಿಯಾಗಿದ್ದು, 6 ಕೋಟಿ ಪಿಎಫ್ ಚಂದಾದಾರರ ಖಾತೆಗೆ ಬಡ್ಡಿ ಹಣವನ್ನು ಜಮಾ ಮಾಡಲು ಕಾರ್ಮಿಕ ಸಚಿವಾಲಯದ ಅಧಿಸೂಚನೆ ಹೊರಡಿಸಿದೆ.


COMMERCIAL BREAK
SCROLL TO CONTINUE READING

ನೌಕರರ ಭವಿಷ್ಯ ನಿಧಿಯು ಈ ಹಿಂದೆ ಶೇ.8.55 ಬಡ್ಡಿದರವನ್ನು ನಿಗದಿಪಡಿಸಲಾಗಿತ್ತು. ಇದೀಗ ಶೇ.0.10ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ. 


ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಬಡ್ಡಿದರ ಹೆಚ್ಚಳ
2018-19ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಈ ವರ್ಷದ ಫೆಬ್ರವರಿಯಲ್ಲಿ ಬಡ್ಡಿದರವನ್ನು ಪರಿಷ್ಕರಿಸಲಾಗಿತ್ತು. ಇಪಿಎಫ್ಒ 2015-16ರಲ್ಲಿ ಶೇ..8.8ರಷ್ಟು ಇದ್ದ ಬಡ್ಡಿದರವನ್ನು 2016-17ರಲ್ಲಿ ಶೇ.8.65ಕ್ಕೆ ಇಳಿಕೆ ಮಾಡಿತ್ತು. ನಂತರ 2017-18ರಲ್ಲಿ ಇದನ್ನು ಶೇ.8.55ಕ್ಕೆ ಇಳಿಸಿತ್ತು. 2017-18ರ ಆರ್ಥಿಕ ವರ್ಷದಲ್ಲಿ ಶೇ. 8.55ರಷ್ಟಿದ್ದ ಇಪಿಎಫ್‌ ಬಡ್ಡಿದರವನ್ನು ಶೇ.0.10ರಷ್ಟು ಏರಿಕೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಈ ದರ ಪರಿಷ್ಕರಣೆಗೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ 2018-19ರ ಸಾಲಿನಿಂದಲೇ ಹೊಸ ಬಡ್ಡಿ ದರ ಅನ್ವಯವಾಗಲಿದೆ. ಕಳೆದ ಮೂರು ವರ್ಷಗಳಲ್ಲೇ ಇದು ಮೊದಲ ಹೆಚ್ಚಳವಾಗಿದೆ.