ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರದಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಕೇಂದ್ರ ಸರ್ಕಾರದ ಕೆಲಸ ಆರ್ಥಿಕತೆಯನ್ನು ಸುಧಾರಿಸುವುದೇ ಹೊರತು ಕಾಮಿಡಿ ಸರ್ಕಸ್ ನಡೆಸುವುದು ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ


COMMERCIAL BREAK
SCROLL TO CONTINUE READING

ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ  ಪ್ರಿಯಾಂಕಾ ಗಾಂಧಿ 'ಬಿಜೆಪಿ ನಾಯಕರು ಕೊಟ್ಟಿರುವ ಕೆಲಸವನ್ನು ಮಾಡುವ ಬದಲು, ಅವರು ಇತರರ ಸಾಧನೆಗಳನ್ನು ನಿರಾಕರಿಸಲು ಪ್ರಯತ್ನಿಸುತ್ತಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ನೊಬೆಲ್ ಪ್ರಶಸ್ತಿ  ಗೆದ್ದಿದ್ದಾರೆ" ಎಂದು ಹೇಳಿದರು.



ರೈಲ್ವೆ ಸಚಿವ ಪಿಯೂಷ್ ಗೋಯಲ್ ಶುಕ್ರವಾರದಂದು ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗೆದ್ದಿರುವ ಭಾರತೀಯ-ಅಮೆರಿಕನ್  ಅಭಿಜಿತ್ ಬ್ಯಾನರ್ಜಿ ಎಡಪಂಥೀಯ ನಿಲುವು ಹೊಂದಿದ್ದಾರೆ ಮತ್ತು ಕಾಂಗ್ರೆಸ್ ಪ್ರಸ್ತಾಪಿಸಿದ ಕನಿಷ್ಠ ಆದಾಯ ಯೋಜನೆಯಾದ ನ್ಯಾಯನ್ನು ಬೆಂಬಲಿಸಿದ್ದಾರೆ, ಇದನ್ನು ಭಾರತೀಯ ಮತದಾರರು ತಿರಸ್ಕರಿಸಿದ್ದಾರೆ ಮತ್ತು ಅವರ ವಿಚಾರವನ್ನು ಸ್ವೀಕರಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು.


ಇದಕ್ಕೆ ಹಿಂದಿಯಲ್ಲಿ ಟ್ವೀಟ್ ಮಾಡಿ ಸಚಿವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ 'ಆರ್ಥಿಕತೆಯು ಕುಸಿಯುತ್ತಿದೆ. ನಿಮ್ಮ ಕೆಲಸ ಅದನ್ನು ಸುಧಾರಿಸುವುದು, ಹೊರತು ಹಾಸ್ಯ ಸರ್ಕಸ್ ನಡೆಸುವುದು ಅಲ್ಲ" ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಜೊತೆಗೆ, ಪ್ರಿಯಾಂಕಾ ಗಾಂಧಿ ಮಾಧ್ಯಮ ವರದಿಯನ್ನು ಪೋಸ್ಟ್ ಮಾಡಿದ್ದು, ಇದು 2019 ರ ಸೆಪ್ಟೆಂಬರ್‌ನಲ್ಲಿ ವಾಹನ ಕ್ಷೇತ್ರ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ.