ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ವಿಶೇಷ ಸಮಿತಿ ಶೀಘ್ರದಲ್ಲೇ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹೊಸ ನಿರ್ದೇಶಕರನ್ನು ನೇಮಿಸಿ ಸಿಬಿಐನ ಹೊಸ ನಿರ್ದೇಶಕರ ಹೆಸರನ್ನು ಘೋಷಿಸುವ ಸಾಧ್ಯತೆ ಇದೇ.


COMMERCIAL BREAK
SCROLL TO CONTINUE READING

ಸರಕಾರ ಪ್ರಸ್ತಾಪಿಸಿದ ಮೂರು ಸಂಭಾವ್ಯರ ಹೆಸರುಗಳ ಮೇಲೆ ಸಮಿತಿಯ ಸದಸ್ಯರಲ್ಲೊಬ್ಬರಾದ ಕಾಂಗ್ರೆಸ್​ ಸಂಸದ ಮಲ್ಲಿಕಾರ್ಜುನ್​ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.


ಶುಕ್ರವಾರ ಈ ಕುರಿತಂತೆ ಸಮಿತಿ ಸಭೆ ಕರೆದಿತ್ತು. ಮೋದಿ, ಖರ್ಗೆ ಹಾಗೂ ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಮೂರ್ನಾಲ್ಕು ಹೆಸರುಗಳು ನಾಮ ನಿರ್ದೇಶನಗೊಂಡಿವೆ ಎನ್ನಲಾಗಿದೆ.


ಸರಕಾರ ಪ್ರಸ್ತಾಪಿಸಿದ ಕೆಲವು ಹೆಸರುಗಳಿಗೆ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪ್ರತಿಷ್ಠಿತ ಹುದ್ದೆಗೆ 1984ನೇ ಬ್ಯಾಚ್​ನ ಹಿರಿಯ ಐಪಿಎಸ್​ ಅಧಿಕಾರಿಗಳಾದ ಜಾವೀದ್​ ಅಹ್ಮದ್​, ರಜನಿ ಕಾಂತ್​ ಮಿಶ್ರಾ ಹಾಗೂ ಎಸ್​.ಎಸ್​. ದೇಶ್ವಾಲ್​ ಹೆಸರನ್ನು ಮುಂಚೂಣಿಯಲ್ಲಿದೆ ಎನ್ನಲಾಗಿದೆ.


ಅಹ್ಮದ್ ಪ್ರಸ್ತುತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಅಂಡ್ ಫರೆನ್ಸಿಕ್ ಸೈನ್ಸಸ್ನ ಮುಖ್ಯಸ್ಥರಾಗಿದ್ದಾರೆ. ಅವರು ಉತ್ತರ ಪ್ರದೇಶದ ಕೇಡರ್ ಅಧಿಕಾರಿಯಾಗಿದ್ದಾರೆ. ಮಿಶ್ರಾ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ನ ಮುಖ್ಯಸ್ಥರಾಗಿದ್ದಾರೆ. ದೆಶ್ವಾಲ್ ಹರಿಯಾಣ ಕೇಡರ್ನ ಇಂಡೋ-ಟಿಬೇಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ನಿರ್ದೇಶಕರಾಗಿದ್ದಾರೆ.


ನಿನ್ನೆ ನಡೆದ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಹಿರಿಯ ಸರಕಾರಿ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.