ನವದೆಹಲಿ: ಬುಧವಾರ, ರಜೆಯಲ್ಲಿ ಕಳುಹಿಸಲಾದ ಅಲೋಕ್ ವರ್ಮಾ ಅವರು ಕೇಂದ್ರೀಯ ಜಾಗೃತ ಆಯೋಗದೊಂದಿಗೆ (ಸಿವಿಸಿ) ಸಹಕರಿಸುತ್ತಿರಲಿಲ್ಲ ಎಂದು ಸರ್ಕಾರ ಹೇಳಿದೆ. ಅಲ್ಲದೆ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಮನೆಗೆ ಕಳುಹಿಸಿರುವುದನ್ನು ಸಹ ಸಮರ್ಥಿಸಿಕೊಂಡಿದೆ. ಸಂಸ್ಥೆಯ ಹಿರಿಯ ಅಧಿಕಾರಿಗಳ ವಿರುದ್ಧ 'ಭ್ರಷ್ಟಾಚಾರದ ಗಂಭೀರ ಆರೋಪಗಳ' ಕಾರಣದಿಂದಾಗಿ, 'ಅಸಾಮಾನ್ಯ ಮತ್ತು ಅಭೂತಪೂರ್ವ' ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಸಂಸ್ಥೆಯ ಹಿರಿಯ ಅಧಿಕಾರಿಗಳ ಆಂತರಿಕ ಕಲಹ ತನಿಖಾ ಸಂಸ್ಥೆಯ ಪರಿಸರವನ್ನೇ ಹಾಳು ಮಾಡುತ್ತಿತ್ತು ಎಂದು ಸರ್ಕಾರ ಹೇಳಿದೆ.


ಸಿವಿಸಿ 2018 ರ ಆಗಸ್ಟ್ 24 ರಂದು ಸಿಬಿಐ ಹಿರಿಯ ಅಧಿಕಾರಿಗಳ ವಿರುದ್ಧ ವಿವಿಧ ಆರೋಪದ ಮೇಲೆ ದೂರು ನೀಡಿದೆ ಎಂದು ಸುದೀರ್ಘ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಿವಿಸಿ ಕಾಯಿದೆ  2003 ರ ಸೆಕ್ಷನ್ 11 ರಡಿಯಲ್ಲಿ ಸೆಪ್ಟೆಂಬರ್ 11 ರಂದು ಮೂರು ನೋಟಿಸ್ಗಳನ್ನು ಜಾರಿಗೊಳಿಸಿತು ಮತ್ತು ಸೆಪ್ಟೆಂಬರ್ 14 ರಂದು ಕಮಿಷನ್ ಮೊದಲು ಕಡತಗಳನ್ನು ಮತ್ತು ದಾಖಲೆಗಳನ್ನು ಒದಗಿಸಲು ಸಿಬಿಐ ನಿರ್ದೇಶಕರಿಗೆ ತಿಳಿಸಿದೆ ಎಂದು ಹೇಳಿದೆ.


ಈ ದಾಖಲೆಗಳನ್ನು ಒದಗಿಸಲು ಸಿಬಿಐಗೆ ಹಲವಾರು ಅವಕಾಶಗಳನ್ನು ನೀಡಲಾಯಿತು ಮತ್ತು ಹಲವಾರು ಮುಂದೂಡಿಕೆಗಳ ನಂತರ ಸಿಬಿಐ ಸೆಪ್ಟೆಂಬರ್ 24 ರಂದು ಮೂರು ವಾರಗಳಲ್ಲಿ ಡಾಕ್ಯುಮೆಂಟ್ ಒದಗಿಸುವುದಾಗಿ ಆಯೋಗಕ್ಕೆ ಭರವಸೆ ನೀಡಿದ್ದರು. ಅದಾಗ್ಯೂ, ಸಿಬಿಐ ನಿರ್ದೇಶಕರು ವಿಫಲರಾದರು. ಇದರಿಂದಾಗಿ ಸಿಬಿಐ ನಿರ್ದೇಶಕರು ಗಂಭೀರ ಆರೋಪಗಳ ಕುರಿತ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸಿವಿಸಿ ವರದಿ ನೀಡಿತು. ಅದನ್ನು ಆಧರಿಸಿ ಸರಕಾರ ಕ್ರಮ ಕೈಗೊಂಡಿದೆ ಎಂದು ಪ್ರಕಟಣೆ ವಿವರಿಸಿದೆ.