ನವದೆಹಲಿ: ಕೇಂದ್ರ ಸೆರ್ಕಾರವು ದೇಶದ ಜನಸಾಮಾನ್ಯರಿಗೆ ಗುಡ್ ನ್ಯೂಸ್ ನೀಡಿದೆ. 34 ಹೊಸ ಅಗತ್ಯ ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. 26 ಅಗತ್ಯ ಔಷಧಿಗಳ ನವೀಕರಿಸಿದ ಪಟ್ಟಿಯಿಂದ ಕೈಬಿಡಲಾಗಿದೆ. ಇದು ರೋಗಿಗಳ ಜೇಬಿನ ಭಾರವನ್ನು ಕಡಿಮೆ ಮಾಡುತ್ತದೆ ಎಂದು ಸರ್ಕಾರ ತಿಳಿಸಿದೆ.  


COMMERCIAL BREAK
SCROLL TO CONTINUE READING

ಕ್ಯಾನ್ಸರ್ ಚಿಕಿತ್ಸೆ ಹಾಗೂ ವಿವಿಧ ಸೋಂಕು ನಿವಾರಣೆಗೆ ಬಳಕೆ ಮಾಡುವ ಔಷಧ ಸೇರಿ ಹೊಸದಾಗಿ 34 ಔಷಧಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಅತ್ಯಗತ್ಯ ಔಷಧಗಳ ಪಟ್ಟಿಗೆ ಸೇರ್ಪಡೆ ಮಾಡಿದ್ದು, ಈ ಔಷಧಗಳ ದರ ಇಳಿಕೆಯಾಗಲಿದೆ. ಇನ್ನು ಪಟ್ಟಿಯಿಂದ 26 ಔಷಧಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ: IOCLನಲ್ಲಿ ಉದ್ಯೋಗಾವಕಾಶ: ತಿಂಗಳಿಗೆ ರೂ 1 ಲಕ್ಷ ಸಂಬಳ! ಇಂದೇ ಅರ್ಜಿ ಸಲ್ಲಿಸಿ


ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿ(NLEM 2022) 2015ರಲ್ಲಿ 376 ರಿಂದ 384 ಔಷಧಗಳು ಇವೆ. ‘ಈ ಪಟ್ಟಿಯನ್ನು ಕರಡು ಮಾಡುವುದು ಸುದೀರ್ಘ ಪ್ರಕ್ರಿಯೆಯಾಗಿದೆ ಮತ್ತು ಭಾರತದಾದ್ಯಂತ ಸುಮಾರು 350 ತಜ್ಞರು NLEM 2022ರ ಕರಡು ತಯಾರಿಸಲು 140 ಸಮಾಲೋಚನಾ ಸಭೆಗಳನ್ನು ನಡೆಸಿದ್ದಾರೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.


NLEM 2022ರಲ್ಲಿನ ಹೆಚ್ಚಿನ ಔಷಧಿಗಳು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ (NPPA) ಬೆಲೆಗಳನ್ನು ಮಿತಿಗೊಳಿಸಲು ಮಾರ್ಗದರ್ಶನ ನೀಡುತ್ತವೆ. ಮಧುಮೇಹ, ಎಚ್‌ಐವಿ, ಟಿಬಿ, ಗರ್ಭನಿರೋಧಕಗಳು, ಹಾರ್ಮೋನ್ ಔಷಧಗಳು, ಐವರ್ ಮೆಸಿಟಿನ್, ಮುಪಿರೋಸಿನ್, ಇನ್ಸುಲಿನ್ ಗ್ಲಾರ್ಗಿನ್, ಆಂಟಿ ಬಯೋಟೆಕ್ಸ್‍ಗಳು, ಲಸಿಕೆಗಳು, ಕ್ಯಾನ್ಸರ್‍ಗೆ ನೀಡುವ ಔಷಧ ಮತ್ತು ಇತರೆ ಕೆಲವು ಮಹತ್ವದ ಔಷಧಗಳು ಕಡಿಮೆ ದರದಲ್ಲಿ ಸಿಗಲಿದೆ.


ಇದನ್ನೂ ಓದಿ: Rain Alert: ರಾಷ್ಟ್ರ ರಾಜಧಾನಿ ಸೇರಿದಂತೆ ಈ ಭಾಗಗಳಲ್ಲಿ ಇಂದು ಭಾರೀ ಮಳೆ- ಹವಾಮಾನ ಇಲಾಖೆ ಎಚ್ಚರಿಕೆ


 ಸುಕ್ರಾಲ್ ಫೇಟ್, ವೈಟ್ ಪೆಟ್ರೋಲಿಯಂ, ಆಥೆನೋಲೋಲ್, ಮಿಥೈಲ್ ಡೋಪ ಸೇರಿ 26 ಔಷಧಗಳನ್ನು ದರ ನಿಯಂತ್ರಣ ಪಟ್ಟಿಯಿಂದ ಕೈ ಬಿಡಲಾಗಿದೆ. ಕೋವಿಡ್-19 ಔಷಧಿಗಳು ಮತ್ತು ಲಸಿಕೆಗಳು ಎನ್‌ಎಲ್‌ಇಎಂ 2022ರ ಭಾಗವಾಗಿಲ್ಲ, ಏಕೆಂದರೆ ಇವುಗಳ ತುರ್ತು ಬಳಕೆಯ ಅಧಿಕಾರ (EUA)ಅಡಿಯಲ್ಲಿ ಬರುತ್ತವೆ. ಇವುಗಳ ಪರಿಣಾಮಕಾರಿತ್ವ ಮತ್ತು ಡ್ರಗ್ ಪ್ರೊಫೈಲ್‌ಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ ಎಂದು ಔಷಧಶಾಸ್ತ್ರಜ್ಞ ಮತ್ತು ಸ್ಟ್ಯಾಂಡಿಂಗ್ ನ್ಯಾಷನಲ್‌ನ ಉಪಾಧ್ಯಕ್ಷ ವೈ.ಕೆ.ಗುಪ್ತಾ ಹೇಳಿದ್ದಾರೆ.  


ರಾಷ್ಟ್ರೀಯ ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ (NIP) ಒಳಗೊಂಡಿರುವ ಲಸಿಕೆ ಸ್ವಯಂಚಾಲಿತವಾಗಿ NLEMನ ಭಾಗವಾಗುತ್ತದೆ ಎಂದು ಗುಪ್ತಾ ಹೇಳಿದ್ದಾರೆ. ರೋಟವೈರಸ್ ಲಸಿಕೆ 2016ರಲ್ಲಿ NIPನ ಭಾಗವಾಯಿತು ಮತ್ತು NLEM 2022ರಲ್ಲಿ ಸೇರಿಸಲಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.