ನವದೆಹಲಿ: ಗಗನಕ್ಕೇರಿದ್ದ ಎಲ್‌ಇಡಿ ಬಲ್ಬ್‌ ಸರ್ಕಾರದ ಹಸ್ತಕ್ಷೇಪದ ನಂತರ ಇಳಿಕೆ ಕಂಡಿತ್ತು. ಅದೇ ರೀತಿಯಲ್ಲಿ ಸರ್ಕಾರವು ಏರ್ ಕಂಡಿಷನರ್ (ಎಸಿ) ಅನ್ನು ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಪ್ರಯತ್ನ ಪ್ರಾರಂಭಿಸಿದೆ. 


COMMERCIAL BREAK
SCROLL TO CONTINUE READING

ಈ ಹಿಂದೆ ಅಗ್ಗದ ಬೆಲೆಗೆ ಎಲ್ಇಡಿ ಬಲ್ಬ್‌ಗಳನ್ನು ನೀಡಿದ್ದ ಸರ್ಕಾರ ಇದೀಗ ಕಡಿಮೆ ದರದಲ್ಲಿ ಎಸಿ ಒದಗಿಸಲು ತಯಾರಿ ನಡೆಸುತ್ತಿದೆ. ಎಲ್‌ಇಡಿ ಬಲ್ಬ್‌ನ ನಿಯಮವನ್ನು ಎಸಿ ವಿಷಯದಲ್ಲೂ ಪುನರಾವರ್ತಿಸಲು ಮೋದಿ ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿದೆ. ಸರ್ಕಾರಿ ಸಂಸ್ಥೆ ಇಇಎಸ್ಎಲ್ ಎಸಿ ಯನ್ನು ಮಾರುಕಟ್ಟೆ ಬೆಲೆಗಿಂತ 30 ರಿಂದ 40 ಪ್ರತಿಶತದಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ಪ್ರಾರಂಭಿಸಿದೆ.


50 ಸಾವಿರ ಹವಾನಿಯಂತ್ರಣ(AC)ಗಳನ್ನು ಮಾರಾಟ ಮಾಡುವ ಗುರಿ:
ಈ ವರ್ಷ 50,000 ಹವಾನಿಯಂತ್ರಣ(AC)ಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಸರ್ಕಾರಿ ಇಎಸ್ಇಎಲ್ (EESL- Energy Efficiency Service Limited) ಅಗ್ಗದ ಎಸಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಒಂದೂವರೆ ಟನ್ ಎಸಿ (ಸ್ಪ್ಲಿಟ್) ಅನ್ನು ಇಇಎಸ್‌ಎಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ವಿಶೇಷವೆಂದರೆ 5.4 ಸ್ಟಾರ್ ರೇಟಿಂಗ್ ಹೊಂದಿರುವ ಏಕೈಕ ಎಸಿ ಇದಾಗಿದೆ. ಅದು ಅತ್ಯಧಿಕ ವಿದ್ಯುತ್ ಉಳಿತಾಯದ ಎಸಿ ಎನ್ನಲಾಗಿದೆ.


ಎಸಿ 30 ರಿಂದ 40 ರಷ್ಟು ಅಗ್ಗ:
ಈ ಎಸಿಯ ಇಇಎಸ್ಎಲ್ ಬೆಲೆ 41,300 ರೂ., ಇದು ಮಾರುಕಟ್ಟೆಯ ಬೆಲೆಗಿಂತ 30-40% ಅಗ್ಗವಾಗಿದೆ. ಈ ಎಸಿಯನ್ನು ವೋಲ್ಟಾಸ್ ಕಂಪನಿ ತಯಾರಿಸಿದೆ. ಇಇಎಸ್ಎಲ್ ಮುಖ್ಯ ಜನರಲ್ ಮ್ಯಾನೇಜರ್ (ಟೆಕ್) ಎಸ್ಪಿ ಜರ್ನೈಲ್ ಅವರು ತಮ್ಮ ಹವಾನಿಯಂತ್ರಣ(ಎಸಿ)ವು ಮಾರುಕಟ್ಟೆಯಲ್ಲಿರುವ ಇತರ ಹವಾನಿಯಂತ್ರಣಗಳಿಗೆ ಹೋಲಿಸಿದರೆ ಹೆಚ್ಚು ದಕ್ಷತೆಯಿಂದ ಕೂಡಿದೆ. ಈ ವರ್ಷ ಇಲ್ಲಿಯವರೆಗೆ 3400 ಹವಾನಿಯಂತ್ರಣ(ಎಸಿ)ಗಳ ಬುಕಿಂಗ್ ಸ್ವೀಕರಿಸಿದ್ದೇವೆ ಎಂದು ಹೇಳಿದರು. ಈ ಎಸಿಯನ್ನು ಪ್ರಸ್ತುತ ದೆಹಲಿ-ಎನ್‌ಸಿಆರ್, ಮುಂಬೈ ಮತ್ತು ಪುಣೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.


ಇಇಎಸ್ಎಲ್ ಎಲ್ಇಡಿ ಬಲ್ಬ್ ಅನ್ನು ಉಜ್ವಲಾ ಯೋಜನೆಯಡಿ ಕೋಟಿ ಮನೆಗಳಿಗೆ ತಲುಪಿಸಿದೆ. ಈಗ ಹವಾನಿಯಂತ್ರಣದಲ್ಲಿ ಈ ಪ್ರಯೋಗದ ಬಳಕೆಯೂ ಸಿದ್ಧವಾಗಿದೆ. ಇಇಎಸ್ಎಲ್ನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಎಸಿಯನ್ನು ಬುಕ್ ಮಾಡಬಹುದಾಗಿದೆ. ಈ ಸರ್ಕಾರದ ಯೋಜನೆ ಯಶಸ್ವಿಯಾದರೆ, ಮುಂದಿನ ವರ್ಷ, 2 ಲಕ್ಷ ಹವಾನಿಯಂತ್ರಣಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ. ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಇದಕ್ಕಾಗಿ ಇಎಂಐ ಸೌಲಭ್ಯವನ್ನೂ ಒದಗಿಸಲಾಗಿದೆ. ಇದಲ್ಲದೆ ಕೆಲವು ಕ್ರೆಡಿಟ್ ಕಾರ್ಡ್‌ಗಳಲ್ಲಿ ಕ್ಯಾಶ್‌ಬ್ಯಾಕ್ ಕೂಡ ಲಭ್ಯವಿದೆ. ಇಇಎಸ್ಎಲ್‌ನ ಅಧಿಕೃತ ವೆಬ್‌ಸೈಟ್ eeslmart.in ಗೆ ಭೇಟಿ ನೀಡುವ ಮೂಲಕ ನೀವು ಎಸಿ ಸ್ಟಾರ್ ಅನ್ನು 5.4 ಸ್ಟಾರ್ ರೇಟಿಂಗ್‌ನೊಂದಿಗೆ ಬುಕ್ ಮಾಡಬಹುದು.