ಆರ್ಥಿಕತೆಯ ಬಗ್ಗೆ ಸರ್ಕಾರದ ದೊಡ್ಡ ಪ್ರಕಟಣೆ; ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆಯಿಂದ ವಿನಾಯಿತಿ
Relife on Corporate Tax : ಗೋವಾದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯ ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕತೆಗೆ ಉತ್ತೇಜನ ನೀಡಲು ಹಲವಾರು ದೊಡ್ಡ ಘೋಷಣೆಗಳನ್ನು ಮಾಡಿದರು.
ನವದೆಹಲಿ: ಗೋವಾದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯ ಮೊದಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಹಲವಾರು ದೊಡ್ಡ ಘೋಷಣೆಗಳನ್ನು ಮಾಡಿದರು. ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಶುಕ್ರವಾರ ಹಣಕಾಸು ಸಚಿವರು ಪ್ರಸ್ತಾಪಿಸಿದರು. ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಲಾಗುವುದು ಎಂದರು. 1 ಅಕ್ಟೋಬರ್ 2019 ರ ನಂತರ ರೂಪುಗೊಂಡ ಕಂಪನಿಗಳ ಮೇಲೆ 15 ಪ್ರತಿಶತದಷ್ಟು ತೆರಿಗೆ ಬಗ್ಗೆ ವಿತ್ತ ಸಚಿವರು ಪ್ರಸ್ತಾಪಿಸಿದರು.
ನಿರ್ಮಲಾ ಸೀತಾರಾಮನ್ ತೆರಿಗೆ ವಿನಾಯಿತಿ ಪ್ರಕಟಿಸಿದ ಬೆನ್ನಲ್ಲೇ, ಷೇರು ಮಾರುಕಟ್ಟೆಯಲ್ಲೂ ತೀಕ್ಷ್ಣವಾದ ಪ್ರವೃತ್ತಿ ಕಂಡಿತು ಮತ್ತು ಸೆನ್ಸೆಕ್ಸ್ ಸುಮಾರು 900 ಪಾಯಿಂಟ್‌ಗಳಿಗೆ ಜಿಗಿದಿದೆ. ಈ ಸಮಯದಲ್ಲಿ, ಹಣಕಾಸು ಸಚಿವರು ಮ್ಯಾಟ್ ಅನ್ನು ಸಂಪೂರ್ಣವಾಗಿ ರದ್ದುಪಡಿಸುವುದಾಗಿ ಘೋಷಿಸಿದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಮೇಕ್ ಇನ್ ಇಂಡಿಯಾ'ದಲ್ಲಿ ಹೂಡಿಕೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಅದೇ ಸಮಯದಲ್ಲಿ, ಷೇರು ಮಾರಾಟದಿಂದ ಬಂಡವಾಳ ಲಾಭದ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಬಾರದು ಎಂದೂ ಅವರು ಹೇಳಿದರು.
ಹಣಕಾಸು ಸಚಿವರ ದೊಡ್ಡ ಪ್ರಕಟಣೆ:
- ಕಾರ್ಪೊರೇಟ್ ಇಂಡಿಯಾಗೆ 1.5 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್.
- ಕಾರ್ಪೊರೇಟ್ ತೆರಿಗೆಯನ್ನು ರದ್ದುಗೊಳಿಸುವ ಪ್ರಸ್ತಾಪ.
- MAT ಅನ್ನು ಸಂಪೂರ್ಣವಾಗಿ ಕೈಬಿಡುವ ಪ್ರಕಟಣೆ.
- ಎಫ್‌ಪಿಐಎಸ್ ಬಂಡವಾಳ ಲಾಭ ತೆರಿಗೆಗೆ ಒಳಪಡುವುದಿಲ್ಲ.
- ಯಾವುದೇ ವಿನಾಯಿತಿ ಇಲ್ಲದೆ ಕಾರ್ಪೊರೇಟ್ ತೆರಿಗೆ 22% ಆಗಿರುತ್ತದೆ.
- ಸೆಸ್ ಮತ್ತು ಹೆಚ್ಚುವರಿ ಶುಲ್ಕದೊಂದಿಗೆ 25.17% ತೆರಿಗೆ ಇರುತ್ತದೆ.
- ಈಕ್ವಿಟಿ ಕ್ಯಾಪಿಟಲ್ ಲಾಭಗಳು ಹೆಚ್ಚುವರಿ ಶುಲ್ಕವಾಗುವುದಿಲ್ಲ.
- ಎಸ್‌ಟಿಟಿ ಪಾವತಿಸುವ ಹೂಡಿಕೆದಾರರಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ.
- ಜುಲೈ 5 ರ ಮೊದಲು ಮರುಖರೀದಿಗೆ 20% ತೆರಿಗೆ ಇರುವುದಿಲ್ಲ.
- ಉತ್ಪಾದನಾ ಕಂಪನಿಗಳಿಗೆ ತೆರಿಗೆ ಕಡಿಮೆಯಾಗುತ್ತದೆ.
MSME ಗೂ ಲಾಭ:
ಇದಕ್ಕೂ ಮುನ್ನ ಗುರುವಾರ, ಹಣಕಾಸು ಸಚಿವರು ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಸಾಲದ ಬೆಳವಣಿಗೆಯನ್ನು ಹೆಚ್ಚಿಸಿದರು. ಇದರ ನಂತರ, ಮಾರ್ಚ್ 2020 ರವರೆಗೆ ಎಂಎಸ್‌ಎಂಇ ಸಾಲವನ್ನು ಎನ್‌ಪಿಎ ಎಂದು ಘೋಷಿಸುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. ಇದಲ್ಲದೆ NBFCs ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಹಣಕಾಸು ಸಚಿವರು ಹೇಳಿದರು. ದೇಶದಲ್ಲಿ ಸಾಲ ತೆಗೆದುಕೊಳ್ಳಲು ಜನರು ಹೆಚ್ಚು ಹೆಚ್ಚು ಮುಂದೆ ಬರಬೇಕು. ಬ್ಯಾಂಕುಗಳು 400 ಜಿಲ್ಲೆಗಳಲ್ಲಿ ಸಾಲ ಮೇಳಗಳನ್ನು ಸ್ಥಾಪಿಸಲಿವೆ ಎಂದು ಅವರು ಕರೆ ನೀಡಿದರು.