ರೈತರಿಗೆ ಸರ್ಕಾರದ ಗಿಫ್ಟ್; 6680 ಕೋಟಿ ರೂ. ಪರಿಹಾರ ಪ್ಯಾಕೇಜ್`ಗೆ ಕೇಂದ್ರದ ಅಸ್ತು
ಮಹಾರಾಷ್ಟ್ರಕ್ಕೆ ಅತಿ ಹೆಚ್ಚು ಅಂದರೆ 4700 ಕೋಟಿ ರೂ. ನೀಡಲಾಗಿದೆ.
ನವದೆಹಲಿ: ಮೋದಿ ಸರ್ಕಾರ ಬಜೆಟ್ ಗೂ ಮೊದಲು ರೈತರಿಗೆ ದೊಡ್ಡ ಉಡುಗೊರೆಯನ್ನು ಘೋಷಿಸಿದೆ. ಝೀ ಬ್ಯುಸಿನೆಸ್ ಪ್ರಕಾರ, ನಾಲ್ಕು ರಾಜ್ಯಗಳ ರೈತರ 6680 ಕೋಟಿ ರೂ. ಪರಿಹಾರ ಪ್ಯಾಕೇಜ್ ಗೆ ಕೇಂದ್ರ ಸರಕಾರ ಅನುಮೋದಿನೆ ನೀಡಿದೆ. ಆಂಧ್ರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕ ರೈತರು ಈ ಪರಿಹಾರ ಪ್ಯಾಕೇಜ್ ನ ಪ್ರಯೋಜನ ಪಡೆಯಲಿದ್ದಾರೆ.
ಈ ರಾಜ್ಯಗಳಲ್ಲಿ ರೈತರು ಬರದಿಂದ ಬಳಲುತ್ತಿದ್ದು ಸರ್ಕಾರದ ನಿರ್ಧಾರವು ಅವರಿಗೆ ಹೆಚ್ಚಿನ ಪರಿಹಾರ ನೀಡುತ್ತದೆ. ಪರಿಹಾರ ಪ್ಯಾಕೇಜ್ ಅಡಿಯಲ್ಲಿ ಆಂಧ್ರಪ್ರದೇಶಕ್ಕೆ 900 ಕೋಟಿ ರೂ., ಗುಜರಾತ್ಗೆ 130 ಕೋಟಿ ರೂ., ಮಹಾರಾಷ್ಟ್ರಕ್ಕೆ 4700 ಕೋಟಿ ರೂ. ಮತ್ತು ಕರ್ನಾಟಕಕ್ಕೆ 950 ಕೋಟಿ ರೂ. ನೀಡಲಾಗಿದೆ.
ಕಳೆದ ತಿಂಗಳು, ಕೇಂದ್ರ ಸರಕಾರದ ಕೆಲವು ಅಧಿಕಾರಿಗಳು ಬರ ಪೀಡಿತ ರಾಜ್ಯಗಳಿಗೆ ಭೇಟಿ ನೀಡಿದ್ದರು. ಆ ವೇಳೆ ಬರ ಪೀಡಿತ ರಾಜ್ಯಗಳಿಗೆ ರೈತರಿಗೆ ಶೀಘ್ರದಲ್ಲೇ ಸರ್ಕಾರದಿಂದ ಪರಿಹಾರ ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತು.
ಸಣ್ಣ ಮತ್ತು ಅತಿದೊಡ್ಡ ರೈತರ ಆದಾಯದಲ್ಲಿ ಕಡಿತದ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ವಿಶೇಷವಾಗಿ ಪ್ರಯತ್ನಿಸುತ್ತಿದೆ. ಪ್ರದೇಶದ ಸಮಸ್ಯೆಗಳನ್ನು ಪರಿಹರಿಸಲು ಅಲ್ಪಾವಧಿಯ ಮತ್ತು ದೀರ್ಘಕಾಲೀನ ಪರಿಹಾರಗಳನ್ನು ಒದಗಿಸಲು ಕೃಷಿ ಸಚಿವಾಲಯ ಹಲವು ಆಯ್ಕೆಗಳನ್ನು ಶಿಫಾರಸು ಮಾಡಿದೆ.
ಇದಲ್ಲದೆ, ಈ ಬಜೆಟ್ನಲ್ಲಿ ರೈತರಿಗೆ ಹೆಚ್ಚಿನ ಪರಿಹಾರ ನಿರೀಕ್ಷಿಸಲಾಗಿದೆ. ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಈ ಬಜೆಟ್ನಲ್ಲಿ ಕೇಂದ್ರ ವಿಮೆ ಯೋಜನೆಗೆ ಕೇಂದ್ರ ಸರ್ಕಾರವು ಹಣವನ್ನು ಸಂಗ್ರಹಿಸಬಹುದು. ಪ್ರಧಾನ ಮಂತ್ರಿಯ ಬೆಳೆ ವಿಮಾ ಯೋಜನೆಗೆ ಸರಕಾರವು 15,000 ಕೋಟಿ ರೂಪಾಯಿಗಳನ್ನು ನೀಡಬಹುದು. ಹಿಂದಿನ ಬಜೆಟ್ನಲ್ಲಿ 13 ಸಾವಿರ ಕೋಟಿ ರೂಪಾಯಿಗಳನ್ನು ಸರಕಾರದಿಂದ ಬಿಡುಗಡೆ ಮಾಡಲಾಗಿದೆ.
ಅಲ್ಲದೆ, ಅಸ್ತಿತ್ವದಲ್ಲಿರುವ ಬೆಳೆ ವಿಮೆ ಯೋಜನೆಗಳ ರಚನೆಯಲ್ಲಿ ಬದಲಾವಣೆಗಳನ್ನು ಮಾಡಬಹುದು. ಈ ಬದಲಾವಣೆ ವೇಳೆ ಸಣ್ಣ ಇಳುವರಿದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನಂಬಲಾಗಿದೆ. ಬ್ಯಾಂಕ್ ಗಳಿಂದ ಸಾಲ ಪಡೆಯದೇ ಇರುವ ರೈತರು ಇದರ ಲಾಭ ಪಡೆಯಲಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಬೆಳೆ ವಿಮಾ ಯೋಜನೆಗಳ ಪ್ರಯೋಜನಗಳ ವ್ಯಾಪ್ತಿಯನ್ನು ಸಹ ಹೆಚ್ಚಿಸಬಹುದು. ಸಾಲ ಪಡೆಯದ ರೈತರಿಗೆ ಸಹ ಪರಿಹಾರ ನೀಡಲು ಸರ್ಕಾರ ಯೋಜಿಸುತ್ತಿದೆ. ಇದಲ್ಲದೆ, ಬ್ಯಾಂಕಿಂಗ್ ನೆಟ್ವರ್ಕ್ ಹೊರಗೆ ವಾಸಿಸುವ ರೈತರು ಸಹ ವಿಮಾ ಯೋಜನೆಯ ಲಾಭ ಪಡೆಯುತ್ತಾರೆ. ನೀತಿ ಆಯೋಗ ಈ ಬದಲಾವಣೆಗಳನ್ನು ಶಿಫಾರಸು ಮಾಡಿದೆ.