India Post Recruitment 2022: ಭಾರತೀಯ ಅಂಚೆ ಇಲಾಖೆಯಲ್ಲಿ 10ನೇ ಕ್ಲಾಸ್ ಪಾಸ್‌ ಆದವರಿಗಾಗಿ ಉದ್ಯೋಗಾವಕಾಶವಿದೆ. ಈ ಕುರಿತಂತೆ ಅಧಿಸೂಚನೆಯನ್ನು ಬಿಡುಗಡೆ ಮಾಡಿರುವ ಇಂಡಿಯಾ ಪೋಸ್ಟ್, ಮೇಲ್ ಮೋಟಾರ್ಸ್ ಸೇವಾ ಇಲಾಖೆಯ ಅಡಿಯಲ್ಲಿ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 10 ಮಾರ್ಚ್ 2022 ರೊಳಗೆ ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡಬೇಕು. 


COMMERCIAL BREAK
SCROLL TO CONTINUE READING

ಇಂಡಿಯಾ ಪೋಸ್ಟ್ ನೇಮಕಾತಿ 2022: ಹುದ್ದೆಯ ವಿವರಗಳು
ಹುದ್ದೆ: ಸ್ಟಾಫ್ ಕಾರ್ ಡ್ರೈವರ್ (ಆರ್ಡಿನರಿ ಗ್ರೇಡ್)
ಹುದ್ದೆಯ ಸಂಖ್ಯೆ: 17
ಸಂಬಳ: ಲೆವೆಲ್-2 ರಂತೆ 


ಇದನ್ನೂ ಓದಿ - PUSHPA SAREE:ಮಾರುಕಟ್ಟೆಗೆ ಬಂತು ಶ್ರೀವಲ್ಲಿ ಸೀರೆ.. ಹೆಂಗಳೆಯರ ಮನ ಗೆಲ್ಲುತ್ತಾ ಪುಷ್ಪ ಸಾರೀ!


ಇಂಡಿಯಾ ಪೋಸ್ಟ್ ನೇಮಕಾತಿ (India Post Recruitment) 2022: ವಿಭಾಗವಾರು ಹುದ್ದೆಗಳ ವಿವರಗಳು
ಮೇಲ್ ಮೋಟಾರ್ ಸೇವೆ ಕೊಯಮತ್ತೂರು: 11
ಈರೋಡ್ ವಿಭಾಗ: 02
ನೀಲಗಿರಿ ವಿಭಾಗ: 01
ಸೇಲಂ ಪಶ್ಚಿಮ ವಿಭಾಗ: 02
ತಿರುಪುರ್ ವಿಭಾಗ: 01


ಇಂಡಿಯಾ ಪೋಸ್ಟ್ ನೇಮಕಾತಿ 2022: ವಯಸ್ಸಿನ ಮಿತಿ
ಗರಿಷ್ಠ ವಯಸ್ಸಿನ ಮಿತಿ: 56 ವರ್ಷಗಳು


ಇಂಡಿಯಾ ಪೋಸ್ಟ್ ನೇಮಕಾತಿ 2022: ಅರ್ಹತೆ
ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಮಾನ್ಯವಾದ ಚಾಲನಾ ಪರವಾನಗಿಯನ್ನು (Driving License) ಸಹ ಹೊಂದಿರಬೇಕು. ಚಾಲನಾ ಪರವಾನಗಿ ಭಾರೀ ಮತ್ತು ಲಘು ವಾಹನಗಳೆರಡಕ್ಕೂ ಇರಬೇಕು. ಅಭ್ಯರ್ಥಿಯು ಮೂರು ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು.


ಇದನ್ನೂ ಓದಿ- "ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಇಚ್ಛೆಯ ಉಡುಪು ಧರಿಸುವ ಹಕ್ಕಿದೆ"


ಇಂಡಿಯಾ ಪೋಸ್ಟ್ ನೇಮಕಾತಿ 2022: ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು, ಅಧಿಸೂಚನೆಯಲ್ಲಿ ನಮೂದಿಸಲಾದ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ. ಜೊತೆಗೆ ದಾಖಲೆಗಳ ಸ್ವಯಂ ದೃಢೀಕರಿಸಿದ ಪ್ರತಿಗಳನ್ನು, ವಯಸ್ಸಿನ ಪುರಾವೆ, ಫೋಟೋ, ಜಾತಿ ಪ್ರಮಾಣಪತ್ರ, ಅನುಭವ ಪ್ರಮಾಣಪತ್ರ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳನ್ನು ನಮೂನೆಯೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಿ.


ವ್ಯವಸ್ಥಾಪಕರಿಗೆ,
ಮೇಲ್ ಮೋಟಾರ್ ಸೇವೆ,
ಗೂಡ್ಸ್ ಶೆಡ್ ರಸ್ತೆಗಳು,
ಕೊಯಮತ್ತೂರು, 641001.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.