ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ (UT) ತಪ್ಪಾದ ನಕ್ಷೆಯ ಲಿಂಕ್ ಅನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ವಿಕಿಪೀಡಿಯಾಗೆ ಸೂಚನೆ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


COMMERCIAL BREAK
SCROLL TO CONTINUE READING

Wikipedia ದ ಭಾರತ-ಭೂತಾನ್ ಪುಟದಲ್ಲಿ ಲಿಂಕ್ ಆಗಿರುವ ನಕ್ಷೆಯಲ್ಲಿ ಅಕ್ಸಾಯಿ ಚಿನ್ ಪ್ರಾಂತ್ಯವನ್ನು ಚೀನಾ ಭಾಗವಾಗಿ ಬಿಂಬಿಸಲಾಗಿದೆ ಎಂದು ಮಾಧ್ಯಮವೊಂದರಲ್ಲಿ ವರದಿಯಾಗಿದೆ.


ಇದನ್ನು ಓದಿ- ಲಡಾಖ್ ನ ಲೇಹ್ ನ್ನು ತಪ್ಪಾಗಿ ತೋರಿಸಿದ ಟ್ವಿಟ್ಟರ್ ಗೆ ಕೇಂದ್ರದಿಂದ ನೋಟಿಸ್


ಅಷ್ಟೇ ಅಲ್ಲ ಈ ನಿಟ್ಟಿನಲ್ಲಿ ನವೆಂಬರ್ 27ರಂದು ಕೇಂದ್ರ ಸರ್ಕಾರದ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಐಟಿ ಕಾಯ್ದೆ 2000 ರ ಸೆಕ್ಷನ್ 69ಎ ಅಡಿ ಆದೇಶ ಕೂಡ ಹೊರಡಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.


ಈ ಕುರಿತು ವರದಿ ಪ್ರಕಟಿಸಿರುವ ಸುದ್ದಿ ಸಂಸ್ಥೆ PTI, Twitter ಬಳಕೆದಾರರೊಬ್ಬರು India-Bhutan Relationship ಕುರಿತಾದ ವಿಕಿಪೀಡಿಯ ಪುಟದಲ್ಲಿ ಜಮ್ಮು ಮತ್ತು ಕಾಶ್ಮೀರ ಮ್ಯಾಪ್ ಅನ್ನು ತಪ್ಪಾಗಿ ತೋರಿಸಲಾಗಿದೆ ಎಂಬುದನ್ನು ಗಮನಕ್ಕೆ ತಂದಿದ್ದರು. ಜೊತೆಗೆ ಈ ಕುರಿತು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಕೂಡ ಅವರು ಒತ್ತಾಯಿಸಿದ್ದರು.


ಇದನ್ನು ಓದಿ- ಲೇಹ್ ನ್ನು ಚೀನಾದ ಭಾಗವಾಗಿ ತೋರಿಸಿದ್ದ ಟ್ವಿಟ್ಟರ್ ನಿಂದ ಲಿಖಿತ ಕ್ಷಮೆಯಾಚನೆ


ಈ ಕುರಿತು ವಿಕಿಪೀಡಿಯಾಗೆ ಸೂಚನೆ ನೀಡಿರುವ ಕೇಂದ್ರ  MeitY ಸಚಿವಾಲಯ  ಮ್ಯಾಪ್ ಗೆ ಸಂಬಂಧಿಸಿದ ಲಿಂಕ್ ಅನ್ನು ಅಳಿಸಿ ಹಾಕಲು ಸೂಚನೆ ನೀಡಿದ್ದು, ಇದು ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.


ಅಗತ್ಯವಿರುವ ಬದಲಾವಣೆಗಳನ್ನು ಮಾಡದೆ ಹೋದಲ್ಲಿ, ಇಡೀ ಪ್ಲಾಟ್‌ಫಾರ್ಮ್‌ಗೆ ಪ್ರವೇಶವನ್ನು ನಿರ್ಬಂಧಿಸುವುದು ಸೇರಿದಂತೆ ವಿಕಿಪೀಡಿಯ ವಿರುದ್ಧ ಕೇಂದ್ರವು ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ಮೂಲಗಳು PTI ಗೆ ವರದಿ ಮಾಡಿವೆ.


ಇದನ್ನು ಓದಿ- Twitter ಗೆ ಟಕ್ಕರ್ ನೀಡಲು ಬಂದ ದೇಶಿ ಪ್ಲಾಟ್ಫಾರ್ಮ್ Tooter, ಖಾತೆ ತೆರೆದ Modi, ಅಮಿತ್ ಷಾ


ಆದರೆ ತಪ್ಪಾದ ನಕ್ಷೆಯನ್ನು ಬಿಮ್ಬಿಸಿದ್ದಕ್ಕೆ  ಈ ವರ್ಷ ಯಾವುದೇ ಒಂದು ವೆಬ್ ಸೈಟ್ ವಿರುದ್ಧ ಭಾರತ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದು ಇದೆ ಮೊದಲಲ್ಲ.


ಈ ವರ್ಷದ ನವೆಂಬರ್‌ ತಿಂಗಳಿನಲ್ಲಿ, ಲೇಹ್ ಅನ್ನು Ladakh-UT ಭಾಗವಾಗಿ ತೋರಿಸುವ ಬದಲು ಜಮ್ಮು ಮತ್ತು ಕಾಶ್ಮೀರದ ಭಾಗವಾಗಿ ಬಿಂಬಿಸಿದ್ದಕ್ಕೆ ಕೇಂದ್ರ ಸರ್ಕಾರ ಮೈಕ್ರೋಬ್ಲಾಗಿಂಗ್ ಸೈಟ್ Twitter ಗೆ ನೋಟಿಸ್ ಜಾರಿಗೊಳಿಸಿತ್ತು ಎಂಬುದು ಇಲ್ಲಿ ಗಮನಾರ್ಹ ಸಂಗತಿ.