Gramin Ujala Yojana 2021: ಸಾರ್ವಜನಿಕ ವಲಯದ ಎನರ್ಜಿ  ಎಫಿಸಿಯನ್ಸಿ ಸರ್ವಿಸೆಸ್ ಲಿಮಿಟೆಡ್ (EESL) ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರವಾಗಿರುವ ವಾರಣಾಸಿ ಸೇರಿದಂತೆ ದೇಶದ ಒಟ್ಟು ಐದು ನಗರಗಳ ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣ್ ಉಜಾಲಾ ಹೆಸರಿನ ಯೋಜನೆಯನ್ನು ಆರಂಭಿಸಲಿದೆ. PTI ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಎನರ್ಜಿ ಎಫಿಸಿಯನ್ಸಿಯನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುವುದು ಹಾಗೂ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಜನರ ಹಣ ಉಳಿತಾಯ ಹೆಚ್ಚುಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಚೀನಾ ಮೇಲೆ ಭಾರತದ ಮತ್ತೊಂದು 'ಕ್ವಾಲಿಟಿ ಅಟ್ಯಾಕ್', ಇಂಪೋರ್ಟೆಡ್ LED ಸರಕುಗಳ ಮೇಲೆ ಭಾರಿ ಪೆಟ್ಟು


10-10 ರೂ. ಪ್ರತಿ ಬಲ್ಬ್ ಬೆಲೆಯಲ್ಲಿ ಖರೀದಿಸಬಹುದು LED Bulb price
ಈ ಯೋಜನೆಯನ್ನು ಹಂತವಾರು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ಬಲ್ಬ್ ಗೆ 10-10 ರೂಗಳಂತೆ ಪ್ರತಿ ಕುಟುಂಬಕ್ಕೆ 3-4 ಬಲ್ಬ್ ಗಳನ್ನು ವಿತರಿಸಲಾಗುವ ಗುರಿ ಹೊಂದಲಾಗಿದೆ. ಮುಂದಿನ ತಿಂಗಳು 2021 ರ ಜನವರಿ ಎರಡನೇ ವಾರದಿಂದ ಗ್ರಾಮೀಣ ಉಜಲಾ ಯೋಜನೆ ಹೆಸರಿನಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಬಹುದು ಎಂದು ಯೋಜನೆಗೆ ಸಂಬಂಧಿಸಿದ ಮೂಲಗಳು ಮಾಹಿತಿ ನೀಡಿವೆ. ಇದರ ಅಡಿಯಲ್ಲಿ ಸುಮಾರು 15 ರಿಂದ 20 ಕೋಟಿ ಗ್ರಾಮೀಣ ಕುಟುಂಬಗಳಿಗೆ 60 ಕೋಟಿ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸುವ ಯೋಜನೆ ರೂಪಿಸಲಾಗಿದೆ.


ಇದನ್ನು ಓದಿ-LED lights ಬಿಸಿನೆಸ್ ಆರಂಭಿಸಿ, ಕೇವಲ ರೂ.5000 ಹೂಡಿಕೆಯ ನಂತರ...?


ಎಪ್ರಿಲ್ ವರೆಗೆ ದೇಶಾದ್ಯಂತ ಯೋಜನೆ ಜಾರಿಗೆ ತರಲಾಗುವುದು Gramin Ujala Yojana till April
ಆರಂಭದಲ್ಲಿ ಇದನ್ನು ಉತ್ತರ ಪ್ರದೇಶದ ವಾರಣಾಸಿಯ ಗ್ರಾಮೀಣ ಪ್ರದೇಶಗಳಲ್ಲಿ (ಪ್ರಧಾನ ಮಂತ್ರಿ ಸಂಸದೀಯ ಕ್ಷೇತ್ರ), ಬಿಹಾರದ ಅರಾ, ಮಹಾರಾಷ್ಟ್ರದ ನಾಗ್ಪುರ, ಗುಜರಾತ್‌ನ ವಡ್ನಗರ ಮತ್ತು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜಾರಿಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ. ಮುಂದಿನ ಮೂರು ತಿಂಗಳೊಳಗೆ ಅಂದರೆ ಏಪ್ರಿಲ್ ವೇಳೆಗೆ ಇಡೀ ದೇಶದಲ್ಲಿ ಈ ಯೋಜನೆಯನ್ನು ಜಾರಿಗೆ ತರುವ ಗುರಿ ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.


ಇದನ್ನು ಓದಿ- ದೇಶದಲ್ಲಿ ಎಷ್ಟು ಲ್ಯಾಂಟರ್ನ್ ಬಲ್ಬ್‌ ಮಾರಾಟವಾಗುತ್ತೆ ಎಂದು ಪ್ರಧಾನಿ ಗೋಯಲ್‍ರನ್ನು ಕೇಳಿದಾಗ...!


ವಾರ್ಷಿಕವಾಗಿ 50 ಸಾವಿರ ಕೋಟಿ ರೂ.ಉಳಿತಾಯದ ಗುರಿ 50,000 crore will be saved annually
ಇಂಧನ ಸಚಿವಾಲಯದ ಅಡಿಯಲ್ಲಿ, ಎನ್‌ಟಿಪಿಸಿ, ಪಿಎಫ್‌ಸಿ, ಆರ್‌ಇಸಿ ಮತ್ತು ಪವರ್ ಗ್ರಿಡ್‌ನ ಜಂಟಿ ಉದ್ಯಮ ಸಂಸ್ಥೆ ಈಗಾಗಲೇ ಉಜಲಾ ಕಾರ್ಯಕ್ರಮದಡಿ 36.50 ಕೋಟಿಗೂ ಹೆಚ್ಚು ಎಲ್‌ಇಡಿ ಬಲ್ಬ್‌ಗಳನ್ನು ಪ್ರತಿ ಬಲ್ಬ್‌ಗೆ 70 ರೂ. ದರದಲ್ಲಿ ವಿತರಿಸಿವೆ. ಆದರೆ ಅದರಲ್ಲಿ ಶೇ.20 ರಷ್ಟು ಬಲ್ಬ್ ಮಾತ್ರ. ಗ್ರಾಮೀಣ ಪ್ರದೇಶದಲ್ಲಿ ವಿತರನೆಯಾಗಿವೆ. ಗ್ರಾಮೀಣ ಉಜಲಾ ಕಾರ್ಯಕ್ರಮದ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಮೂಲಗಳು, ಈ ಯೋಜನೆಯ ಅನುಷ್ಠಾನದಿಂದ ವಾರ್ಷಿಕವಾಗಿ ಸುಮಾರು 9324 ಕೋಟಿ ಯುನಿಟ್ ವಿದ್ಯುತ್ ಉಳಿತಾಯವಾಗಲಿದ್ದು, ಇಂಗಾಲದ ಹೊರಸೂಸುವಿಕೆಯನ್ನು ವಾರ್ಷಿಕವಾಗಿ 7.65 ದಶಲಕ್ಷ ಟನ್ ಗಳಷ್ಟು ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಈ ಯೋಜನೆಯಿಂದ ಇಂಧನ ಉಳಿತಾಯದ ರೂಪದಲ್ಲಿ ಸುಮಾರು 50 ಸಾವಿರ ಕೋಟಿ ರೂ.ವಾರ್ಷಿಕ ಉಳಿತಾಯದ ಅಂದಾಜು ವ್ಯಕ್ತಪಡಿಸಲಾಗಿದೆ. 


ಇದನ್ನು ಓದಿ- LED ಬಲ್ಬ್'ನಿಂದ ಲಭ್ಯವಾಗಲಿದೆ ಹೈಸ್ಪೀಡ್ ಇಂಟರ್ನೆಟ್!


ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಯಾವುದೇ ಸಬ್ಸಿಡಿ ಪಡೆಯಲಾಗುವುದಿಲ್ಲ No subsidy will be taken from center or states
ಸ್ಥಿರ ಮತ್ತು ಉತ್ತಮ ಜೀವನಕ್ಕೆ ಉತ್ತೇಜನ ನೀಡಲಿರುವ ಈ ಯೋಜನೆ, ಜನರ ಹಣವನ್ನು ವಿದ್ಯುತ್ ಬಿಲ್ ರೂಪದಲ್ಲಿ ಉಳಿತಾಯ ಮಾಡಲಿದೆ. ಅಲ್ಲದೆ, ಎಲ್‌ಇಡಿ ಬಲ್ಬ್‌ಗಳ ಬೇಡಿಕೆ ಹೆಚ್ಚಾಗಿ ಹೂಡಿಕೆಯೂ ಹರಿದುಬರಲಿದೆ. ಈ ಕಾರ್ಯಕ್ರಮಕ್ಕಾಗಿ ಕೇಂದ್ರದಿಂದ ಅಥವಾ ರಾಜ್ಯಗಳಿಂದ ಯಾವುದೇ ಸಬ್ಸಿಡಿ ತೆಗೆದುಕೊಳ್ಳುವುದಿಲ್ಲ ಮತ್ತು ಇಇಎಸ್‌ಎಲ್‌ನಿಂದಲೇ ಯಾವುದೇ ಖರ್ಚುಗಳನ್ನು ಮಾಡಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ.