ಪಾಟ್ನಗರ್: ಪಾರ್ಸೆಲ್ ಬಾಂಬ್ ಸ್ಫೋಟಿಸಿದ ಪರಿಣಾಮ ವರ ಮತ್ತು ಆತನ ಅಜ್ಜಿ ಸಾವನ್ನಪ್ಪಿದ ಧಾರುಣ ಘಟನೆ ಒರಿಸ್ಸಾದ ಬೋಲಾಂಗೀರ್ ಜಿಲ್ಲೆಯ ಪಾಟ್ನಗರ್'ನಲ್ಲಿ ಶುಕ್ರವಾರ ನಡೆದಿದೆ. 


COMMERCIAL BREAK
SCROLL TO CONTINUE READING

ಈ ಘಟನೆಯಲ್ಲಿ ವಧುವಿಗೂ ವಿವರ ಗಾಯವಾಗಿದೆ. ಅಲ್ಲದೆ, ವರನ ಅಜ್ಜಿಯನ್ನು ಬೋಲಾಂಗೀರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ ಆಕೆ ಮೃತಪಟ್ಟಿದ್ದಾರೆ. ಮದುವೆಯಲ್ಲಿ ಉಡುಗೊರೆಯಾಗಿ ಬಂದಿದ್ದ, ಪಾರ್ಸೆಲ್ ಅನ್ನು ಬ್ರಹ್ಮಪುರ ಪ್ರದೇಶದಲ್ಲಿ ವಾಸವಾದ್ದ ಈ ಕುಟುಂಬ ತೆರೆದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. 


Odishatv.in ಪ್ರಕಾರ, ಗಾಯಗೊಂಡವರನ್ನು ಮೊದಲಿಗೆ ಪಾಟ್ನಗರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದಾಗ್ಯೂ, ಅವರ ಪರಿಸ್ಥಿತಿಯು ಹದಗೆಟ್ಟ ಕಾರಣ ವಧು ಮತ್ತು ಅಜ್ಜಿಯನ್ನು ಬೊಲಾಂಗೀರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಏತನ್ಮಧ್ಯೆ, ಬರ್ಲಾ ಆಸ್ಪತ್ರೆಗೆ ಸ್ಥಳಾಂತರಗೊಂಡ ವರ ಕೂಡ ಸಾವನ್ನಪ್ಪಿದರು ಎನ್ನಲಾಗಿದೆ. 


ವರದಿಗಳ ಪ್ರಕಾರ, ದಂಪತಿಗಳಾದ ಸೌಮ್ಯಶೇಖರ್ ಸಾಹು ಮತ್ತು ರೀಮಾ ಸಾಹು ಫೆಬ್ರವರಿ 18, 2018 ರಂದು ವಿವಾಹವಾಗಿದ್ದರು. ಫೆಬ್ರವರಿ 21, 2018 ರಂದು ನಡೆದ ಸ್ವಾಗತ ಸಮಾರಂಭದಲ್ಲಿ ಈ ಜೋಡಿಗೆ ಅತಿಥಿಯೊಬ್ಬರು(ಹೆಸರು ನಮೂದಿಸಿರಲಿಲ್ಲ) ಉಡುಗೊರೆ ನೀಡಿದ್ದರು. 


ಶುಕ್ರವಾರ ಇತರ ಕುಟುಂಬ ಸದಸ್ಯರೊಂದಿಗೆ ಉಡುಗೊರೆಗಳನ್ನು ತೆಗೆಯುತ್ತಿರುವಾಗ ಈ ಘಟನೆ ಸಂಭವಿಸಿದ್ದು, ಅದು ಕಚ್ಚಾ ಬಾಂಬ್ ಆದ ಕಾರಣದಿಂದ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.


ಈ ಸಂಬಂಧ ಬೋಲಾಂಗೀರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.