ಆಂಧ್ರಪ್ರದೇಶ(ಶ್ರೀಹರಿಕೋಟ): ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ಸೇವೆ ಕಲ್ಪಿಸುವ ನಿಟ್ಟಿನಲ್ಲಿ  ಜಿಸ್ಯಾಟ್ 29 ಉಪಗ್ರಹವನ್ನು ಇಸ್ರೋ ಬುಧವಾರ ಯಶಸ್ವಿಯಾಗಿ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದೆ.


COMMERCIAL BREAK
SCROLL TO CONTINUE READING

ಸೆಟಲೈಟ್ ಲಾಂಚ್ ವೆಹಿಕಲ್(GSLV-mk III) 43.4 ಮೀಟರ್ ಎತ್ತರವಿದ್ದು, 640 ಟನ್ ಭಾರ ಹೊಂದಿದೆ. ಇದು ಹತ್ತು ವರ್ಷಗಳ ಕಾಲ ಕಾರ್ಯಾಚರಣೆ ನಡೆಸಲಿದೆ ಎಂದು ಇಸ್ರೋ ಉಡಾವಣೆ ನಂತರ ತಿಳಿಸಿದ್ದಾರೆ. 



"ಜಿಎಸ್ಎಲ್ವಿ-ಎಂಕೆಐಐಐ-ಡಿ 2 ಎರಡನೇ ಅಭಿವೃದ್ಧಿ ವಿಮಾನ ಇದು ಜಿಸ್ಯಾಟ್ -29 ಉಡಾವಣೆ ಮಾಡಲು ಬಳಸಲಾಗಿದೆ,ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ವಲಯದಲ್ಲಿ ಉಪಗ್ರಹವು ಕೇಂದ್ರ ಸರ್ಕಾರದ  ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಸಂಪರ್ಕ ಕಲ್ಪಿಸಲು ಉಪಯುಕ್ತವಾಗಿದೆ" ಎಂದು ಇಸ್ರೋ ಅಧ್ಯಕ್ಷ  ಕೆ ಶಿವನ್ ತಿಳಿಸಿದ್ದಾರೆ.