ನವದೆಹಲಿ: ಶುಕ್ರವಾರ ಮುಕ್ತಾಯಗೊಂಡ 40ನೇ GST ಕೌನ್ಸೆಲಿಂಗ್ ಸಭೆಯಲ್ಲಿ ಒಟ್ಟು ಐದು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಸಭೆ ನಡೆಸಿದ್ದು, ಸಭೆಯಲ್ಲಿ ವ್ಯಾಪಾರಿಗಳಿಗೆ GST return ಪಾವತಿಸುವವರಿಗೆ ಭಾರಿ ಅನುಕೂಲತೆ ಮಾಡಿಕೊಂದಲಾಗಿದೆ ಎಂದು ಹೇಳಿದ್ದಾರೆ. ಲೇಟ್ GST ಪಾವತಿಸುವವರ ಕುರಿತು ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, 5 ಕೋಟಿ ರೂ ಟರ್ನ್ ಓವರ್ ಇರುವ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.


COMMERCIAL BREAK
SCROLL TO CONTINUE READING

ಜನವರಿ 1, 2020ರವರೆಗೆ ಯಾವುದೇ ಶುಲ್ಕ ಇಲ್ಲ
ಒಂದು ವೇಳೆ ಆಗಸ್ಟ್ 2017 ರಿಂದ ಜನವರಿ 2020ರ ಅವಧಿಯಲ್ಲಿ GST return ಫೈಲ್ ಮಾಡದೆ ಇರುವದರ ಮೇಲೆ ವಿಧಿಸಲಾಗುವ ಲೇಟ್ ಫಿ ಅನ್ನು ಮನ್ನಾ ಮಾಡಲಾಗಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗಸ್ಟ್ 2017 ರಿಂದ ಜನವರಿ 2020ರವರೆಗೆ GST return ಫೈಲ್ ಮಾಡದೆ ಇರುವ ಮತ್ತು ತೆರಿಗೆ ಹೊಣೆಗಾರಿಕೆ ಇರದೇ ಇರುವ ವ್ಯಾಪಾರಿಗಳಿಗೆ ಲೇಟ್ ಫಿ ನಿಂದ ವಿನಾಯ್ತಿ ನೀಡಲಾಗುವುದು ಎಂದು ಹೇಳಿದ್ದಾರೆ.


ಬಡ್ಡಿಯನ್ನು ಅರ್ಧಕ್ಕೆ ಇಳಿಸಲಾಗಿದೆ
5 ಕೋಟಿ ರೂ.ಗಳ ವಹಿವಾಟು ಹೊಂದಿರುವ ಸಣ್ಣ ವ್ಯಾಪಾರಿಗಳಿಗೆ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ 2020 ರ ಜಿಎಸ್ಟಿ ಆದಾಯದ ಮೇಲಿನ ಶುಲ್ಕವನ್ನು ಶೇ.18 ರಿಂದ ಶೇ.9ಕ್ಕೆ ಇಳಿಸಲಾಗಿದೆ. ಆದರೆ ಸೆಪ್ಟೆಂಬರ್ 30, 2020 ರೊಳಗೆ ಅವರು ತಮ್ಮ ರಿಟರ್ನ್ ಅನ್ನು ಭರ್ತಿ ಮಾಡಿದವರಿಗೆ ಮಾತ್ರ ಅವರಿಗೆ ಈ ಲಾಭ ಸಿಗಲಿದೆ. ಜುಲೈ 6 ರೊಳಗೆ ಅವರು ಈ  ಕೆಲಸವನ್ನು  ಪೂರ್ಣಗೊಳಿಸಿದರೆ ಅವರಿಗೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ.


ಗರಿಷ್ಟ 3 ಲೇಟ್ ಫೀಸ್ ನಿರ್ಧರಿಸಲಾಗಿದೆ
ಯಾವ ವ್ಯಾಪಾರಿಗಳ ಮೇಲೆ ಟ್ಯಾಕ್ಸ್ ಲೈಯಾಬಿಲಿಟಿ ಇದೆಯೋ ಹಾಗೂ ರಿಟರ್ನ ಫೈಲ್ ಮಾಡದೆ ಇರುವವರಿಗೆ ಗರಿಷ್ಟ ರೂ.500 ರಂತೆ(ಪ್ರತಿ ರಿಟರ್ನ್) ಕ್ಯಾಪ್ ಮಾಡಲಾಗಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ. ಈ ನೆಮ್ಮದಿ ಜನವರಿ 2020ರವರೆಗೆ ಇರಲಿದೆ. 1 ಜುಲೈ 2020 ರಿಂದ 30 ಸೆಪ್ಟೆಂಬರ್ 2020 ರವರೆಗಿನ ಎಲ್ಲ ರಿಟರ್ನ್ ಗಳ ಮೇಲೆ ಈ ಸೌಲಭ್ಯ ಇರಲಿದೆ. ಯಾವ ವ್ಯಾಪಾರಿ ಮೊದಲ ರಿಟರ್ನ್ ಅಂದರೆ GSTR-3B ಪಾವತಿಸಿಲ್ಲವೂ ಅವರು ಮುಂದೆಯೂ ಕೂಡ ರಿಟರ್ನ್ ಪಾವತಿಸುವುದಿಲ್ಲ. ಹೀಗಾಗಿ ಈ ಬಾಕಿಯನ್ನು ಮುಕ್ತಾಯಗೊಳಿಸಲು ಈ ನೆಮ್ಮದಿ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


ಬಡ್ಡಿ ಪಾವತಿಸುವುದರಿಂದ ನೆಮ್ಮದಿ
5 ಕೋಟಿ ರೂ. ಟರ್ನ್ ಓವರ್ ಇರುವ ವ್ಯಾಪಾರಿಗಳಿಗೆ ಲೇಟ ಫೀಸ್ ಹಾಗೂ ಬಡ್ಡಿಯಿಂದ ವಿನಾಯ್ತಿ ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಒಂದು ವೇಳೆ ಮೇ, ಜೂನ್ ಹಾಗೋ ಜುಲೈ 2020 ರ GSTR-3B ಫಾರ್ಮ್  ಅನ್ನು ಸೆಪ್ಟೆಂಬರ್ 30ರೊಳಗೆ ಪಾವತಿಸಿದರೆ ಅವರಿಗೆ ಯಾವುದೇ ರೀತಿಯ ಬಡ್ಡಿ ಅಥವಾ ಲೇಟ್ ಫಿ ವಿಧಿಸಲಾಗುವುದಿಲ್ಲ ಎಂದು ಸಚಿವೆ ಹೇಳಿದ್ದಾರೆ.


GST ನೋಂದಣಿ
GST ರಿಟರ್ನ್ ಕ್ಯಾನ್ಸಲ್ ಆಗದೆ ಇರುವ ವ್ಯಾಪಾರಿಗಳಿಗೆ, ಇದಕ್ಕಾಗಿ ಸೆಪ್ಟೆಂಬರ್ 30, 2020ವರೆಗೆ ಎರಡನೇ ಬಾರಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


ಇದೀಗ ರಾಜ್ಯಗಳೂ ಕೂಡ ಶಾಮೀಲಾಗಿವೆ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಎಲ್ಲ ರಾಜ್ಯಗಳ ವಿತ್ತ ಸಚಿವರು ಭಾಗವಹಿಸಿದ್ದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಈ ಸಭೆಯಲ್ಲಿ ವಿತ್ತ ಸಚಿವರು, ರಾಜ್ಯದ ವಿತ್ತಸಚಿವರುಗಳ ಮನವಿಯನ್ನು ಗಂಭೀರವಾಗಿ ಆಲಿಸಿದ್ದಾರೆ. ಇದೇ ವೇಳೆ ರಾಜ್ಯದ ವಿತ್ತ ಸಚಿವರು ಕೂಡ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.