ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅನುಕೂಲಕರವಾದ ಬಹುಮತವನ್ನು ಪಡೆದುಕೊಂಡಿದೆ ಎಂದು ಹೇಳಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ``ರಾಜ್ಯದ ಫಲಿತಾಂಶವು ಮುಸ್ಲಿಮರನ್ನು ಮೂಲೆಗುಂಪಾಗಿಸುವುದರ ಸಂಕೇತ'' ಎಂದಿದ್ದಾರೆ.  


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ ನಾಯಕರು ಮತದಾರರನ್ನು ತಲುಪಲು ಇಂದು ಮಂದಿರದಿಂದ ಮತ್ತೊಂದು ಮಂದಿರಕ್ಕೆ ಭೇಟಿ ನೀಡಿದ ನಂತರವೇ ತೆರಳುತ್ತಿದ್ದರು. ``ಹೀಗೆ ಮಾಡುವ ಮೂಲಕ ನೀವು ಮತ್ತೊಂದು ಬಜೆಪಿ ಆಗಿ, ಬಿಜೆಪಿಯನ್ನು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ. ಬಿಜೆಪಿ ಮತ್ತು ನಿಮ್ಮೊಂದಿಗೆ ಇರುವ ವ್ಯತ್ಯಾಸಗಳನ್ನು ಮೊದಲು ತೋರಿಸಿ'' ಎಂದು ಓವೈಸಿ ಕಾಂಗ್ರೆಸ್ ನಡೆಯನ್ನು ವ್ಯಂಗ್ಯ ಮಾಡಿದರು. 


ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಚುನಾವಣಾ ಅಭಿಯಾನವನ್ನು ಟಾರ್ಗೆಟ್ ಮಾಡಿ ಮಾತನಾಡಿದ ಓವೈಸಿ, "ಗುಜರಾತ್ನಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ಗೆ ಇದು ಅದ್ಭುತ ಅವಕಾಶವಾಗಿತ್ತು. ಆದರೆ ಅದು ವಿಫಲವಾಗಿದೆ" ಎಂದು ಹೇಳಿದರು. ವ್ಯಾಪಾರ ವಹಿವಾಟುಗಳ ಕೇಂದ್ರ ಸ್ಥಾನವಾಗಿರುವ ಸೂರತ್ನಲ್ಲಿ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಮೇಲೆ ವಿರೋಧ ವ್ಯಕ್ತಪಡಿಸಿದರೂ ಸಹ ಬಿಜೆಪಿ ಗೆದ್ದಿದೆ'' ಎಂದು ಅವರು ಹೇಳಿದರು. 


ಬಿಜೆಪಿ ದೇಶದಲ್ಲಿ ಯಂತ್ರದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ವ್ಯಂಗ್ಯವಾಡಿದ ಅವರು "ಅಖಿಲೇಶ್ ಯಾದವ್ ಅಥವಾ ಅಸದುದ್ದೀನ್ ಓವೈಸಿ ಅಥವಾ ಮಮತಾ ಬ್ಯಾನರ್ಜಿ ಆಗಿರಲಿ, ಬಿಜೆಪಿಯನ್ನು ಪ್ರತ್ಯೇಕವಾಗಿ ಯಾರಿಂದಲೂ ಸೋಲಿಸಲಾಗುವುದಿಲ್ಲ. ಬಿಜೆಪಿಯನ್ನು ಸೋಲಿಸಲು ನಮಗೆ ಯುನೈಟೆಡ್ ಫ್ರಂಟ್ ಅಗತ್ಯವಿದೆ'' ಎಂದು ಹೇಳಿದರು.


ಅಲ್ಲದೆ, ವಿಜಯದ ಉತ್ತುಂಗದಲ್ಲಿರುವ ಬಿಜೆಪಿಗೆ ಸಮಾಧಾನವಾಗಿರುವಂತೆ ಹೇಳಿರುವ ಓವೈಸಿ, ಮಾಜಿ ಪ್ರಧಾನ ಮಂತ್ರಿಗಳಾದ "ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರು ತಮ್ಮ ರಾಜಕೀಯ ವೃತ್ತಿಜೀವನದ ಉತ್ತುಂಗದಲ್ಲಿ ಜನತಾ ಅಧಿಕಾರದಿಂದ ಹೊರಗುಳಿದರು" ಎಂದು ಓವೈಸಿ ನಿದರ್ಶನ ನೀಡಿದರು.  


"ದೇಶದಲ್ಲಿ ವಿರೋಧ ಪಕ್ಷ ದುರ್ಬಲಗೊಂಡಾಗ ಈ ಪ್ರಜಾಪ್ರಭುತ್ವದ ಜನರು ತಮ್ಮನ್ನು ವಿರೋಧಿಸಿ ಯಾರ ಪಕ್ಷಗಳಿಗೆ ಮತ ಚಲಾಯಿಸುತ್ತಾರೆ'' ಎಂದು ಅವರು ನುಡಿದರು. 


ಇಂದು ವೇಳೆ ಬಿಜೆಪಿ ಗುಜರಾತ್ನಲ್ಲಿ ಸಾಧನೆ ಮಾಡಿರುವುದಾಗಿ ಚಿಂತಿಸಿದರೆ, ಅದನ್ನು ಮಾತ್ತೊಮ್ಮೆ ಚಿಂತಿಸುವ ಅಗತ್ಯವಿದೆ. ಬಿಜೆಪಿ ಯಾವಾಗಲು ಔರಂಗಜೇಬ್ ಮತ್ತು ಪಾಕಿಸ್ತಾನದ ಹೆಸರಿನಲ್ಲಿ ಮತಗಳನ್ನು ಪಡೆಯುತ್ತಿದೆ.