Rivaba Jadeja : `ಪತ್ನಿ ಪರ ಚುನಾವಣಾ ಪ್ರಚಾರಕ್ಕೆ ಫಿಟ್, ಟೀಂ ಇಂಡಿಯಾದಲ್ಲಿ ಆಡಲು ಅನ್‍ಫಿಟ್`
ಜಡೇಜಾ ಪತ್ನಿ ಪರ ಚುನಾವಣಾ ಪ್ರಚಾರ ಮಾಡುತ್ತಿರುವುದು ನೋಡಿ, ಕ್ರಿಕೆಟ್ ಅಭಿಮಾನಿಗಳು ಜಡೇಜಾ ಪತ್ನಿ ಪರ ಚುನಾವಣಾ ಪ್ರಚಾರ, ರ್ಯಾಲಿ ಮಾಡಲು ಫಿಟ್, ಟೀಂ ಇಂಡಿಯಾದಲ್ಲಿ ಆಡಲು ಅನ್‍ಫಿಟ್ ಎಂದು ಆಡಿಕೊಳ್ಳುತ್ತಿದ್ದಾರೆ.
Ravindra Jadeja : ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರವೀಂದ್ರ ಜಡೇಜಾ ತುಂಬಾ ಸಕ್ರಿಯರಾಗಿದ್ದಾರೆ. ತಮ್ಮ ಪತ್ನಿ ರಿವಾಬಾ ಜಡೇಜಾಗಾಗಿ ನಿರಂತರವಾಗಿ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಜಡೇಜಾ ಪತ್ನಿ ರಿವಾಬಾ ಗುಜರಾತ್‌ನ ಜಾಮ್‌ನಗರ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಕಣಕ್ಕಿಳಿದಿದ್ದಾರೆ.
ಆದ್ರೆ, ಜಡೇಜಾ ಪತ್ನಿ ಪರ ಚುನಾವಣಾ ಪ್ರಚಾರ ಮಾಡುತ್ತಿರುವುದು ನೋಡಿ, ಕ್ರಿಕೆಟ್ ಅಭಿಮಾನಿಗಳು ಜಡೇಜಾ ಪತ್ನಿ ಪರ ಚುನಾವಣಾ ಪ್ರಚಾರ, ರ್ಯಾಲಿ ಮಾಡಲು ಫಿಟ್, ಟೀಂ ಇಂಡಿಯಾದಲ್ಲಿ ಆಡಲು ಅನ್‍ಫಿಟ್ ಎಂದು ಆಡಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಅಯೋಗ್ಯ ಎಂಬ ಕಾರಣಕ್ಕೆ ಅವರನ್ನು ಹೊರಗಿಡಲಾಗಿದೆ, ಹೆಂಡತಿ ಪರ ಚುನಾವಣಾ ಪ್ರಚಾರ, ಗಂಟೆಗಟ್ಟಲೆ ರ್ಯಾಲಿ ಮಾಡಲು ಹೇಗೆ ಫಿಟ್ ಆಗಿ ಕಾಣಿಸಿಕೊಳ್ಳುತ್ತಿದ್ದೀರಿ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Delhi Liquor Scam : ದೆಹಲಿ ಮದ್ಯ ಹಗರಣ : 3000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಇಡಿ
ಮುಂದಿನ ತಿಂಗಳು ಡಿಸೆಂಬರ್ 8 ರಂದು ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಬರಲಿವೆ. ಸೆಪ್ಟೆಂಬರ್ ಆರಂಭದಲ್ಲಿಯೇ ಜಡೇಜಾ ಅವರನ್ನು ಅನರ್ಹ ಎಂದು ಘೋಷಿಸಲಾಯಿತು. ಅನಾವಶ್ಯಕ ಸಾಹಸ ಚಟುವಟಿಕೆ ನಡೆಸುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದಾಗಿ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಲಿ ಟೀಂನಿಂದ ಹೊರಗುಳಿದಿದ್ದರು.
ಮುಂದಿನ ತಿಂಗಳು ಬಾಂಗ್ಲಾದೇಶದೊಂದಿಗೆ ಸರಣಿ
ಜಡೇಜಾ ಹೆಂಡತಿ ಪರ ಓಡಾಡಿ ಚುನಾವಣಾ ಪ್ರಚಾರ ಮಾಡುತ್ತಿರುವುದನ್ನು ನೋಡಿ ಬಿಸಿಸಿಐ ಕೂಡ ಕೋಪಗೊಂಡಿದೆ ಎಂದು ಹೇಳಲಾಗುತ್ತಿದೆ. ಜಡೇಜಾ ಆದ ಗಾಯದ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಟೀಂ ಇಂಡಿಯಾದಲ್ಲಿ ಆಡಲು ಅನ್‍ಫಿಟ್ ಆದರೂ, ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ಈ ಗಾಯದಿಂದಾಗಿ, ಅವರು ಟಿ20 ವಿಶ್ವಕಪ್‌ನಿಂದ ಹೊರಗುಳಿಯಬೇಕಾಯಿತು, ನಂತರ ನ್ಯೂಜಿಲೆಂಡ್ ವಿರುದ್ಧ ಟಿ20 ಮತ್ತು ODI ಸರಣಿಯಿಂದಲೂ ಕೂಡ ಹೊರಗುಳಿದಿದ್ದಾರೆ.
ಈಗ ಆಲ್‌ರೌಂಡರ್ ರವೀಂದ್ರ ಜಡೇಜಾ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳದಿದ್ದರೆ, ಮುಂದಿನ ತಿಂಗಳು ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾದಿಂದ ಮತ್ತೆ ಹೊರಗುಳಿಯಲಿದ್ದಾರೆ. ಜಡೇಜಾ ಬದಲಿಗೆ ಆಲ್‌ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ಟೀಂ ಇಂಡಿಯಾಗೆ ಸೇರಿಸಿಕೊಳ್ಳಲಾಗಿದೆ.
ಜಡೇಜಾ ಸಹೋದರಿ ಕೂಡ ಕಣದಲ್ಲಿದ್ದಾರೆ
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಡೇಜಾ ಪತ್ನಿ ಮಾತ್ರವಲ್ಲದೆ ಅವರ ಸಹೋದರಿ ನಯನಾಬಾ ಜಡೇಜಾ ಕೂಡ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ, ನಯನಾಬಾ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೆ. ಜಡೇಜಾ ಪತ್ನಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಪ್ರಚಾರದ ಸಮಯದಲ್ಲಿ, ಇಬ್ಬರೂ ಪರಸ್ಪರ ವಿರುದ್ಧವಾಗಿ ಕಾಣಿಸಿಕೊಂಡಿದ್ದಾರೆ. ತಾನೂ ಕೂಡ ಜಾಮ್‌ನಗರದಿಂದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದೆ ಆದರೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ ಎಂದು ನಯನಾಬಾ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಸಾಮಾಜಿಕ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಜೈಲಿನಿಂದ ಬಿಡುಗಡೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.