ನವದೆಹಲಿ: ಮುಂಬರುವ ಗುಜರಾತ್ ಉಪಚುನಾವಣೆಗೆ ಕಾಂಗ್ರೆಸ್ ಮಾಜಿ ಶಾಸಕ ಅಲ್ಪೇಶ್ ಠಾಕೋರ್ ಅವರನ್ನು ರಾಧನ್‌ಪುರ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಲಿದೆ.


COMMERCIAL BREAK
SCROLL TO CONTINUE READING

"ರಾಧನ್‌ಪುರ ಅಭ್ಯರ್ಥಿಯ ಘೋಷಣೆ ಬಗ್ಗೆ ಬಿಜೆಪಿಯ ಸಂಸದೀಯ ಮಂಡಳಿ ನಿರ್ಧರಿಸುತ್ತದೆ. ಆದರೂ, ನನನ ಸ್ಪರ್ಧೆ ಬಗ್ಗೆ ಬಿಜೆಪಿ ಹಿರಿಯ ಮುಖಂಡರು ತಿಳಿಸಿದ್ದಾರೆ" ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.


ಜುಲೈ 5ರಂದು ಗುಜರಾತ್ ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥ್ಗಳ ಪರವಾಗಿ ಮತ ಚಲಾಯಿಸಿದ್ದ ಅಲ್ಪೇಶ್, ಬಳಿಕ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ತಮ್ಮ ಆಪ್ತ ಶಾಸಕ ಧವಲ್ ಸಿನ್ಹಾ ಅವರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. 


ಪಟಾನ್ ಜಿಲ್ಲೆಯ ರಾಧನ್‌ಪುರ 43ವರ್ಷದ ಅಲ್ಪೇಶ್ ಠಾಕೋರ್ ಅವರು 2019ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಹಿಂದುಳಿದ ಜಾತಿಗಳ ಮುಖಂಡರಾದ ಠಾಕೋರ್ ಅವರು 2015ರಲ್ಲಿ ಪಾಟೀದಾರ್ ಮೀಸಲಾತಿ ಪ್ರಚೋದನೆಯನ್ನು ಎದುರಿಸಲು ನಡೆಸಿದ ತೀವ್ರ ಪ್ರತಿಭಟನೆಯ ಬಳಿಕ ಭಾರಿ ಜನಪ್ರಿಯತೆ ಗಳಿಸಿದರು. 


ಅಕ್ಟೋಬರ್ 21 ರಂದು ಗುಜರಾತ್‌ನ ಎಲ್ಲಾ ಆರು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.