ನವದೆಹಲಿ: ಪಾಕಿಸ್ತಾನದ ಗೂಢಚಾರರಿಗೆ 5,000 ರೂ. ಪಾವತಿಸಿದ ಗುಜರಾತ್‌ನ ಶಂಕಿತನೊಬ್ಬರ ಮನೆಯಲ್ಲಿ ಅವರ ತಂಡ ಶೋಧ ನಡೆಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ತಿಳಿಸಿದೆ. ಗುಜರಾತ್‌ನ ಕಚ್ ಜಿಲ್ಲೆಯ ನಿವಾಸಿ ರಾಜ್‌ಭಭಾಯ್ ಕುಂಭಾರ್ ಅವರ ಮನೆಯಲ್ಲಿ ಗುರುವಾರ ಸಂಸ್ಥೆ ಶೋಧ ನಡೆಸಿದೆ ಎಂದು ಎನ್‌ಐಎ (NIA)  ವಕ್ತಾರರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಪ್ರಕರಣ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ನಿವಾಸಿ ಮೊಹಮ್ಮದ್ ರಶೀದ್ ಅವರ ಬಂಧನಕ್ಕೆ ಸಂಬಂಧಿಸಿದ್ದು ಮೊಹಮ್ಮದ್ ರಶೀದ್ ವಿರುದ್ಧ ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಎನ್ಐಎ ಈ ವರ್ಷ ಏಪ್ರಿಲ್ 6 ರಂದು ಪ್ರಕರಣ ದಾಖಲಿಸಿತ್ತು.


ತನಿಖೆಯ ವೇಳೆ ಆರೋಪಿ ರಶೀದ್ ಅವರು ಪಾಕಿಸ್ತಾನ (Pakistan) ಗುಪ್ತಚರ ಸಂಸ್ಥೆ ಐಎಸ್‌ಐ (ISI) ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಎರಡು ಬಾರಿ ಪಾಕಿಸ್ತಾನಕ್ಕೂ ಭೇಟಿ ನೀಡಿದ್ದರು ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.


ಚೀನಾ-ಪಾಕ್‌ನ ಪ್ರಮುಖ CPEC ಯೋಜನೆಯಲ್ಲಿ ಹೂಡಿಕೆ ಮಾಡಲು ಬ್ಯಾಂಕ್ ಹಿಂದೇಟು, ಇದು ಕಾರಣ!


ಆರೋಪಿ ರಶೀದ್ ಅವರು ಭಾರತದ ಕೆಲವು ಸೂಕ್ಷ್ಮ ಮತ್ತು ಕಾರ್ಯತಂತ್ರದ ಪ್ರಮುಖ ಸಂಸ್ಥೆಗಳ ಚಿತ್ರಗಳನ್ನು ಮತ್ತು ಐಎಸ್‌ಐನೊಂದಿಗೆ ಸಶಸ್ತ್ರ ಪಡೆಗಳ ಚಲನೆಯ ಬಗ್ಗೆ ರಹಸ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.


'ರಾಜ್ಕಾಭಾಯ್ ಕುಂಭಾರ್ 5,000 ರೂ.ಗಳನ್ನು ರಿಜ್ವಾನ್ ಅವರ ಖಾತೆಗೆ ವರ್ಗಾಯಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ, ನಂತರ ಅದನ್ನು ರಶೀದ್ಗೆ ಕಳುಹಿಸಲಾಗಿದೆ. ಆರೋಪಿ ರಶೀದ್ ಮತ್ತು ರಾಜ್‌ಕಭಾಯ್ ಕುಂಭರ್ ಅವರು ಐಎಸ್‌ಐ ಏಜೆಂಟರ ಸೂಚನೆಯ ಮೇರೆಗೆ ಮಾಹಿತಿ ನೀಡುತ್ತಿದ್ದರು ಎಂದು  ಎನ್ಐಎ ವಕ್ತಾರರು ಮತ್ತಷ್ಟು ಮಾಹಿತಿ ನೀಡಿದ್ದಾರೆ.


ರಾಜ್‌ಕಭಾಯ್ ಕುಂಭಾರ್ ಅವರ ಮನೆಯಲ್ಲಿ ನಡೆದ ಶೋಧದ ವೇಳೆ ಎನ್‌ಐಎ ಕೈಯಲ್ಲಿ ಅನುಮಾನಾಸ್ಪದ ದಾಖಲೆಗಳು ಪತ್ತೆಯಾಗಿವೆ, ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.