ಆನಂದ್: Girl Arrested For Sexually Abusing 17 Year Old Boy - ಗುಜರಾತ್ (Gujarat)ನ ಆನಂದ್ (Anand) ನಿಂದ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. 23 ವರ್ಷದ ಯುವತಿಯೊಬ್ಬಳು 17 ವರ್ಷದ ಅಪ್ರಾಪ್ತ ಬಾಲಕನೋರ್ವನನ್ನು ಅಪಹರಿಸಿ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ (Girl Arrested For Sexually Abusing 17 Year Old Boy) ಎನ್ನಲಾಗಿದೆ. ಈ ಘಟನೆಯ ಬಳಿಕ ಪ್ರದೇಶದಲ್ಲಿ ಆತಂಕ ಮನೆಮಾಡಿದೆ.


COMMERCIAL BREAK
SCROLL TO CONTINUE READING

POCSO Act ಅಡಿ ಯುವತಿಯ ವಿರುದ್ಧ ಪ್ರಕರಣ ದಾಖಲು
ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಆರೋಪಿ ಯುವತಿಯ ವಿರುದ್ಧ ಪ್ರೊಟೆಕ್ಷನ್ ಆಫ್  ಚೈಲ್ಡ್ ಎಗೈನ್ಸ್ಟ್ ಸೆಕ್ಷುಯಲ್ ಒಫ್ಫೆನ್ಸ್ ಆಕ್ಟ್  (POCSO Act) ಹಾಗೂ ಅಪಹರಣ (Kidnap) ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆ (Indian Penal Code) ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.


ಕಳೆದ 15 ದಿನಗಳಿಂದ ಬಾಲಕ ನಾಪತ್ತೆಯಾಗಿದ್ದ
ಪೊಲೀಸರು ದಾಖಲಿಸಿದ ಪ್ರಕರಣದ ಪ್ರಕಾರ, ಅಪ್ರಾಪ್ತ ಬಾಲಕ ಕಳೆದ ಮೇ 25ರಿಂದ ಆನಂದ್ ನಗರದಿಂದ ನಾಪತ್ತೆಯಾಗಿದ್ದ. ಮೇ 27 ರಂದು ಸಂತ್ರಸ್ತ ಕುಟುಂಬ ಸದಸ್ಯರು ಆನಂದ್ ಪೊಲೀಸ್ ಠಾಣೆಯಲ್ಲಿ ಆತನ ಅಪಹರಣದ ಕುರಿತು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. 


ಇದನ್ನೂ ಓದಿ-ತಮಿಳುನಾಡಿನಲ್ಲಿ ಸೋಷಿಯಲಿಸಂ ಮದುವೆಯಾದ ಮಮತಾ ಬ್ಯಾನರ್ಜಿ....!


ಸಂತ್ರಸ್ತ ಬಾಲಕನಿಗೆ ಯುವತಿ ಈ ಆಮೀಷವೊಡ್ಡಿದ್ದಳು
ಪ್ರಕರಣದ ಕುರಿತು ಹೇಳಿಕೆ ನೀಡಿರುವ ಪೊಲೀಸ್ ಅಧಿಕಾರಿಗಳು, ಪ್ರಕರಣ ದಾಖಲಾದ ಬಳಿಕ ಪೋಲೀಸರ ಒಂದು ತಂಡ ರಚಿಸಲಾಯಿತು ಹಾಗೂ ಅಪ್ರಾಪ್ತ ಬಾಲಕನಿಗಾಗಿ ತನಿಖೆ ಆರಂಭಿಸಲಾಯಿತು. ನಂತರ ಸೂರತ್ ನಲ್ಲಿ ಸಂತ್ರಸ್ತ ಅಪ್ರಾಪ್ತ ಬಾಲಕನನ್ನು ರಕ್ಷಿಸಲಾಯಿತು. ಆರೋಪಿ ಯುವತಿ ಆತನನ್ನು ಅಲ್ಲಿ ಬಂಧನದಲ್ಲಿರಿಸಿದ್ದಳು.  ಬಳಿಕ ಪೊಲೀಸರಿಗೆ ಹೇಳಿದೆ ನೀಡಿರುವ ಅಪ್ರಾಪ್ತ ಬಾಲಕ ಯುವತಿ ತನ್ನ ಜೊತೆಗೆ ವಿವಾಹವಾಗುವ ಆಮೀಷವೊಡ್ಡಿದ್ದಳು (Crime) ಎಂದಿದ್ದಾನೆ. ಆಗ ಯುವತಿಯನ್ನು ಸ್ಥಳದಲ್ಲಿಯೇ ಬಂಧಿಸಲಾಗಿದೆ.


ಇದನ್ನೂ ಓದಿ-Viral Video : ಸ್ಟೇಜ್ ಮೇಲೆ ಅಕ್ಕನ ಗಂಡನಿಗೆ Kiss ಕೊಟ್ಟ ತಂಗಿ!


ಆರಂಭಿಕ ತನಿಖೆಯಲ್ಲಿ ಯುವತಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ (Sexual Abuse) ಎಸಗಿದ್ದಾಳೆ ಎಂಬುದು ಬೆಳಕಿಗೆ ಬಂದಿದ್ದು, ನಾವು ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತಿದ್ದು, ಇಬ್ಬರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ-Curfew Extends in Goa : ಗೋವಾದಲ್ಲಿ ಮತ್ತೆ ಒಂದು ವಾರ ವಿಸ್ತರಣೆಗೊಂಡ ಕರ್ಫ್ಯೂ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.