ನವದೆಹಲಿ: ಬರೋಬ್ಬರಿ 5 ಅಡಿ 7 ಇಂಚು ಉದ್ದದ ಕೂದಲನ್ನು ಹೊಂದುವ ಮೂಲಕ ಗುಜರಾತ್ ನ ನಿಲಾನ್ಷಿ ಪಟೇಲ್ ಅವರು ಗಿನ್ನಿಸ್ ದಾಖಲೆ ಬರೆದಿದ್ದಾರೆ. 


COMMERCIAL BREAK
SCROLL TO CONTINUE READING

ಹತ್ತು ವರ್ಷಗಳ ಹಿಂದೆ ಮಾಡಿಸಿದ್ದ ಹೇರ್ ಕಟ್ ಕೆಟ್ಟದಾಗಿದ್ದರಿಂದ, ಅಂದೇ ಹೇರ್ ಕಟ್'ಗೆ ಗುಡ್ ಬೈ ಹೇಳಿದ ನಿಲಾನ್ಷಿ ಇಂದು 5 ಅಡಿ 7 ಇಂಚು ಉದ್ದದ ಕೂದಲು ಹೊಂದುವ ಮೂಲಕ ವಿಶ್ವದಲ್ಲೇ ಅತೀ ಉದ್ದದ ಕೂದಲು ಹೊಂದಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 


"ಬೇರೆಯವರು ತಿಳಿದಿರುವಂತೆ ನನಗೆಂದೂ ನನ್ನ ಕೂದಲು ಭಾರ ಎನಿಸಿಲ್ಲ. ವಾರಕ್ಕೊಂದು ಸಾರಿ ತಲೆಗೆ ಸ್ನಾನ ಮಾಡುತ್ತೇನೆ. ಅಮ್ಮ ಕೂದಲು ಬಾಚಿ ಕೊಡುತ್ತಾರೆ. ನನ್ನ ಬ್ಯೂಟಿ ಹೆಚ್ಚಾಗಲು ನನ್ನ ಕೂದಲೇ ಕಾರಣ" ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಶೇರ್ ಮಾಡಿರುವ ವೀಡಿಯೋದಲ್ಲಿ ತಮ್ಮ ಉದ್ದವಾದ ಕೂದಲ  16 ವರ್ಷ ವಯಸ್ಸಿನ ನಿಲಾನ್ಷಿ ಹೇಳಿದ್ದಾರೆ.