ಉದಯಪುರ: ಗುಜರಾತ್‌ನಲ್ಲಿ ಮದ್ಯ ನಿಷೇಧದ ಬಳಿಕವೂ ಗರಿಷ್ಠ ಪ್ರಮಾಣದಲ್ಲಿ ಮದ್ಯ ಬಳಕೆಯಾಗುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, "ಸ್ವಾತಂತ್ರ್ಯ ಬಂದಾಗಿನಿಂದ ಗುಜರಾತ್ ನಲ್ಲಿ ಮದ್ಯ ನಿಷೇಧವಿದೆ. "ನಾನು ಗುಜರಾತ್‌ನಲ್ಲಿ ಒಂದು ವರ್ಷ ಇದ್ದೆ. ಆದರೆ ಅಲ್ಲಿ ಮದ್ಯ ನಿಷೇಧವಿದ್ದರೂ ಗರಿಷ್ಠ ಪ್ರಮಾಣದಲ್ಲಿ ಮದ್ಯ ಬಳಕೆಯಾಗುತ್ತದೆ. ಇದು ಮಹಾತ್ಮ ಗಾಂಧಿಯವರ ಗುಜರಾತ್‌ನ ಪರಿಸ್ಥಿತಿ" ಎಂದು ಟೀಕಿಸಿದ್ದಾರೆ.


ರಾಜಸ್ಥಾನದಲ್ಲಿ ಮದ್ಯ ನಿಷೇಧದ ವದಂತಿಗಳನ್ನು ತಿರಸ್ಕರಿಸಿದ ಗೆಹ್ಲೋಟ್, ಅಕ್ರಮ ಮದ್ಯವನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಮದ್ಯದ ಮೇಲೆ ಯಾವುದೇ ನಿಷೇಧ ಹೇರಲಾಗುವುದಿಲ್ಲ ಎಂದಿದ್ದಾರೆ.


"ನಾನು ವೈಯಕ್ತಿಕವಾಗಿ ಮದ್ಯವನ್ನು ನಿಷೇಧಿಸುವ ಪರವಾಗಿದ್ದೇನೆ. ಆದರೆ ಮದ್ಯದ ನಿಷೇಧವು ಅಕ್ರಮ ಮದ್ಯಕ್ಕೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ರಾಜ್ಯದಲ್ಲಿ ಮದ್ಯ ನಿಷೇಧಿಸಲಾಗುವುದಿಲ್ಲ. 1977ರಲ್ಲಿ ಮದ್ಯದ ಮೇಲೆ ನಿಷೇಧ ಹೇರಲಾಗಿತ್ತಾದರೂ ಅದು ವಿಫಲವಾಯಿತು" ಎಂದು ಗೆಹ್ಲೋಟ್ ಹೇಳಿದ್ದಾರೆ.