ಅಹಮದಾಬಾದ್: ಗುಜರಾತ್ ಚುನಾವಣೆಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಶುಕ್ರವಾರ ಘೋಷಿಸಿತು. ಪಕ್ಷದಿಂದ 70 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಾಹಿತಿ ಪ್ರಕಾರ, ಮುಖ್ಯಮಂತ್ರಿ ವಿಜಯ್ ರುಪಾನಿ ರಾಜ್ಕೋಟ್ ಪಶ್ಚಿಮದಿಂದ ಸ್ಪರ್ಧಿಸಲಿದ್ದಾರೆ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಮೆಹ್ಸಾನದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಗುಜರಾತ್ ಬಿಜೆಪಿ ಅಧ್ಯಕ್ಷ ಜಿತುಭಾಯಿ ವಾಘನಿ ಭಾವನಗರ ಪಶ್ಚಿಮದಿಂದ ಸ್ಪರ್ಧಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಈ ಚುನಾವಣೆಯಲ್ಲಿ, ಪಾಟೀದರ್ ಸಮುದಾಯದ 15 ನಾಯಕರು ಪಕ್ಷದಿಂದ ಟಿಕೆಟ್ಗಳನ್ನು ನೀಡಿದ್ದಾರೆ ಎಂಬುದು ವಿಶೇಷ ವಿಷಯ. ಕಾಂಗ್ರೇಸ್ ತೊರೆದು ಬಿಜೆಪಿ ಸೇರಿದ್ದ 5 ನಾಯಕರಿಗೂ ಸಹ ಬಿಜೆಪಿ ಟಿಕೇಟ್ ನೀಡಿದೆ. ಈ ಪಟ್ಟಿಯಲ್ಲಿ 49 ಹಾಲಿ ಶಾಸಕರು ಮತ್ತು 16 ಹೊಸ ಮುಖಗಳಿಗೆ ಟಿಕೇಟ್ ನೀಡಲಾಗಿದೆ. ಇದಲ್ಲದೆ, ಈ ಪಟ್ಟಿಯಲ್ಲಿ 2 ಹಿಂದುಳಿದ, 4 ಮಹಿಳೆಯರು ಮತ್ತು 6 ಕ್ಷತ್ರಿಯ ಸಮುದಾಯದವರಿಗೂ ಟಿಕೆಟ್ಗಳನ್ನು ನೀಡಲಾಗಿದೆ.


ಗುಜರಾತ್ ಚುನಾವಣೆಯು 182 ಸ್ಥಾನಗಳಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ. ಇದರಡಿಯಲ್ಲಿ, ಮೊದಲ ಹಂತದಲ್ಲಿ 89 ಸ್ಥಾನಗಳಲ್ಲಿ ಡಿಸೆಂಬರ್ 9ರಂದು ಮತ್ತು ಎರಡನೇ ಹಂತದಲ್ಲಿ 93 ಸ್ಥಾನಗಳಿಗೆ ಡಿಸೆಂಬರ್ 14 ರಂದು ಚುನಾವಣೆ ನಡೆಯಲಿವೆ. ಎರಡು ಹಂತದ ಮತದಾನದ ನಂತರ, ಡಿಸೆಂಬರ್ 18 ರಂದು ಫಲಿತಾಂಶಗಳನ್ನು ಘೋಷಿಸಲಾಗುವುದು.


ಗುಜರಾತ್ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೇರಿದಂತೆ ಪಕ್ಷದ ಹಲವು ಉನ್ನತ ನಾಯಕರು ಬುಧವಾರ ಸಭೆ ಸೇರಿದ್ದರು. ಬಿಜೆಪಿ ಪ್ರಧಾನ ಕಚೇರಿಯಲ್ಲಿ, ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಈ ಸಭೆಯಲ್ಲಿ ಅಭ್ಯರ್ಥಿಗಳ ಹೆಸರುಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದೆ. ವಾಸ್ತವವಾಗಿ, ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಾಮುಖಿಯಾಗಿವೆ. ಈ ಬಾರಿ ಬಿಜೆಪಿ ತನ್ನ ಅಧಿಕಾರವನ್ನು ರಾಜ್ಯದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದೇ ಸಮಯದಲ್ಲಿ 22 ವರ್ಷಗಳ ನಂತರ ಅಧಿಕಾರಕ್ಕೆ ಮರಳಲು ಕಾಂಗ್ರೆಸ್ ಕೂಡ ಶ್ರಮಿಸುತ್ತಿದೆ.


ಚುನಾವಣಾ ಆಯೋಗವು ರಾಜ್ಯದಲ್ಲಿ ಚುನಾವಣೆಗೆ ಒಟ್ಟು 50,128 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇವರಲ್ಲಿ 4.33 ಕೋಟಿ ಮತದಾರರು VVPAT ನೊಂದಿಗೆ ಇವಿಎಂಗಳ ಮೂಲಕ ಮತ ಚಲಾಯಿಸಬಹುದು. ರಾಜ್ಯದಲ್ಲಿ ಮಹಿಳಾ ಕಾರ್ಯಕರ್ತರು 182 ಮತಗಟ್ಟೆಗಳನ್ನು ನಡೆಸುತ್ತಿದ್ದಾರೆ. ಪ್ರತಿ ಅಸೆಂಬ್ಲಿ ಪ್ರದೇಶದಲ್ಲಿ ಅಂತಹ ಮತದಾನ ಬೂತ್ ಇರುತ್ತದೆ ಎಂದು ತಿಳಿಸಿದೆ.