ಅಹ್ಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೇಸ್ ಪಕ್ಷ ಭಾನುವಾರ ಘೋಷಿಸಿದೆ. ಈ ಪಟ್ಟಿಯಲ್ಲಿ 77 ಅಭ್ಯರ್ಥಿಗಳಿಗೆ ಸ್ಥಾನ ದೊರೆತಿದ್ದು, ಕಾಂಗ್ರೇಸ್ ನ ಹಿರಿಯ ನಾಯಕರಾದ ಶಕ್ತಿಸಿನ್ಹಾ ಗೋಹಿಲ್ ಮತ್ತು ಅರ್ಜುನ್ ಮಧ್ವಡಿಯ ಅವರಿಗೆ ಟಿಕೇಟ್ ದೊರೆತಿದೆ.



COMMERCIAL BREAK
SCROLL TO CONTINUE READING

 


ಗುಜರಾತ್ ಕಾಂಗ್ರೆಸ್ ಮತ್ತು ಹಾರ್ದಿಕ್ ಪಟೇಲ್ ನೇತೃತ್ವದ ಪಾಟಿದಾರ್ ಅನಮಾತ್ ಅಂಡಾಲನ್ ಸಮಿತಿ (PAAS) ಭಾನುವಾರ ತನ್ನ ಪ್ರಕಟಣೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅವರು ಪಟೇಲ್ಗಳಿಗೆ ಮೀಸಲಾತಿ ನೀಡುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ.


ಮತ್ತೊಂದೆಡೆ, ಬಿಜೆಪಿಯು ಈಗಾಗಲೇ 106 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮುಖ್ಯಮಂತ್ರಿ ವಿಜಯ್ ರೂಪನಿ ಸೇರಿದ್ದಾರೆ.


ರಾಜ್ಕೋಟ್ ಪಶ್ಚಿಮದಿಂದ ಕಾಂಗ್ರೇಸ್ನ ಮುಖ್ಯಮಂತ್ರಿ ಅಭ್ಯರ್ಥಿ ಇಂದ್ರನೀಲ್ ರಾಜ್ಯಗುರು ಸ್ಪರ್ಧಿಸಲಿದ್ದಾರೆ.


ಡಿಸೆಂಬರ್ ನಲ್ಲಿ ಗುಜರಾತ್ ಚುನಾವಣೆ ನಡೆಯಲಿದ್ದು,  89 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆಯು  ಡಿ. 9 ರಂದು ಹಾಗೂ ಉಳಿದ 93 ಕ್ಷೇತ್ರಗಳಿಗೆ ಡಿ. 14 ರಂದು ಎರಡನೇ ಹಂತದಲ್ಲಿ  ಚುನಾವಣೆ ನಡೆಯಲಿದೆ.


ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಗಳ ಫಲಿತಾಂಶ ಡಿಸೆಂಬರ್ 18 ರಂದು ಪ್ರಕಟಗೊಳ್ಳಲಿದೆ.