ಗುಜರಾತ್ ಚುನಾವಣೆ: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪ್ರಧಾನಿ ಮೋದಿ
ಗುಜರಾತ್ ಚುನಾವಣೆಯ ಕೊನೆಯ ಹಂತದಲ್ಲಿ 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ 851 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅವರ ಭವಿಷ್ಯವನ್ನು 2.22 ಕೋಟಿ ಮತದಾರು ನಿರ್ಧರಿಸುತ್ತಾರೆ. ಹನ್ನೊಂದು ಗಂಟೆಯ ವೇಳೆಗೆ ಶೇ.20ರಷ್ಟು ದಾಖಲೆಯ ಮತದಾನವಾಗಿದೆ.
ಅಹ್ಮದಾಬಾದ್: ಅಹ್ಮದಾಬಾದ್ ಜಿಲ್ಲೆಯ ಸಬರಮತಿ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 115ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮತ ಚಲಾಯಿಸಿದರು. ವಿಶೇಷವೆಂದರೆ ಪ್ರಧಾನಿ ಅವರು ಸರತಿ ಸಾಲಿನಲ್ಲಿ ನಿಂತು ಅವರು ಮತ ಚಲಾಯಿಸಿದರು. ಪ್ರಧಾನಿ ಮೋದಿ ಅವರು ಮತದಾನ ಕೇಂದ್ರವನ್ನು ತಲುಪಿದಾಗ ಸಾರ್ವಜನಿಕರಿಗೆ ವಿಕ್ಟರಿ ಚಿಹ್ನೆಯನ್ನು ಮಾಡಿದರು. ನಂತರ ಕಾರಿನಿಂದ ಇಳಿದ ಮೋದಿ, ಅವರ ಹಿರಿಯ ಸಹೋದರ ಸೋಮ್ ಮೋದಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು.
ಗುಜರಾತ್ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದಲ್ಲಿ ಉತ್ತರ ಗುಜರಾತ್ನಲ್ಲಿ 53 ಸ್ಥಾನಗಳು ಮತ್ತು ಕೇಂದ್ರ ಗುಜರಾತ್ನಲ್ಲಿ 40 ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ. ಇದರಲ್ಲಿ ಒಟ್ಟು 851 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಅವರ ಭವಿಷ್ಯವನ್ನು 2.22 ಕೋಟಿ ಮತದಾರು ನಿರ್ಧರಿಸುತ್ತಾರೆ. ಹನ್ನೊಂದು ಗಂಟೆಯ ವೇಳೆಗೆ ಶೇ.20ರಷ್ಟು ದಾಖಲೆಯ ಮತದಾನವಾಗಿದೆ. ಆನಂದಿಬೇನ್ ಪಟೇಲ್, ಅಮಿತ್ ಷಾ, ಅರುಣ್ ಜೇಟ್ಲಿ, ಭರತ್ ಸಿಂಗ್ ಸೋಲಂಕಿ, ಹಾರ್ದಿಕ್ ಪಟೇಲ್, ನಿತಿನ್ ಪಟೇಲ್, ಶಕ್ತಿ ಸಿಂಗ್ ಗೋಹಿಲ್ ಮತ್ತು ಶಂಕರ್ ಸಿಂಗ್ ವಘೇಲಾ ತಮ್ಮ ಮತ ಚಲಾಯಿಸಿದ್ದಾರೆ.