ಅಹ್ಮದಾಬಾದ್: ಮೂರು ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ 14 ತಿಂಗಳಲ್ಲಿ  ಮುಕ್ತಾಯಗೊಳಿಸಿದೆ. ಈ ಪ್ರಕರಣದ 'ಹ'ತ್ಯಾಚಾರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಅನಿಲ್ ಯಾದವ್ ಹೆಸರಿನ ವ್ಯಕ್ತಿ ಸೂರತ್ ಮೂಲದ ಈ ಮೂರು ವರ್ಷದ ಹಸುಳೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಹತ್ಯೆನಡೆಸಿದ್ದಾನೆ. ಇದೀಗ ಆತನಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.


COMMERCIAL BREAK
SCROLL TO CONTINUE READING

ಕಳೆದ ವರ್ಷ 13 ಅಕ್ಟೋಬರ್ ರಂದು ಗುಜರಾತ್ ನ ಅಹ್ಮದಾಬಾದ್ ಪ್ರಾಂತ್ಯದಿಂದ 3 ವರ್ಷದ ಬಾಲಕಿಯೋರ್ವಳು ಕಾಣೆಯಾಗಿದ್ದಳು. ನಂತರ ಮೂರು ದಿನಗಳ ಬಳಿಕ ಅನಿಲ್ ಯಾದವ್ ಹೆಸರಿನ ವ್ಯಕ್ತಿಯೋರ್ವನ ಮನೆಯಲ್ಲಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ಕಟ್ಟಿದ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಳು. ಬಾಲಕಿಯ ಕುಟುಂಬ ವಾಸವಾಗಿದ್ದ ಕಟ್ಟಡದಲ್ಲಿಯೇ ಅನಿಲ್ ಯಾದವ್ ಕೂಡ ವಾಸವಾಗಿದ್ದ. ಘಟನೆಯ ಬಳಿಕ ಆರೋಪ ಪರಾರಿಯಾಗಿದ್ದ. ನಂತರ ಬಿಹಾರದ ಬಕ್ಸರ್ ನಲ್ಲಿ ಅಕ್ಟೋಬರ್ 19ರಂದು ಆತನನ್ನು ಬಂಧಿಸಲಾಗಿತ್ತು. 


ಸೆಷನ್ಸ್ ಕೋರ್ಟ್ ನಲ್ಲಿ ಈ ಪ್ರಕರಣದ ಆರೋಪಪಟ್ಟಿ ದಾಖಲಾದ 7 ತಿಂಗಳಲ್ಲೇ ಟ್ರಯಲ್ ಮುಗಿಸಿ, ಜುಲೈ 31ಕ್ಕೆ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದ್ದ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ ಸೆಷನ್ಸ್ ಕೋರ್ಟ್ ನ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದ್ದು, ಹೈಕೋರ್ಟ್ ಕೂಡ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿರುವುದನ್ನು ಎತ್ತಿಹಿಡಿದಿದೆ.