VIDEO:23 ಸಿಂಹಗಳ ಸಾವಿನ ನಂತರ ಗುಜರಾತಿನ ಗಿರ್ ನಲ್ಲಿ ಲಸಿಕೆ ಪ್ರಾರಂಭ
ಗುಜರಾತಿನ ಗಿರ್ ಅಭಯಾರಣ್ಯದಲ್ಲಿ 23 ಸಿಂಹಗಳ ಸಾವು ಇಲ್ಲಿನ ನಿಜಕ್ಕೂ ಅರಣ್ಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿತ್ತು.ಈಗ ಈ ಸಿಂಹಗಳ ಸಾವಿಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚುವಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ವೈರಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಂಸ್ಥೆ ಯಶಸ್ವಿಯಾದ ಹಿನ್ನಲೆಯಲ್ಲಿ ಈಗ ಅವುಗಳಿಗೆ ಲಸಿಕೆಯನ್ನು ಪ್ರಾರಂಭಿಸಲಾಗಿದೆ.
ನವದೆಹಲಿ: ಗುಜರಾತಿನ ಗಿರ್ ಅಭಯಾರಣ್ಯದಲ್ಲಿ 23 ಸಿಂಹಗಳ ಸಾವು ಇಲ್ಲಿನ ನಿಜಕ್ಕೂ ಅರಣ್ಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿತ್ತು.ಈಗ ಈ ಸಿಂಹಗಳ ಸಾವಿಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚುವಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ವೈರಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಂಸ್ಥೆ ಯಶಸ್ವಿಯಾದ ಹಿನ್ನಲೆಯಲ್ಲಿ ಈಗ ಅವುಗಳಿಗೆ ಲಸಿಕೆಯನ್ನು ಪ್ರಾರಂಭಿಸಲಾಗಿದೆ.
ಸಿಂಹಗಳನ್ನು ಸಾವಿಗೆ ಕಾರಣವಾದ ಸಿಡಿವಿ ವೈರಸ್ ನ್ನು ನಾಶಪಡಿಸಲು ಈಗ ಅವುಗಳಿಗೆ ಅಮೆರಿಕಾದಿಂದ ಆಮುದು ಮಾಡಿಕೊಂಡಿರುವ ಔಷಧಿಗಳನ್ನು ನೀಡಲಾಗುತ್ತಿದೆ.ಈ ಸಿಡಿವಿ ವೈರಸ್ ಈ ಹಿಂದೆ ಪೂರ್ವ ಆಫ್ರಿಕಾದಲ್ಲಿ ಶೇ.30 ರಷ್ಟು ಸಿಂಹದ ಜನಸಂಖ್ಯೆ ನಾಶವಾಗಲು ಕಾರಣ ಎಂದು ಐಸಿಎಂಆರ್ ಹೇಳಿದೆ.
ಪುಣೆ ಮೂಲದ ಐಸಿಎಂಆರ್-ಎನ್ಐವಿ ಸಂಸ್ಥೆಯು ಗುಜರಾತಿನ ಗಿರ್ ಕಾಡಿನಲ್ಲಿ ಐದು ಏಶಿಯಾ ಸಿಂಹಗಳ ಸಾವಿಗೆ ಕಾರಣವಾದ ಸಿಡಿವಿ ಪತ್ತೆ ಮಾಡಿದ ನಂತರ ಈಗ ವೈರಸ್ ನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಅಮೆರಿಕಾದಿಂದ 300ಕ್ಕೂ ಅಧಿಕ ಸಿ.ಡಿ.ವಿ ಲಸಿಕೆಗಳನ್ನು ಶುಕ್ರವಾರದಂದು ಆಮದು ಮಾಡಿಕೊಳ್ಳಲಾಗಿತ್ತು.
ಈಗ ಲಸಿಕೆಯನ್ನು ಸಿಂಹಗಳಿಗೆ ನೀಡುತ್ತಿರುವ ವಿಚಾರವನ್ನು ಜುನಾಗಡ್ ವೈಲ್ಡ್ ಲೈಫ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಿಂಹಗಳಿಗೆ ಲಸಿಕೆಯನ್ನು ನೀಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದೆ.