Gyanvapi Case Verdict : ಜ್ಞಾನವಾಪಿ ತೀರ್ಪು ಹೊರಬೀಳುವ ಮುನ್ನ ಮುಸ್ಲಿಂ ಪರ ವಕೀಲ ಮೊಹಮ್ಮದ್ ತೌಹೀದ್ ಮಾತನಾಡಿ, ತೀರ್ಪು ನಮ್ಮ ಪರವಾಗಿ ತೀರ್ಪು ಬರದಿದ್ದರೆ ನಾವು ಹೈಕೋರ್ಟ್‌ ಮೆಟ್ಟಿಲೇರುತ್ತೇವೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ವಾರಣಾಸಿ ಜಿಲ್ಲಾ ನ್ಯಾಯಾಲಯವು ಇಂದು (ಸೋಮವಾರ) ಮಧ್ಯಾಹ್ನ 2 ಗಂಟೆಗೆ ಜ್ಞಾನವಾಪಿ ಪ್ರಕರಣದ ತೀರ್ಪನ್ನು ಪ್ರಕಟಿಸಲಿದೆ. ನ್ಯಾಯಾಲಯದ ಸುತ್ತಮುತ್ತ ಹಾಗೂ ವಾರಣಾಸಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಎಲ್ಲೆಡೆ ನಿಗಾ ಇಡಲಾಗಿದೆ. ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆ ಕಾಪಾಡುವಂತೆ ಪೊಲೀಸ್ ಆಡಳಿತ ಜನತೆಗೆ ಮನವಿ ಮಾಡಿದೆ.


ಇದನ್ನೂ ಓದಿ : Video : ಸ್ಕೂಟಿ ಕೆಟ್ಟು ನಿಂತಿದ್ದರೂ ಕೆಳಗಿಳಿಯಲಿಲ್ಲ ಪ್ರಿಯತಮೆ, ನಂತರದ ಘಟನೆ ನೋಡಿದರೆ ನಗು ತಡೆಯಲು ಸಾಧ್ಯವಿಲ್ಲ


ಮುಸ್ಲಿಂ ವಕೀಲರು ಹೇಳಿದ್ದೇನು?


ಜ್ಞಾನವಾಪಿ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿ ಬರದಿದ್ದರೆ ಏನು ಮಾಡುತ್ತೀರಿ ಪತ್ರಕರ್ತರು ಮುಸ್ಲಿಂ ಪರ ವಕೀಲ ಮೊಹಮ್ಮದ್ ತೌಹೀದ್ ಅವರನ್ನು ಪ್ರಶ್ನಿಸಿದಾಗ. ಈ ಕುರಿತು ವಕೀಲ ಮೊಹಮ್ಮದ್ ತೌಹೀದ್ ಅವರು, ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬರದಿದ್ದರೆ ಹೈಕೋರ್ಟ್‌ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ.


ಇಂದು ತೀರ್ಪು ಪ್ರಕಟಿಸಲಿದೆ ವಾರಣಾಸಿ ನ್ಯಾಯಾಲಯ 


ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಸಮರ್ಥಿಸಬಹುದೇ ಅಥವಾ ಇಲ್ಲವೇ ಎಂದು ವಾರಣಾಸಿ ನ್ಯಾಯಾಲಯವು ಇಂದು ತೀರ್ಪು ನೀಡಲಿದೆ. ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಕಳೆದ ತಿಂಗಳು ಕೋಮು ಸೂಕ್ಷ್ಮ ಪ್ರಕರಣದ ಆದೇಶವನ್ನು ಸೆಪ್ಟೆಂಬರ್ 12 ರವರೆಗೆ ಕಾಯ್ದಿರಿಸಿದ್ದರು. ಜ್ಞಾನವಾಪಿ ಮಸೀದಿಯ ಹೊರಗೋಡೆಯ ಮೇಲಿರುವ ಹಿಂದೂ ದೇವತೆಗಳ ವಿಗ್ರಹಗಳನ್ನು ಪ್ರತಿ ದಿನ ಪೂಜಿಸಲು ಅನುಮತಿ ಕೋರಿ ಐವರು ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.


ಹಿಂದೂ ಪರ ವಕೀಲರು ಹೀಗೆ?


ಈ ಬಗ್ಗೆ ಮಾತನಾಡಿದ ಜ್ಞಾನವಾಪಿ ಪ್ರಕರಣದ ಹಿಂದೂ ಪರ ವಕೀಲ ವಿಷ್ಣು ಜೈನ್, ವಿಚಾರಣೆಯ ಸ್ಥಿರತೆಯ ಬಗ್ಗೆ ನ್ಯಾಯಾಲಯ ಇಂದು ತೀರ್ಪು ನೀಡಲಿದೆ. 1991 ರ ಆರಾಧನಾ ಕಾಯಿದೆ ನಮ್ಮ ಪರವಾಗಿ ಅನ್ವಯಿಸುತ್ತದೆ. ತೀರ್ಪು ನಮ್ಮ ಪರವಾಗಿ ಬಂದರೆ, ನಾವು ಶಿವಲಿಂಗದ ಎಎಸ್‌ಐ ಸಮೀಕ್ಷೆ ಮತ್ತು ಕಾರ್ಬನ್ ಡೇಟಿಂಗ್‌ಗೆ ಒತ್ತಾಯ ಮಾಡಲಿದ್ದೇವೆ ಎಂದು ಹೇಳಿದರು.


ಇದನ್ನೂ ಓದಿ : Ghulam Nabi Azad : 10 ದಿನಗಳಲ್ಲಿ 'ಹೊಸ ಪಕ್ಷ' ಘೋಷಿಸಲಿದ್ದಾರೆ ಗುಲಾಮ್ ನಬಿ ಅಜಾದ್!


ಭದ್ರತಾ ವ್ಯವಸ್ಥೆಯ ಬಗ್ಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಕಮಿಷನರ್ ಸಂತೋಷ್ ಕೆ ಸಿಂಗ್, ವಾರಣಾಸಿಯಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಯಾವುದೇ ತೀರ್ಪು ಬಂದರೂ ನಾವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ. ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇರಿಸಿ. ಸಾಮಾಜಿಕ ಸೌಹಾರ್ದತೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.