Survey starts from today in Gyanvapi mosque: ಜ್ಞಾನವಾಪಿ ಕ್ಯಾಂಪಸ್‌’ನಲ್ಲಿ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಮುಸ್ಲಿಂ ಪಕ್ಷವು ಸುಪ್ರೀಂ ಕೋರ್ಟ್ ಮೆಟ್ಟಿರೇಲಿದೆ. ಈ ವಿಷಯವನ್ನು ಸಾಂವಿಧಾನಿಕ ಪೀಠದ ಮುಂದೆ ಪ್ರಸ್ತಾಪಿಸಿದ ಮುಸ್ಲಿಂ ಸಮಿತಿ ಕಡೆಯವರು ಶೀಘ್ರ ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಜ್ಞಾನವಾಪಿ ಪ್ರಕರಣದಲ್ಲಿ, ಅರ್ಜಿದಾರರಾದ ರಾಖಿ ಸಿಂಗ್ ಅವರು ಸುಪ್ರೀಂ ಕೋರ್ಟ್‌ ನಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ ಮತ್ತು ತಮ್ಮ ಪರವಾಗಿಯೂ ಕೇಳುವಂತೆ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಸಮೀಕ್ಷೆಗೆ ಅನುಮತಿ ನೀಡಿರುವ ಹೈಕೋರ್ಟ್ ತೀರ್ಪನ್ನು ಮುಸ್ಲಿಂ ಕಡೆಯವರು ಪ್ರಶ್ನಿಸಿದರೆ, ನಮ್ಮ ಪರ ವಾದ ಕೇಳದೆ ಸುಪ್ರೀಂ ಕೋರ್ಟ್ ಯಾವುದೇ ಆದೇಶ ನೀಡಬಾರದು ಎಂದು ಅರ್ಜಿದಾರರು ಹೇಳಿದ್ದಾರೆ.


ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಸಿಹಿಸುದ್ದಿ..! ಈ ಅದ್ಭುತ ಅವಕಾಶವನ್ನು ಕಳೆದುಕೊಳ್ಳಬೇಡಿ.. 


ಇಂದಿನಿಂದ ಸರ್ವೆ ಕಾರ್ಯ ಆರಂಭ:


ಹೈಕೋರ್ಟ್‌ನ ಆದೇಶದ ನಂತರ ಇಂದಿನಿಂದ ಜ್ಞಾನವಾಪಿಯಲ್ಲಿ ಸಮೀಕ್ಷೆ ಪ್ರಾರಂಭವಾಗಲಿದೆ ಎಂದು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್ ರಾಜಲಿಂಗಂ ತಿಳಿಸಿದ್ದಾರೆ. ಇದಕ್ಕಾಗಿ ಎಎಸ್‌ಐ ಸಮೀಕ್ಷಾ ತಂಡ ಆಗಮಿಸಿದೆ. ಪೊಲೀಸ್-ಆಡಳಿತದ ಭದ್ರತೆಯಲ್ಲಿ ಶುಕ್ರವಾರದಿಂದ ಸರ್ವೆ ಕಾರ್ಯ ಆರಂಭವಾಗಲಿದೆ. ಶುಕ್ರವಾರ ಸರ್ವೇಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಆದೇಶವಿದ್ದರೆ ಅದನ್ನು ಪಾಲಿಸಲಾಗುವುದು ಎಂದು ಹೇಳಿದ್ದಾರೆ.


ಮುಸ್ಲಿಂ ಪರ ಅರ್ಜಿ ವಜಾ:


ಅಲಹಾಬಾದ್ ಹೈಕೋರ್ಟ್ ಗುರುವಾರ ತೀರ್ಪು ನೀಡುವಾಗ ಜ್ಞಾನವಾಪಿ ಕ್ಯಾಂಪಸ್‌ ನಲ್ಲಿ ಮುಸ್ಲಿಂ ಸಮಿತಿ ಕಡೆಯ ಅರ್ಜಿಯನ್ನು ವಜಾಗೊಳಿಸಿದೆ. ಮುಸ್ಲಿಂ ಪರವಾಗಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಎಎಸ್‌ಐನಿಂದ ನಿವೇಶನವನ್ನು ಸರ್ವೆ ಮಾಡುವಂತೆ ಕೆಳ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ ನಲ್ಲಿ ಪ್ರಶ್ನಿಸಿತ್ತು. ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಜುಲೈ 21 ರ ಆದೇಶದಲ್ಲಿ ಈ ಆದೇಶವನ್ನು ಹೊರಡಿಸಿದೆ.


ಈ ವಿಷಯದ ಕುರಿತು ತೀರ್ಪು ನೀಡುವಾಗ ಹೈಕೋರ್ಟ್, 'ಈ ನ್ಯಾಯಾಲಯದ ಅಭಿಪ್ರಾಯದಲ್ಲಿ, ನ್ಯಾಯದ ಹಿತದೃಷ್ಟಿಯಿಂದ ಉದ್ದೇಶಿತ ವೈಜ್ಞಾನಿಕ ಸಮೀಕ್ಷೆ ಅಗತ್ಯವಾಗಿದೆ. ಇದು ಫಿರ್ಯಾದಿ ಮತ್ತು ಪ್ರತಿವಾದಿ ಇಬ್ಬರಿಗೂ ಪ್ರಯೋಜನವನ್ನು ನೀಡುತ್ತದೆ ಮತ್ತು ವಿಚಾರಣಾ ನ್ಯಾಯಾಲಯವು ನಿರ್ಧರಿಸಲು ಸಹಾಯ ಮಾಡುತ್ತದೆ. ವಿಚಾರಣಾ ನ್ಯಾಯಾಲಯವು ನ್ಯಾಯಯುತವಾಗಿ ಸರ್ವೆ ಆದೇಶವನ್ನು ನೀಡಿತ್ತು. ಮಧ್ಯಂತರ ಆದೇಶವನ್ನು ರದ್ದುಗೊಳಿಸಲಾಗಿದೆ ಮತ್ತು ಜುಲೈ 21 ರಂದು ವಾರಣಾಸಿಯ ಜಿಲ್ಲಾ ನ್ಯಾಯಾಲಯವು ನೀಡಿದ್ದ ಆದೇಶವನ್ನು ಮರುಸ್ಥಾಪಿಸಲಾಗಿದೆ ಎಂದು ನ್ಯಾಯಾಲಯವು ಹೇಳಿದೆ. ಈ ನ್ಯಾಯಾಲಯದ ಅವಲೋಕನಗಳು ಮತ್ತು ASI ನ ಅಫಿಡವಿಟ್ ಅನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಕಕ್ಷಿದಾರರು ಆದೇಶವನ್ನು ಅನುಸರಿಸಬೇಕಾಗುತ್ತದೆ.


"ಈ ಪ್ರಕರಣದ ವಿಚಾರಣೆಯು ಬಹಳ ಸಮಯದಿಂದ ಬಾಕಿ ಉಳಿದಿರುವುದರಿಂದ, ಸಂಬಂಧಪಟ್ಟ ನ್ಯಾಯಾಲಯವು ಅನಗತ್ಯ ಮುಂದೂಡದೆ ತ್ವರಿತವಾಗಿ ವಿಚಾರಣೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸುವುದು ಸೂಕ್ತವಾಗಿದೆ" ಎಂದು ನ್ಯಾಯಾಲಯವು ಜುಲೈ 21 ರಂದು ವಾರಣಾಸಿಯ ಜಿಲ್ಲಾ ನ್ಯಾಯಾಲಯವು ನಿರ್ದೇಶಿಸಿತು.


ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಇರುವ ಜ್ಞಾನವಾಪಿ ಮಸೀದಿಯನ್ನು ಹಳೆಯ ದೇವಾಲಯದ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ವಿವರವಾದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಲು ASI ಮುಂದಾಗಿದೆ.


ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಜುಲೈ 26 ರಂದು ಸಂಜೆ 5 ಗಂಟೆಯವರೆಗೆ ಸಮೀಕ್ಷೆಗೆ ತಡೆ ನೀಡಿ ಸಮಿತಿಯು ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವಂತೆ ಹೇಳಿದೆ. ಈ ಕುರಿತು ಸಮಿತಿಯು ಜುಲೈ 25ರಂದು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.


ಇದನ್ನೂ ಓದಿ: ಎರಡನೇ ಹೆಂಡತಿಗೆ ಹಿಂದು ಕಾನೂನಿನಲ್ಲಿ ಗಂಡನ ಆಸ್ತಿಯಲ್ಲಿ ಪಾಲು ಪಡೆಯಲು ಅವಕಾಶ ಇದೆಯೇ?


ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಅವರು ಎರಡೂ ಕಡೆಯ ವಿಚಾರಣೆಯ ನಂತರ ಜುಲೈ 27 ರಂದು ಮಸೀದಿ ಸಮಿತಿಯ ಅರ್ಜಿಯ ನಿರ್ಧಾರವನ್ನು ಕಾಯ್ದಿರಿಸಿದ್ದರು ಮತ್ತು ನಿರ್ಧಾರ ಬರುವವರೆಗೆ ASI ಸಮೀಕ್ಷೆಗೆ ತಡೆ ನೀಡಿದ್ದರು. ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಶುಕ್ರವಾರದಿಂದ ಸಮೀಕ್ಷೆ ಆರಂಭಿಸಲು ಜಿಲ್ಲಾಡಳಿತದಿಂದ ನೆರವು ಕೋರಿರುವುದಾಗಿ ತಿಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ