ನವದೆಹಲಿ : Gyanvapi Survey Latest Update : ಜ್ಞಾನವಾಪಿ ಸಮೀಕ್ಷೆಯ ವರದಿಯನ್ನು ಇಂದು (ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದಿಲ್ಲ ಎನ್ನಲಾಗಿದೆ.  ಮೂಲಗಳ ಪ್ರಕಾರ ವರದಿ ಸಿದ್ಧಪಡಿಸಲು ಕೋರ್ಟ್ ಕಮಿಷನ್ 2-3 ದಿನಗಳ ಕಾಲಾವಕಾಶ ಕೇಳಬಹುದು. ಸೋಮವಾರದಂದು, ವುಜುಖಾನಾದಲ್ಲಿ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ಹಿಂದೂ ಪಕ್ಷದವರು ಹೇಳಿದ್ದರು. ಇದಾದ ನಂತರ ನ್ಯಾಯಾಲಯವು ಆ ಸ್ಥಳವನ್ನು ಸೀಲ್ ಮಾಡಲು ಆದೇಶಿಸಿದೆ. 


COMMERCIAL BREAK
SCROLL TO CONTINUE READING

ಸಮೀಕ್ಷಾ ವರದಿ ಸಿದ್ಧಪಡಿಸಲು ಕಾಲಾವಕಾಶ ಕೋರುವ ಸಾಧ್ಯತೆ : 
ಜ್ಞಾನವಾಪಿ ಮಸೀದಿ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಸರ್ವೆಯ ವರದಿ ಸಲ್ಲಿಸಲು ಅಡ್ವೊಕೇಟ್ ಕಮಿಷನರ್ ಅಜಯ್ ಮಿಶ್ರಾ ಅವರಿಗೆ ಇನ್ನೂ ಸಮಯಾವಕಾಶ ಬೇಕಾಗಬಹುದು.  ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಇನ್ನೂ 2 ರಿಂದ 3 ದಿನಗಳ ಕಾಲಾವಕಾಶ ಕೇಳುವ ಸಾಧ್ಯತೆ ಇದೆ. 


ಇದನ್ನೂ ಓದಿ : CBI Raids Chidambaram: ಮಾಜಿ ಕೇಂದ್ರ ಸಚಿವರಿಗೆ ಸಿಬಿಐ ಶಾಕ್‌: ಬೆಳ್ಳಂಬೆಳಗ್ಗೆ ಮನೆ ಮೇಲೆ ದಾಳಿ


 ನ್ಯಾಯಾಲಯಕ್ಕೆ ಇಂದು ವರದಿ ಸಲ್ಲಿಸಬೇಕಿತ್ತು ವರದಿ  : 
ಮೂರು ದಿನಗಳ ಕಾಲ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಮಾಡಲಾಗಿದೆ.   ಇಂದು ಅಂದರೆ  ಏಪ್ರಿಲ್ 17 ರಂದು ಆಯೋಗವು ತನ್ನ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಆದರೆ ಇದೀಗ ಜ್ಞಾನವಾಪಿ ಸಮೀಕ್ಷೆಯ ವರದಿ ಇನ್ನೂ ಸಿದ್ಧವಾಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಸಮೀಕ್ಷೆಯ ವರದಿ ಸಿದ್ಧಪಡಿಸಲು ಇನ್ನೂ ಎರಡರಿಂದ ಮೂರು ದಿನಗಳಿಗಾಗಿ ಬೇಡಿಕೆ ಇಡಬಹುದು.


ವುಜುಖಾನಾದಲ್ಲಿ ಶಿವಲಿಂಗ :
ಸೋಮವಾರ ನಡೆದ ಸಮೀಕ್ಷೆಯ ವೇಳೆ ವುಜುಖಾನದ ನೀರನ್ನು ಖಾಲಿ ಮಾಡಲಾಗಿದ್ದು,  ಅಲ್ಲಿ ಶಿವಲಿಂಗ ಕಾಣಿಸಿಕೊಂಡಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಜೈನ್ ತಿಳಿಸಿದ್ದಾರೆ. ಈ ಶಿವಲಿಂಗದ ವ್ಯಾಸವು ಸುಮಾರು 4 ಅಡಿ ಮತ್ತು ಅದರ ಉದ್ದವು ಎರಡೂವರೆಯಿಂದ ಮೂರು ಅಡಿಗಳಷ್ಟಿರಬಹುದು ಎನ್ನಲಾಗಿದೆ. ಶಿವಲಿಂಗದ ದರ್ಶನವಾದ ಕೂಡಲೇ ಈ ಮಹತ್ವದ ಸಾಕ್ಷ್ಯವನ್ನು ಸಂರಕ್ಷಿಸಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು. ನಂತರ ನ್ಯಾಯಾಲಯವು ಆ ಸ್ಥಳವನ್ನು  ಸೀಲ್ ಮಾಡಲು ಆದೇಶಿಸಲಾಯಿತು. 


ಇದನ್ನೂ ಓದಿ : PM Kusum Yojana 2022 ಹೆಸರಿನಲ್ಲಿ ವಂಚನೆ, ರೈತರಿಗೆ ಅಲರ್ಟ್ ಜಾರಿಗೊಳಿಸಿದ ಕೇಂದ್ರ ಸರ್ಕಾರ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.