H3N2 virus Death Cases: ಕೊರೊನಾ ಮಹಾಮಾರಿಯ ಬಳಿಕ ಇದೀಗ ದೇಶವು H3N2 ವೈರಸ್ ವಿರುದ್ಧ ಹೋರಾಡುತ್ತಿದೆ. ಕಳೆದ ಕೆಲವು ವಾರಗಳಲ್ಲಿ, ಭಾರತದಲ್ಲಿ ಇನ್ಫ್ಲುಯೆನ್ಸ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ದೇಶದ ರಾಷ್ಟ್ರೀಯ ಮತ್ತು ಆರ್ಥಿಕ ರಾಜಧಾನಿಯಲ್ಲಿ ಜ್ವರ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಆಘಾತಕಾರಿ ಸಂಗತಿ ಎಂದರೆ ಮಹಾರಾಷ್ಟ್ರದಲ್ಲಿ ಈ ವೈರಸ್‌ನಿಂದ ಇದುವರೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಇದುವರೆಗೆ 52 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಕೊರೊನಾವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ಮಾಸ್ಕ್ ಮತ್ತು ಇತರ ರಕ್ಷಣಾ ಸಾಧನಗಳಿಗೆ ಗಮನ ಕೊಡುವುದು ತುಂಬಾ ಮುಖ್ಯ ಎಂದು ವೈದ್ಯರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನವದೆಹಲಿಯ ಆಸ್ಪತ್ರೆಗಳಲ್ಲಿ H3N2 ವೈರಸ್ ಪ್ರಕರಣಗಳಲ್ಲಿ ಸುಮಾರು ಶೇ.150 ರಷ್ಟು ಹೆಚ್ಚಳವನ್ನು ಗಮನಿಸಲಾಗುತ್ತಿದೆ. ಈ ಅಬ್ಬರದ ನಡುವೆಯೇ ದೇಶದ ಆರ್ಥಿಕ ರಾಜಧಾನಿ ಮುಂಬೈನಿಂದ ಸಾವಿನ ಸುದ್ದಿ ಬೆಳಕಿಗೆ ಬಂದಿದೆ. ಎಚ್‌3ಎನ್2 ವೈರಸ್‌ನಿಂದಾಗಿ ದೇಶದಲ್ಲಿ ಇದುವರೆಗೆ ಮೂವರು ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ.


ಇದನ್ನೂ ಓದಿ-ಮನೆಯಲ್ಲಿ ಅಪಾರ ಧನವೃಷ್ಟಿ-ಸುಖ-ಸಮೃದ್ಧಿಗಾಗಿ ನಿಂಬೆಹಣ್ಣಿನ ಈ ತಂತ್ರ ಒಮ್ಮೆ ಅನುಸರಿಸಿ ನೋಡಿ!


ವೈದ್ಯರ ಪ್ರಕಾರ, ಇನ್ಫ್ಲುಯೆನ್ಸ ವೈರಸ್ ಜ್ವರ, ಶೀತ ಮತ್ತು ದೇಹದ ನೋವುಗಳಂತಹ ರೋಗಲಕ್ಷಣಗಳನ್ನು ಪ್ರಚೋದಿಸುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ನಿರಂತರ ಕೆಮ್ಮನ್ನು ಉಂಟುಮಾಡುತ್ತದೆ. ಇದು ರೋಗಿಗಳನ್ನು ತುಂಬಾ ದುರ್ಬಲಗೊಳಿಸುತ್ತದೆ. ಭಾರತದಲ್ಲಿ ಫ್ಲೂ ಪ್ರಕರಣಗಳ ಹೆಚ್ಚಳದ ಹಿಂದೆ ಎರಡು ಇನ್ಫ್ಲುಯೆನ್ಸ 'ಎ' ಮಾದರಿಯ ತಳಿಗಳು ಇವೆ. H3N2 ಜ್ವರದ ಪ್ರಬಲ ಉಪವಿಭಾಗವಾಗಿ ಹೊರಹೊಮ್ಮಿದೆ, ನಂತರ H1N1.


ಇದನ್ನೂ ಓದಿ-ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿರ್ಮೂಲನೆಗೆ ಬೆಳ್ಳುಳ್ಳಿಯ ಈ ಉಪಾಯ ಅನುಸರಿಸಿ ನೋಡಿ!


ವರದಿಗಳ ಪ್ರಕಾರ, ಮೂರನೇ ಸಾವು 23 ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯದ್ದಾಗಿದೆ. ಖಾಸಗಿ ವಿದ್ಯಾಸಂಸ್ಥೆಯೊಂದರ ವಿದ್ಯಾರ್ಥಿಯೊಬ್ಬ ಸ್ನೇಹಿತರೊಂದಿಗೆ ಹೊರಗೆ ಹೋಗುತ್ತಿದ್ದಾಗ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅವರ ರಕ್ತದಲ್ಲಿ ಎಚ್3ಎನ್2 ವೈರಸ್‌ನ ಕುರುಹುಗಳು ಪತ್ತೆಯಾಗಿವೆ ಎನ್ನಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ