ನವದೆಹಲಿ: ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಭಾರತ್ ರತ್ನಕ್ಕೆ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಹೆಸರನ್ನು ಬಿಜೆಪಿ ಪ್ರಸ್ತಾಪಿಸಿರುವ ಮಧ್ಯೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 1857 ರ ದಂಗೆಯನ್ನು ಭಾರತೀಯ ಸ್ವಾತಂತ್ರ್ಯದ ಮೊದಲ ಸಂಗ್ರಾಮ ಎಂದು ಕರೆದ ಕೀರ್ತಿ ಸಾವರ್ಕರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ಸೆಮಿನಾರ್‌ನಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ 'ವೀರ್ ಸಾವರ್ಕರ್ ಇಲ್ಲದಿದ್ದರೆ, 1857 ರ ದಂಗೆ ಇತಿಹಾಸವಾಗುತ್ತಿರಲಿಲ್ಲ, ನಾವು ಅದನ್ನು ಬ್ರಿಟಿಷರ ದೃಷ್ಟಿಕೋನದಿಂದ ನೋಡುತ್ತಿದ್ದೆವು. 1857 ರ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಹೆಸರಿಸಿದವರು ವೀರ್ ಸಾವರ್ಕರ್ ಎಂದು ಹೇಳಿದರು. 


ಬಿಎಚ್‌ಯು ಕ್ಯಾಂಪಸ್‌ನಲ್ಲಿ ಗುಪ್ತಾ ರಾಜವಂಶದ ಪ್ರಸಿದ್ಧ ಆಡಳಿತಗಾರ, ಸ್ಕಂದಗುಪ್ತ್ ವಿಕ್ರಮಾದಿತ್ಯ ಮತ್ತು ರಾಷ್ಟ್ರದ ರಾಜಕೀಯ ಭವಿಷ್ಯದ ಪಾತ್ರ ಮತ್ತು ಪ್ರಸ್ತುತತೆ ಕುರಿತು ಚರ್ಚಿಸಲು ನಡೆಯುತ್ತಿರುವ ಎರಡು ದಿನಗಳ ಅಂತರರಾಷ್ಟ್ರೀಯ ಸೆಮಿನಾರ್ ಅನ್ನು ಷಾ ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.


ಇದೇ ವೇಳೆ ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರನ್ನು ಸ್ಮರಿಸಿದ ಶಾ, ಬಿಎಚ್‌ಯು ಸ್ಥಾಪಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು, ಸ್ವಾತಂತ್ರ್ಯದ ನಂತರ ರಾಷ್ಟ್ರವನ್ನು ಪುನರ್ನಿರ್ಮಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. 'ಬಿಎಚ್‌ಯು ಸ್ಥಾಪನೆಯ ಸಮಯದಲ್ಲಿ ಮದನ್ ಮೋಹನ್ ಮಾಲ್ವಿಯಾಜಿ ಅವರ ಮನಸ್ಸಿನಲ್ಲಿ ಏನೇ ಇರಲಿ, ಆದರೆ ಈ ವಿಶ್ವವಿದ್ಯಾಲಯವು ಹಿಂದೂ ಸಂಸ್ಕೃತಿಯನ್ನು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಅದನ್ನು ರಕ್ಷಿಸಲು ಬೃಹದಾಕಾರವಾಗಿ ನಿಂತಿದೆ ಎಂದು ಶಾ ಹೇಳಿದರು.