`ಸುಪ್ರೀಂ` ಕೋರ್ಟ್ ವಿಚಾರಣೆ ಎದುರಿಸಲು ದೆಹಲಿಗೆ ಬಂದ ಹಾಡಿಯಾ
ನವದೆಹಲಿ: ಲವ್ ಜಿಹಾದ್ ಎಂದು ಬಿಂಬಿತವಾಗಿರುವ ಕೇರಳದ ಹಾಡಿಯಾ ಪ್ರಕರಣ ಈಗ ಸುಪ್ರಿಂಕೋರ್ಟ್ ಅಂಗಳಕ್ಕೆ ಬಂದು ತಲುಪಿದೆ.ಈ ಪ್ರಕರಣದ ವಿಚಾರಣೆಯು ದಿನಾಂಕ 27 ರ ನವಂಬರ್ ರಂದು ಸುಪ್ರಿಂಕೋರ್ಟ್ ನಲ್ಲಿ ನಡೆಯಲಿದೆ.ಆದ್ದರಿಂದಾಗಿ ಈ ಪ್ರಕರಣದ ವಿಚಾರಣೆಯ ಹಿನ್ನಲೆಯಲ್ಲಿ ಹಾಡಿಯಾ ಶನಿವಾರದಂದು ದೆಹಲಿಗೆ ಆಗಮಸಿದ್ದಾರೆ.ಇದಕ್ಕೂ ಮೊದಲು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ"ನಾನು ಮುಸ್ಲಿಂ ಧರ್ಮದವಳು ನನ್ನ ಪತಿಯ ಜೊತೆಗೆ ನಾನು ಹೋಗಬೇಕಾಗಿದೆ,ನನ್ನ್ಯಾರು ಕೂಡಾ ಈ ವಿಷಯವಾಗಿ ಒತ್ತಾಯ ಮಾಡಿಲ್ಲ" ಎಂದು ಈ ಸಂಧರ್ಭದಲ್ಲಿ ಸ್ಪಷ್ಟಪಡಿಸಿದರು.
24 ವರ್ಷದ ಹಾಡಿಯಾ ಎನ್ನುವ ಮಹಿಳೆ ಶಫಿನ್ ಜಹಾನ್ ಎನ್ನುವ ಯುವಕನನ್ನು ವರಿಸಿದಂದಿನಿಂದ ಲವ್ ಜಿಹಾದ್ ಎಂದು ಈ ವಿಷಯ ಮಾಧ್ಯಮಗಳಲ್ಲಿ ಬಹಳ ಸುದ್ದಿ ಮಾಡಿತ್ತು.ಮತ್ತು ಹಾಡಿಯಾನ ತಂದೆ ತಾಯಿಗಳು ಸಹಿತ ಅವಳ ಮದುವೆ ಲವ್ ಜಿಹಾದ್ ಎಂದು ಆರೋಪಿಸಿ ಕೇರಳದ ಹೈಕೋರ್ಟ್ ನ ಮೆಟ್ಟಿಲೇರಿದ್ದರು. ಆಗ ಕೋರ್ಟ್ ರಾಷ್ಟ್ರೀಯ ತನಿಖಾ ದಳದ ಮೂಲಕ ಈ ವಿಷಯವನ್ನು ಪರಿಶೀಲಿಸುವಂತೆ ಮನವಿಯನ್ನು ಮಾಡಿತ್ತು.ಆದರೆ ಜಹಾನ್ ಸೆಪ್ಟೆಂಬರ್ 16 ರಂದು ಈ ತನಿಖಾದಳ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿಲ್ಲ್ಲ ಆದ್ದರಿಂದ ಅದರ ಮೂಲಕ ನಡೆಯುತ್ತಿರುವ ತನಿಖೆ ನಿಲ್ಲಿಸಿ ಎಂದು ಸುಪ್ರಿಂಕೋರ್ಟ್ ಮೊರೆ ಹೋಗಿದ್ದರು.ನವಂಬರ್ 21 ರಂದು ಹಾಡಿಯಾ ತಂದೆ ಹೊಸ ಅರ್ಜಿ ಮೂಲಕ ಆಡಿಯೋ ಮತ್ತು ವಿಡಿಯೋ ವಿಚಾರಣೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕೇಳಿದ್ದರು.
ಈಗ ಇದೆ ನವಂಬರ್ 23ರಂದು ರಾಷ್ಟ್ರೀಯ ತನಿಖಾದಳ ತನ್ನ ಸಂಪೂರ್ಣ ವರದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ಗೆ ಸಲ್ಲಿಸಿದೆ.ಆದ್ದರಿಂದ ಈ ಕೇಸ್ ನ ವಿಚಾರಣೆಯು ನವಂಬರ್ 27 ರ ಸೋಮವಾರದಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯಲಿದೆ.