ಸುಪ್ರಿಂಕೋರ್ಟ್ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ ಹಾಡಿಯಾಳ ತಂದೆ
ನವದೆಹಲಿ : ಸುಪ್ರಿಂಕೋರ್ಟ್ ಹಾಡಿಯಾಗೆ ಮರಳಿ ಅಧ್ಯಯನಕ್ಕೆ ಮರಳುವಂತೆ ನಿರ್ದೇಶನ ನೀಡಿರುವುದು ಹಾಡಿಯಾ ತಂದೆ ಕೆ.ಎಂ.ಅಶೋಕನ್ ಸಂತಸ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಡೆದ ಹಾಡಿಯಾ ಪ್ರಕರಣದ ವಿಚಾರಣೆಯಲ್ಲಿ ಸುಪ್ರಿಂಕೋರ್ಟ್ ಅವಳ ವಿಧ್ಯಾಭ್ಯಾಸದ ವಿಚಾರವಾಗಿ ಈಗಾಗಲೇ ಕೋರ್ಟ್ ಕಾಲೇಜು ಮತ್ತು ವಿಶ್ವವಿದ್ಯಾಲಯಕ್ಕೆ ಮರು ಪ್ರವೇಶಾತಿಯನ್ನು ಕಲ್ಪಿಸಬೇಕೆಂದು ಆಜ್ಞೆ ಮಾಡಿತ್ತು ಅಲ್ಲದೆ ಸೇಲಂ ನ ಹೋಮಿಯೋಪತಿ ಕಾಲೇಜಿನ ಡೀನ್ ರನ್ನು ಅಲ್ಲಿನ ಸ್ಥಳೀಯ ಪೋಷಕರೆಂದು ಹೇಳಿದೆಯಲ್ಲದೆ ಅವರೇ ಅವಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಿದ್ದಾರೆ ಎಂದು ಅದು ತನ್ನ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿತ್ತು. ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಹಾಡಿಯಾಳ ತಂದೆ ಅಶೋಕನ್ "ಈಗ ಸುಪ್ರಿಂ ಕೋರ್ಟ್ ನಿರ್ಧಾರದಿಂದ ಸಂತಸವಾಗಿದೆ, ನಾವೆಂದು ಅವಳಿಗೆ ಕಿರುಕುಳ ನೀಡಿಲ್ಲ". ನಾನು ಯಾವಾಗಲೂ ಅವಳು ಅಧ್ಯಯನ ಮಾಡಬೇಕೆಂದು ಬಯಸಿದವನು ಎಂದು ಸುದ್ದಿಗಾರರಿಗೆ ತಿಳಿಸಿದರು.
ಹಾಡಿಯಾ ಪೋಷಕರು ಅವಳ ವಿವಾಹ 'ಲವ್ ಜಿಹಾದ್' ಎಂದು ಕೋರ್ಟ್ ನ ಮೆಟ್ಟಿಲೇರಿದ್ದು ಮಾಧ್ಯಮಗಳಲ್ಲಿ ಬಹಳ ಸುದ್ದಿಯಾಗಿತ್ತು.