Hafta Vasooli Case: ಹಫ್ತಾ ವಸೂಲಿ ಪ್ರಕರಣ - ಅನೀಲ್ ದೇಶ್ಮುಖ್ ಗೆ ಭಾರಿ ಹಿನ್ನಡೆ, CBI ತನಿಖೆಗೆ HC ಆದೇಶ
Hafta Vasooli Case - ಮಾಜಿ ಮುಂಬೈ ಪೊಲೀಸ್ ಕಮೀಷನರ್ ಪರಂಬೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ತನಿಖೆ ನಡೆಸಲು ಆದೇಶಿಸಿದೆ.
ಮುಂಬೈ: Hafta Vasooli Case - ಮಹಾರಾಷ್ಟ್ರದ ಗೃಹ ಸಚಿವ (Maharashtra Home Minister) ಅನೀಲ್ ದೇಶ್ಮುಖ್ (Anil Deshmukh) ವಿರುದ್ಧ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಮುಂಬೈನ ಉಚ್ಛ ನ್ಯಾಯಾಲಯ, ಇದೊಂದು ಅಸಾಧಾರಣ ಪ್ರಕರಣ ಎಂದು ಹೇಳಿದ್ದು, ಪರಂಬೀರ್ ಸಿಂಗ್ (Parambeer Singh) ಅವರ ಆರೋಪಗಳು ತುಂಬಾ ಗಂಭೀರವಾಗಿವೆ ಎಂದಿದೆ. ಹೀಗಾಗಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು 15 ದಿನಗಳಲ್ಲಿ ಪ್ರಾಥಮಿಕ ತನಿಖೆ ಆರಂಭಿಸುವಂತೆ ಹೈಕೋರ್ಟ್ ಸಿಬಿಐಗೆ (CBI)ಸೂಚಿಸಿದೆ.
'ಸ್ಥಳೀಯ ಪೊಲೀಸರು ತನಿಖೆ ನಡೆಸಿದರೆ ಪ್ರಶ್ನೆಗಳು ಉದ್ಭವಿಸಲಿವೆ'
ಪ್ರಕರಣದ ವಿಚಾರಣೆಯ ವೇಳೆ ಇದೊಂದು ಗಂಭೀರ ಪ್ರಕರಣವಾಗಿದೆ ಎಂದು ಹೇಳಿರುವ ಬಾಂಬೆ ಹೈಕೋರ್ಟ್ (Bombay High Court), ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬೇಕು. ಒಂದು ವೇಳೆ ಇಂತಹ ಪ್ರಕರಣಗಳ ತನಿಖೆ ಸ್ಥಳೀಯ ಪೊಲೀಸರು ನಡೆಸಿದರೆ, ಜನರ ವಿಶ್ವಾಸಕ್ಕೆ ಚ್ಯುತಿ ಬರಲಿದೆ. ಹೀಗಾಗಿ ಮುಂದಿನ 15ದಿನಗಳೊಳಗೆ CBI ತನ್ನ ಆರಂಭಿಕ ತನಿಖೆಯನ್ನು ಕೈಗೊಂಡು ಹೈಕೋರ್ಟ್ ಗೆ ವರದಿ ಸಲ್ಲ್ಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಇದನ್ನೂ ಓದಿ- "ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದು ವಿಕಾಸ್ ಅಲ್ಲ, ವಸೂಲಿ"
Param Bir Sing Letter Controversy- ರಾಜೀನಾಮೆ ನೀಡುತ್ತಾರೆಯೇ ಅನಿಲ್ ದೇಶ್ಮುಖ್? ಶರದ್ ಪವಾರ್ ಹೇಳಿದ್ದೇನು?
ಮಾಜಿ ಪೊಲೀಸ್ ಆಯುಕ್ತರಿಂದ ಗಂಭೀರ ಆರೋಪಗಳು
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲ ಭಗತ್ ಸಿಂಗ್ ಕೊಶಾರಿ ಅವರಿಗೆ ಪತ್ರ ಬರೆದಿದ್ದ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್, ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ (Anil Deshmukh) ಅವರ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಮುಂಬೈ ಪೊಲೀಸರು ಮುಂಬೈನಲ್ಲಿರುವ ಬಾರ್ ಹಾಗೂ ರೆಸ್ಟೋರೆಂಟ್ ಗಳ ಮಾಲೀಕರಿಂದ 100 ಕೋಟಿ ರೂ ವಸೂಲಿ ಮಾಡಿ ಅವರಿಗೆ ತಲುಪಿಸುವಂತೆ ಅನಿಲ್ ದೇಶ್ಮುಖ್ ಅವರು ಮುಂಬೈ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ಪರಂಬೀರ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ಇದೆ ವೇಳೆ ಪ್ರಕರಣಕ್ಕೆ ಸಬಂಧಿಸಿದಂತೆ ಮುಂಬೈ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಅವರು ದಾಖಲಿಸಿದ್ದರು. ತಮ್ಮ ಅರ್ಜಿಯಲ್ಲಿ ಅವರು ಮಹಾರಾಷ್ಟ್ರದ ಗೃಹ ಸಚಿವ ಅನೀಲ್ ದೇಶ್ಮುಖ್ ವಿರುದ್ಧ CBI ನಡೆಸುವಂತೆ ಅವರು ನ್ಯಾಯಾಲಯವನ್ನು ಆಗ್ರಹಿಸಿದ್ದರು.
ಇದನ್ನೂ ಓದಿ- ಪರಮ್ ಬೀರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ - ಅನಿಲ್ ದೇಶ್ ಮುಖ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.